ಬಿಗ್‌ಬಾಸ್ ಮನೆಯಲ್ಲಿ 'ತಿ* ಗಾಂಚಲಿ' ಪದದ ಬಳಕೆಯು ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಧ್ರುವಂತ್ ಈ ಪದವನ್ನು ಬಳಸಿದ್ದು, ಇದು ಸ್ಪರ್ಧಿಗಳ ನಡುವೆ ತೀವ್ರ ಜಗಳಕ್ಕೆ ಕಾರಣವಾಗಿದೆ. ಈ ಹಿಂದೆ 'ಸಡೆ' ಪದದ ಬಳಕೆಯಂತೆ, ಈ ಹೊಸ ಪದವೂ ವೀಕ್ಷಕರಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.
ಸದ್ಯ ಬಿಗ್‌ಬಾಸ್ ಮನೆಯಲ್ಲಿ ತಿ* ಗಾಂಚಲಿ ಪದ ಬಳಸಿ ಸ್ಪರ್ಧಿಗಳು ಒಬ್ಬರನ್ನೊಬ್ಬರನ್ನು ನಿಂದಿಸುತ್ತಿದ್ದಾರೆ. ಈ ಪದದ ಬಳಕೆಯನ್ನು ಧ್ರುವಂತ್ ಆರಂಭಿಸಿದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿಂದೆ ಕಾಕ್ರೋಚ್ ಸುಧಿ ಬಳಸಿದ್ದ ಸಡೆ ಎಂಬ ಪದವೂ ಚರ್ಚೆಗೆ ಕಾರಣವಾಗಿತ್ತು.
26
ಕ್ಯಾಪ್ಟನ್ ಧನುಷ್
ಮನೆ ಲಕ್ಷುರಿ ಐಟಂ ಪಡೆದುಕೊಳ್ಳುವ ವೇಳೆ ಪನ್ನೀರ್ ಸಿಗದ್ದಕ್ಕೆ ಧ್ರುವಂತ್ ಬೇಸರ ವ್ಯಕ್ತಪಡಿಸಿದ್ದಾರೆ. 2 ಕೆಜಿ ಚಿಕನ್ ಮಾತ್ರ ನಿಮಗೆ ಕಾಣಿಸ್ತಾ ಅಂತ ಎಂದು ಸ್ಪಂದನಾ ಅವರನ್ನು ಧ್ರುವಂತ್ ವ್ಯಂಗ್ಯ ಮಾಡುತ್ತಾರೆ. ವೆಜಿಟೇರಿಯನ್ ಆಗಿರುವ ನಿಮಗೆ ಇಡೀ ತುಪ್ಪ ಬೇಕೆಂದು ಧ್ರುವಂತ್ ಮತ್ತು ಕಾವ್ಯಾ ಹೇಳುತ್ತಾರೆ. ಆರಂಭದಲ್ಲಿ ಆಕ್ಷೇಪಿಸಿದ್ದ ಮನೆಯ ಕ್ಯಾಪ್ಟನ್ ಧನುಷ್ ನಂತರ ಒಪ್ಪಿಕೊಳ್ಳುತ್ತಾರೆ.
36
ರಹಸ್ಯ ಹೇಳಿದ ಧನುಷ್
ಈ ಮಾತುಕತೆ ಬಳಕೆ ಧ್ರುವಂತ್ ನಿಮಗೆ 'ಟಿ ಗಾಂಚಾಲಿ' ಎಂಬ ಪದ ಬಳಸಿದ್ರು ಎಂದು ಧನುಷ್ ಮುಂದೆ ಸೂರಜ್ ಹೇಳುತ್ತಾರೆ. ಇದೇ ವಿಷಯವಾಗಿ ಧ್ರುವಂತ್ ಮತ್ತು ಧನುಷ್ ನಡುವೆ ಜಗಳ ಆರಂಭವಾಗುತ್ತದೆ. ಈ ಜಗಳದ ವೇಳೆ ಹಿಂದಿನ ದಿನ ಮಹಿಳಾ ಸ್ಪರ್ಧಿಗೂ ಈ ರೀತಿ ಬಳಕೆ ಮಾಡಿದ್ದೀರಿ ಎಂದು ಧ್ರುವಂತ್ ಹೇಳಿದ್ರು ಎಂದು ಧನುಷ್ ಹೇಳ್ತಾರೆ.
ಇದಕ್ಕೂ ಮೊದಲು ಟಿಶ್ಯೂ ಪೇಪರ್ ಎಸೆಯುವ ವಿಷಯವಾಗಿ ಧ್ರುವಂತ್ ಮತ್ತು ರಕ್ಷಿತಾ ನಡುವೆ ಜಗಳವಾಗಿತ್ತು. ರಕ್ಷಿತಾ ಶೆಟ್ಟಿಯವರಿಗೆ ಈ ರೀತಿ ಪದ ಬಳಕೆ ಮಾಡಿದ್ದರು ಎಂಬ ವಿಷಯವನ್ನು ಧ್ರುವಂತ್ ಹೇಳಿದ್ದಾರೆ. ಈ ಹಿಂದಿನ ಸಂಚಿಕೆಯಲ್ಲಿ ಈ ಪದ ಬಳಕೆಯನ್ನು ವೀಕ್ಷಕರಿಗೆ ತೋರಿಸಿರಲಿಲ್ಲ. ಯಾರಿಗೆ ಆಗಲಿ ಇಂತಹ ಪದಗಳನ್ನು ಸಾರ್ವಜನಿಕವಾಗಿ ಬಳಕೆ ಮಾಡೋದು ಎಷ್ಟು ಸರಿ ಎಂದು ವೀಕ್ಷಕರು ಪ್ರಶ್ನೆ ಮಾಡಿದ್ದಾರೆ.
56
ಸೂರಜ್ ವಿರುದ್ಧ ಧ್ರುವಂತ್ ವಾಗ್ದಾಳಿ
ಮತ್ತೊಂದೆಡೆ ಸೂರಜ್ ಸಹ ಪದ ಬಳಕೆ ಬಗ್ಗೆ ಎಚ್ಚರವಿರಲಿ ಎಂದು ಧ್ರುವಂತ್ ಸಲಹೆ ನೀಡುತ್ತಾರೆ. ಆದರೆ ಇಲ್ಲಿಯೂ ಸೂರಜ್ ವಿರುದ್ಧ ಧ್ರುವಂತ್ ವಾಗ್ದಾಳಿ ನಡೆಸಿ ಆ ಪದ ಬಳಕೆ ಮಾಡುವೆ ಏನಿವಾಗ ಎಂದು ಪ್ರಶ್ನೆ ಮಾಡುತ್ತಾರೆ. ಸ್ಪಂದನಾ ಜೊತೆಯಲ್ಲಿಯೂ ಧ್ರುವಂತ್ ಜಗಳ ನಡೆದಿದೆ.
ರಕ್ಷಿತಾ ಶೆಟ್ಟಿ ಅವರಿಗೆ ಯಾವ ರೀತಿಯ ಪದ ಬಳಕೆ ಮಾಡಲಾಗಿದೆ ಎಂಬುದನ್ನು ವೀಕೆಂಡ್ ಸಂಚಿಕೆಯಲ್ಲಿ ತೋರಿಸಬೇಕು ಎಂದು ವೀಕ್ಷಕರು ಆಗ್ರಹಿಸಿದ್ದಾರೆ. ಈ ಹಿಂದೆ ರಕ್ಷಿತಾ ಶೆಟ್ಟಿ ಅವರನ್ನು ಕಾಕ್ರೋಚ್ ಸುಧಿ 'ಸಡೆ' ಅಂತಾ ಕರೆದಿದ್ದರು. ಕಾರ್ಟೂನ್, ಅಮವಾಸೆ ಎಂಬ ಪದಗಳನ್ನು ಅಶ್ವಿನಿ ಗೌಡ ಬಳಸಿದ್ದರು.