ಬಿಗ್ ಬಾಸ್ ಲವ್ವಿ ಡವ್ವಿ : ದೊಡ್ಮನೆಯಲ್ಲಿ ಮಿಂಚಿದ ಜೋಡಿ ಹಕ್ಕಿಗಳಿವು

Published : Jan 11, 2023, 05:12 PM ISTUpdated : Jan 12, 2023, 10:05 AM IST

ಬಿಗ್ ಬಾಸ್ ಕನ್ನಡ (Bigg Boss Kannada) ಪ್ರೇಕ್ಷಕರಲ್ಲಿ ಜನಪ್ರಿಯತೆಯನ್ನು ಗಳಿಸಿದೆ. ಇದು ಬಹು ನಿರೀಕ್ಷಿತ ದೂರದರ್ಶನ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಬಿಗ್ ಬಾಸ್ ಎಂದರೆ ಅದರಲ್ಲಿ ಒಂದಷ್ಟು ವಿವಾದಗಳು, ಗಾಸಿಪ್ ಗಳು, ಜಗಳ, ಜೊತೆಗೆ ಒಂದಿಷ್ಟು ಲವ್ವಿ, ಡವ್ವಿ ಎಲ್ಲವೂ ಕಾಮನ್. ಇಲ್ಲಿದೆ ಬಿಗ್ ಬಾಸ್ ನಲ್ಲಿ ಹೆಚ್ಚು ಸದ್ದು ಮಾಡಿದ ಪ್ರೇಮ ಕತೆಗಳು.   

PREV
111
ಬಿಗ್ ಬಾಸ್ ಲವ್ವಿ ಡವ್ವಿ : ದೊಡ್ಮನೆಯಲ್ಲಿ ಮಿಂಚಿದ ಜೋಡಿ ಹಕ್ಕಿಗಳಿವು
ತಿಲಕ್ ಮತ್ತು ಶ್ವೇತಾ ಪಂಡಿತ್ (Tilak and Shwetha Pandit)

ಬಿಗ್ ಬಾಸ್ ಕನ್ನಡ ಸೀಸನ್ 1ರಲ್ಲಿ ಶ್ವೇತಾ ಮತ್ತು ತಿಲಕ್ ಸಾಕಷ್ಟು ಹತ್ತಿರವಾಗಿದ್ದರು. ಅವರಿಬ್ಬರು ಹೆಚ್ಚು ಕ್ಲೋಸ್ ಆಗುತ್ತಿರೋದನ್ನು ನೋಡಿ ಇತರ ಮಹಿಳಾ ಕಂಟೆಸ್ಟಂಟ್ ಗಳು ಸಹ ಹೆದರಿದ್ದರು. ಅನೇಕ ಮಹಿಳಾ ಸ್ಪರ್ಧಿಗಳು ಶ್ವೇತಾಗೆ ಅವನೊಂದಿಗೆ ಹೆಚ್ಚು ಬೆರೆಯಬೇಡಿ ಎಂದು ಸಲಹೆ ನೀಡಿದ್ದರು. 

211
ಎನ್.ವಿ. ಅಯ್ಯಪ್ಪ ಮತ್ತು ಪೂಜಾ ಗಾಂಧಿ (NV Aiyappa and Pooja Gandhi)

ಕ್ರಿಕೆಟಿಗರು ಮತ್ತು ನಟಿಯರ ರಿಲೇಶನ್ ಶಿಪ್ ಕಾಮನ್. ಬಿಗ್ ಬಾಸ್ ಸೀಸನ್ 3 ರ ಸ್ಪರ್ಧಿಗಳಾದ ಕ್ರಿಕೆಟರ್ ಅಯ್ಯಪ್ಪ ಮತ್ತು ನಟಿ ಪೂಜಾ ಗಾಂಧಿ ಸಹ ದೊಡ್ಡ ಮನೆಯಲ್ಲಿ ಹೆಚ್ಚು ಹತ್ತಿರವಾಗಿದ್ದರು. ಅಯ್ಯಪ್ಪ ಅವರನ್ನು ಬಿಗ್ ಬಾಸ್ ಸೀಸನ್ 03 ರ 'ಲವರ್ ಬಾಯ್' ಎಂದು ಕರೆಯಲಾಗುತ್ತಿತ್ತು. ಇದು ಬಿಗ್ ಬಾಸ್ ಮನೆಯ ಅತ್ಯಂತ ವಿವಾದಾತ್ಮಕ ಪ್ರೇಮಕಥೆಗಳಲ್ಲಿ ಒಂದಾಗಿದೆ. 

311
ಪ್ರಥಮ್, ಭುವನ್ ಮತ್ತು ಸಂಜನಾ (Pratham, Bhuvan and Sanjana)

ಈ ತ್ರಿಕೋನ ಪ್ರೇಮಕಥೆಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಬಿಗ್ ಬಾಸ್ ಸೀಸನ್ 4 ರಲ್ಲಿ ಕಿರುತೆರೆಯಲ್ಲಿ ಹೆಚ್ಚು ಸದ್ದು ಮಾಡಿದ ತ್ರಿಕೋನ ಪ್ರೇಮಕಥೆ ಇದು. ಆರಂಭದಲ್ಲಿ 'ಕಿರಿಕ್ ಬಾಯ್' ಎಂದು ಕರೆಯಲ್ಪಡುತ್ತಿದ್ದ ಪ್ರಥಮ್ 'ಲವರ್ ಬಾಯ್' ಆಗಿ ಬದಲಾದರು. ಪ್ರಥಮ್ ಮಧ್ಯಪ್ರವೇಶಿಸುವವರೆಗೂ ಭುವನ್ ಮತ್ತು ಸಂಜನಾ ಪ್ರೀತಿಸುತ್ತಿದ್ದರು. ನಂತರ ಮೂವರ ಪ್ರೇಮಕಥೆ ಭಾರಿ ಸದ್ದು ಮಾಡಿತ್ತು.
 

411
ಆಶಿತಾ ಚಂದ್ರಪ್ಪಾ, ಜಗನ್ನಾಥ್ (Ashitha Chandrappa and Jagannath)

ಇವರಿಬ್ಬರು ಬಿಗ್ ಬಾಸ್ ಸೀಸನ್ 5ರಲ್ಲಿ ಮನೆಯೊಳಗೆ ಇರುವವರೆಗೆ ಇಬ್ಬರ ಕೆಮೆಸ್ಟ್ರಿ ಚೆನ್ನಾಗಿಯೇ ಇತ್ತು. ಅವರಿಬ್ಬರೂ ತಮ್ಮನ್ನು ತಾವು ಕೇವಲ ಉತ್ತಮ ಸ್ನೇಹಿತರು ಎಂದು ಸಂಬೋಧಿಸುತ್ತಲೇ ಇದ್ದರು. ಆಶಿತಾ ಜಗನ್ ಅವರ ಕೆನ್ನೆಗೆ ಕಿಸ್ ನೀಡುವವರೆಗೂ ಎಲ್ಲವೂ ಚೆನ್ನಾಗಿತ್ತು. ಇದು ಹಾಟ್ ಟಾಪಿಕ್ ಗಳಲ್ಲಿ ಒಂದಾಗಿದೆ ಮತ್ತು ಜನರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು.

511
ಶ್ರುತಿ ಪ್ರಕಾಶ್, ಜೆಕೆ, ಚಂದನ್ ಶೆಟ್ಟಿ (Shruthi Prakash, JK and Chandan Shetty)

ಬಿಗ್ ಬಾಸ್ ಸೀಸನ್ 5ರಲ್ಲಿ ಇದು ಖಂಡಿತವಾಗಿಯೂ ಅತ್ಯಂತ ಸುಂದರವಾದ ಪ್ರೇಮಕಥೆಗಳಲ್ಲಿ ಒಂದಾಗಿದೆ. ಈ ಮೂವರು ಎಂದಿಗೂ ಯಾವುದೇ ರೀತಿಯ ವಾದಗಳು ಅಥವಾ ಜಗಳಗಳಲ್ಲಿ ಭಾಗಿಯಾಗಲಿಲ್ಲ ಆದರೆ ಪರಸ್ಪರರ ಭಾವನೆಗಳನ್ನು ಗೌರವಿಸುತ್ತಿದ್ದರು. ಚಂದನ್ ಶೆಟ್ಟಿ ಅವರು ಶೃತಿ ಪ್ರಕಾಶ್ ಅವರ ಬಗ್ಗೆ ತಮ್ಮ ಫೀಲಿಂಗ್ಸ್ ಒಪ್ಪಿಕೊಂಡಿದ್ದರು. ಚಂದನ್ ಮನೆಯಲ್ಲಿ ಶ್ರುತಿಗಾಗಿ ಒಂದು ಹಾಡನ್ನು ಸಹ ಸಂಯೋಜಿಸಿದ್ದರು, ಅದು ಅನೇಕ ಹೃದಯಗಳನ್ನು ಗೆದ್ದಿತು.

611
ಕವಿತಾ ಮತ್ತು ಶಶಿ ಕುಮಾರ್ (Kavitha Gowda and Shashi Kumar)

ಬಿಗ್ ಬಾಸ್ 6ರಲ್ಲಿ ಕವಿತಾ ಗೌಡ ಮತ್ತು ಶಶಿ ಕುಮಾರ್ ಲವ್ ಸ್ಟೋರಿ ಟಾಕ್ ಆಫ್ ದ ಟೌನ್ ಆಗಿತ್ತು. ಇಬ್ಬರೂ ಜೊತೆಯಾಗಿ ಹೆಚ್ಚಿನ ಸ್ಕ್ರೀನ್ ಟೈಮ್ ಸಹ ಶೇರ್ ಮಾಡಿದ್ದರು. ಬಿಗ್ ಬಾಸ್ ಟಾಸ್ಕ್ ನಂತೆ ಇಬ್ಬರ ಕ್ಯಾಂಡಲ್ ಲೈಟ್ ಡಿನ್ನರ್ ಡೇಟ್ ಸಹ ನಡೆದಿತ್ತು. ಆದರೆ ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಇಬ್ಬರೂ ಸ್ನೇಹಿತರು ಅಷ್ಟೇ ಎಂದು ಹೇಳಿದ್ದರು.

711
ಅಕ್ಷತಾ ಮತ್ತು ರಾಕೇಶ್ (Akshatha and Rakesh)

ಅವರ ಪ್ರೇಮಕಥೆ ಆ ದಿನಗಳಲ್ಲಿನ ಅತ್ಯಂತ ವಿವಾದಾತ್ಮಕ ಪ್ರೇಮಕಥೆಗಳಲ್ಲಿ ಒಂದಾಗಿದೆ. ಅಕ್ಷತಾ ಮತ್ತು ರಾಕೇಶ್ ಯಾವಾಗಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು ಮತ್ತು ಎಲ್ಲರಿಂದಲೂ ಅಂತರ ಕಾಯ್ದುಕೊಳ್ಳುತ್ತಿದ್ದರು. ಅವರಿಬ್ಬರೂ ಹೆಚ್ಚಿನ ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದರು. ಅಕ್ಷತಾ ಕೂಡ ತಾನು ಅವನನ್ನು ಪ್ರೀತಿಸುತ್ತೇನೆ ಆದರೆ ಸ್ನೇಹಿತನಾಗಿ ಮಾತ್ರ ಎಂದು ಹೇಳಿಕೊಂಡಿದ್ದರು.. ಇದು ಮನೆಯಲ್ಲಿ ಹಾಟ್ ಟಾಪಿಕ್ ಆಗಿತ್ತು.

811
ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ (Shine Shetty and Deepika Das)

ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಅವರ ಬೆಳೆಯುತ್ತಿರುವ ಗೆಳೆತನವು ಬಿಗ್ ಬಾಸ್ ಕನ್ನಡ ಸೀಸನ್ 7 ರ ಪ್ರಾರಂಭದಿಂದಲೂ ಸಂಚಲನ ಸೃಷ್ಟಿಸಿತ್ತು. ಶೈನ್ ಮೊದಲಿನಿಂದಲೂ ದೀಪಿಕಾ ಬಗ್ಗೆ ಆಸಕ್ತಿ ತೋರಿಸಿದ್ದರು. ಆದರೆ ದೀಪಿಕಾ ಆರಂಭದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದಾಗ್ಯೂ, ದೀಪಿಕಾ ತನ್ನ ಸೀಕ್ರೆಟ್ ಟಾಸ್ಕ್ ಭಾಗವಾಗಿದ್ದ ಶೈನ್ ಶೆಟ್ಟಿಯ ಗಡ್ಡ ತೆಗೆಸುವ ಟಾಸ್ಕ್ ನಲ್ಲಿ ಸಕ್ಸಸ್ ಆಗಿ, ಶೈನ್ ಗಡ್ಡ ತೆಗೆದ ಬಳಿಕ, ಇಬ್ಬರ ನಡುವೆ ಸ್ನೇಹ ಹೆಚ್ಚಾಯಿತು ಎಂದೇ ಹೇಳಬಹುದು. 

911
ದಿವ್ಯಾ ಉರುಡುಗ ಮತ್ತು ಅರವಿಂದ ಕೆ.ಪಿ.  (Divya Uruduga and Aravind KP)

ಬಿಗ್ ಬಾಸ್ 8 ರಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿದ ಜೋಡಿಗಳು ಎಂದರೆ ದಿವ್ಯಾ ಉರುಡುಗ ಮತ್ತು ಅರವಿಂದ ಕೆ.ಪಿ. ಬಿಗ್ ಬಾಸ್ 8 ಸೀಸನ್ 8 ಪೂರ್ತಿಯಾಗಿ ಈ ಜೋಡಿ ಸಖತ್ತಾಗಿ ಮಿಂಚಿದ್ದರು. ಈ ಮುದ್ದಾದ ಜೋಡಿಗೆ ಫ್ಯಾನ್ಸ್ ಸಂಖ್ಯೆ ಕೂಡ ಹೆಚ್ಚಿದೆ. ಅರ್ವಿಯಾ ಎಂದೆ ಜನಪ್ರಿಯತೆ ಗಳಿಸಿರುವ ಈ ಜೋಡಿಗಳು, ಬಿಗ್ ಬಾಸ್ ನಿಂದ ಹೊರ ಬಂದಮೇಲೂ ಜೊತೆ ಜೊತೆಯಾಗಿಯೇ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದಾರೆ. 

1011
ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್  (Roopesh Shetty and Sanya Aiyyer)

ಬಿಗ್ ಬಾಸ್ ಓಟಿಟಿಯಲ್ಲಿ ಕಾಣಿಸಿಕೊಂಡ ರೂಪೇಶ್ ಶೆಟ್ಟಿ ಮತ್ತು ಸಾನ್ಯಾ ಐಯ್ಯರ್ ಬಳಿಕ ಬಿಗ್ ಬಾಸ್ 9 ಸೀಸನ್ ನಲ್ಲೂ ಹೆಚ್ಚಾಗಿ ಜೊತೆಯಾಗಿಯೇ ಕಾಣಿಸಿಕೊಂಡಿದ್ದರು. ಇವರಿಬ್ಬರ ಕ್ಲೋಸ್ ನೆಸ್ ಟಾಕ್ ಆಫ್ ದಿ ಟೌನ್ ಆಗಿತ್ತು, ಸಾನ್ಯಾ, ರೂಪೇಶ್ ಶೆಟ್ಟಿಗೆ ಅಂಟಿಕೊಂಡೇ ಇರುತ್ತಿದ್ದ ಕಾರಣ, ಜನರು ಸಹ ಕಿಡಿ ಕಾರಿದ್ದರು. ಒಟ್ಟಾಗಿ ಈ ಜೋಡಿ ಸಹ ಸಖತ್ ಮುದ್ದಾಗಿಯೇ ಕಾಣಿಸುತ್ತಿದ್ದರು.

1111
ವಾಸುಕಿ ವೈಭವ್ ಮತ್ತು ಚಂದನಾ

ಮತ್ತೊಂದು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಚಂದನಾ ಮದ್ದು ಸಿಂಗರ್ ವಾಸುಕಿ ವೈಭವ್ ಜೊತೆ ಏನೋ ವಿಶೇಷ ಭಾವ ಮೂಡಿದನ್ನು ವೀಕ್ಷಕರು ಆರಾಮಾಗಿ ಗಮನಿಸಬಹುದಿತ್ತು. ಇವರಿಬ್ಬರು ಸ್ನೇಹ ಇಂದಿಗೂ ಮುಂದುವರಿದಿದ್ದು, ಕೇವಲ ಸ್ನೇಹಿತರು ಮಾತ್ರ ಎನ್ನಲಾಗುತ್ತಿದೆ. 

Read more Photos on
click me!

Recommended Stories