ಸದಾ ಲಂಗಾ ದಾವಣಿಯಲ್ಲಿ ಕಾಣಿಸಿಕೊಂಡ ಕಿರುತೆರೆ ನಟಿ ಅಂಕಿತಾ 2 ಪೀಸ್‌ ಲುಕ್ ವೈರಲ್!

Published : Jan 12, 2023, 03:52 PM IST

ಕಮಲಿ ಸೀರಿಯಲ್ ಅಭಿಮಾನಿಗಳು ನೀವಾಗಿದ್ದರೆ ಅಂಕಿತಾ ಖಂಡಿತಾವಾಗಿಯೂ ನಿಮಗೆ ಪರಿಚಯ ಇದ್ದೇ ಇರುತ್ತೆ. ಯಾರಪ್ಪಾ ಅಂಕಿತಾ ಅಂದ್ರಾ? ಈ ಅಂಕಿತಾ ಬೇರೆ ಯಾರೂ ಅಲ್ಲ ಕಮಲಿಯ ಬೆಸ್ಟ್ ಫ್ರೆಂಡ್ ನಿಂಗಿ. ಪಕ್ಕಾ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡ ಅಂಕಿತಾ, ಇದೀಗ ಬೋಲ್ಡ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ.   

PREV
18
ಸದಾ ಲಂಗಾ ದಾವಣಿಯಲ್ಲಿ ಕಾಣಿಸಿಕೊಂಡ ಕಿರುತೆರೆ ನಟಿ ಅಂಕಿತಾ 2 ಪೀಸ್‌ ಲುಕ್ ವೈರಲ್!

ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಜ ಜೀವನದಲ್ಲಿ ಪಕ್ಕಾ ಮಾಡರ್ನ್ (modern girl Ankita) ಆಗಿರುವ ಕ್ಲಾಸಿ ಹುಡುಗಿ ನಿಂಗಿ ಅಲಿಯಾಸ್ ಅಂಕಿತಾ. ಇವರು ಕಮಲಿ ಧಾರಾವಾಹಿ ಮೂಲಕ ಸೀರಿಯಲ್ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸೀರಿಯಲ್ ನಲ್ಲಿ ಯಾವಾಗಲೂ ಲಂಗ ದಾವಣಿಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಅಂಕಿತಾ, ಇದೀಗ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಮಾಲ್ಡೀವ್ಸ್ ಹನಿಮೂನ್ ಟ್ರಿಪ್ ಫೋಟೋಗಳನ್ನು ಹಾಕಿದ್ದಾರೆ. ಈ ಫೋಟೋ ನೋಡಿದ್ರೆ ಕಮಲಿಯ ನಿಂಗಿ ಇವ್ರೇನಾ? ಅಂಥಾ ನೀವೆ ಕಣ್ಣು ಕಣ್ಣು ಬಿಟ್ಟು ನೋಡ್ತೀರಿ. 

28

ಕಳೆದ ವರ್ಷ ಆಗಸ್ಟ್ ನಲ್ಲಿ ತಮ್ಮ ಬೆಸ್ಟ್ ಫ್ರೆಂಡ್ ಸುಹಾಸ್ ಕುಮಾರಸ್ವಾಮಿ ಎಂಬುವವರ ಜೊತೆ ಅಂಕಿತಾ ಮದುವೆ ಅದ್ಧೂರಿಯಾಗಿ ನಡೆದಿತ್ತು. ಕೆನಡಾದಲ್ಲಿ ಸುಹಾಸ್ ನೆಲೆಸಿದ್ದು, ಫೋಟೋಗ್ರಾಫರ್ ಆಗಿ ಸುಹಾಸ್ ಕೆಲಸ ಮಾಡುತ್ತಿದ್ದಾರೆ. ಇವರಿಬ್ಬರದು 8 ವರ್ಷಗಳ ಪ್ರೀತಿಯಾಗಿತ್ತು. ಮದುವೆ ಬಳಿಕ ನವ ಜೋಡಿಗಳು ಮಾಲ್ಡೀವ್ಸ್‌ಗೆ ಹನಿಮೂನಿಗೆ ತೆರಳಿದ್ದರು. ಅಲ್ಲಿನ ಫೋಟೋಗಳು ಇದೀಗ ಸಾಕಷ್ಟು ಸದ್ದು ಮಾಡುತ್ತಿವೆ. 
 

38

ಕಮಲಿ ಸೀರಿಯಲ್ ನಲ್ಲಿ ಸದಾ ಲಂಗ, ದಾವಣಿಯಲ್ಲಿ ಕಾಣಿಸಿಕೊಳ್ಳುವ ನಿಂಗಿ ಆಲಿಯಾಸ್ ಅಂಕಿತಾ ತುಂಡುಡುಗೆಯಲ್ಲಿ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಬೋಲ್ಡ್ ಆಗಿ ಫೋಸ್ (bold photos) ನೀಡಿದ್ದಾರೆ. ಇವರ ಈ ಹೊಸ ಅವತಾರ ನೋಡಿ ಇವರೇನಾ ಹಳ್ಳಿ ಹುಡುಗಿ ನಿಂಗಿ ಅಂತಾ ಹುಬ್ಬೇರಿಸುತ್ತಿದ್ದಾರೆ ಜನ.
 

48

ಇನ್ನು ಅಂಕಿತಾ ಬಗ್ಗೆ ಹೇಳಬೇಕಂದ್ರೆ ಬಾಲ್ಯದಿಂದಲೂ ಅಭಿನಯದಲ್ಲಿ ಅಸಕ್ತಿ ಹೊಂದಿದ್ದ ಅಂಕಿತಾ ಓದಿದ್ದು ಇಂಜಿನಿಯರಿಂಗ್. ಎರಡು ವರ್ಷಗಳ ಕಾಲ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿ, ಬಳಿಕ ಅಭಿನಯ ಜಗತ್ತಿಗೆ ಕಾಲಿಟ್ಟರು. ಇವರು ಜೀ ಕನ್ನಡ ವಾಹಿನಿಯ 'ಕಮಿಲಿ' ಧಾರಾವಾಹಿಯಲ್ಲಿ (Kamali serial)  'ನಿಂಗಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಉದಯ ವಾಹಿನಿಯ 'ಶ್ರೀ ಕ್ಷೇತ್ರ' ಕಾರ್ಯಕ್ರಮ ನಿರೂಪಣೆ ಸಹ ಮಾಡಿದ್ದಾರೆ.
 

58

ಅಂಕಿತಾ ಮೂಲತಃ ತಮಿಳುನಾಡಿನ ಅಯ್ಯರ್ ಕುಟುಂಬದ ಹುಡುಗಿ. ಆದರೆ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ತಮಿಳು ಕಿರುತೆರೆಯಿಂದ ಸಾಕಷ್ಟು ಆಫರ್‌ಗಳು ಬಂದರೂ, ಕನ್ನಡದಲ್ಲೇ ನೆಲೆ ಕಾಣಬೇಕೆಂದು ದೃಢ ಸಂಕಲ್ಪ ಮಾಡಿಕೊಂಡ್ಡರು. ಹಾಗಾಗಿ ಕನ್ನಡ ಸೀರಿಯಲ್ (Kannada serial) ಮೂಲಕವೇ ಅಭಿನಯ ಆರಂಭಿಸಿದರು.

68

ಪಕ್ಕ ಮಾರ್ಡನ್ ಸಿಟಿ ಹುಡುಗಿಯಾಗಿರುವ ಅಂಕಿತಾ ಕಮಲಿ ಧಾರವಾಹಿಯಲ್ಲಿ ಗ್ರಾಮಿಣ ಪ್ರತಿಭೆ, ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ ಈಗಾಗಲೇ 'ಬಂಗಾರಿ, ಸಿಂಧೂರ, ಪತ್ತೆದಾರಿ ಪ್ರತಿಭಾ, ರಾಧರಮಣ’ ಧಾರವಾಹಿಗಳಲ್ಲಿ ಆಭಿನಯಿಸುವ ಮೂಲಕ ಉತ್ತಮ ನಟಿ ಅನ್ನೋದನ್ನು ತೋರಿಸಿದ್ದಾರೆ.

78

ಇವರು ನಟನೆಗೆ ಬಂದಂದೆ ಇಂಟ್ರೆಸ್ಟಿಂಗ್ ಆಗಿದೆ. ಮೊದಲು ಇವರ ಮನೆಯಲ್ಲಿ ಚಿತ್ರರಂಗದ ಕುರಿತು ಒಳ್ಳೆಯ ಅಭಿಪ್ರಾಯವಿರಲಿಲ್ಲವಂತೆ. ಹಾಗಾಗಿ ಮಗಳು ಬಣ್ಣದ ಲೋಕಕ್ಕೆ ಕಾಲಿಡುವುದು ತಂದೆಗೆ ಇಷ್ಟವಿರಲಿಲ್ಲವಂತೆ. ಆದರೆ ಅಂಕಿತಾಗೆ ನಟನೆ ಎಂದರೆ ಪ್ರಾಣ. ಹಾಗಾಗಿ ಮನೆಯಲ್ಲಿ ತಿಳಿಸದೆ ಸುಳ್ಳು ಹೇಳಿ ಆಡಿಷನ್‌ಗಳಿಗೆ ಹೋಗುತ್ತಿದ್ದರಂತೆ, ಅಲ್ಲಿಆಯ್ಕೆಯಾದ ನಂತರ ಮನೆಯಲ್ಲಿ ಬಂದು ತಿಳಿಸಿದಾಗ ತಂದೆ ತಾಯಿ ಖುಷಿ ಪಡುತ್ತಿದ್ದರಂತೆ.

88

ಅಂಕಿತಾ ಕೇವಲ ನಟನೆ ಮಾತ್ರ ಅಲ್ಲ, ನೃತ್ಯ, ಸಂಗೀತ, ಡ್ರಾಮಾಗಳನ್ನು ಎತ್ತಿದ ಕೈ. ಗಿಟಾರ್‌ನ್ನು ಸಹ ನುಡಿಸಬಲ್ಲರು. ಶಾಲಾದಿನಗಳಲ್ಲಿ ತಾವೇ ನಾಟಕಗಳಿಗೆ ಸ್ಕ್ರಿಪ್ಟ್ ಬರೆದು, ಅಭಿನಯಿಸಿರುವ ಅನುಭವ ಇವರದ್ದು. ಮೊಡಲಿಂಗ್‌ ಕ್ಷೇತ್ರದಲ್ಲೂ ಹೆಸರು ಮಾಡಿರುವ ಇವರು 'ಮಿಸ್‌ ಕರ್ನಾಟಕ ಕ್ವೀನ್' (Miss Karnataka Queen) ರನ್ನರ್‌ಅಪ್ ಪ್ರಶಂಸೆಗೆ ಭಾಜನರಾಗಿದ್ದಾರೆ.

Read more Photos on
click me!

Recommended Stories