ಕರ್ಣನಿಗೆ ಕಾಟ ಕೊಡುತ್ತಿರುವ ಬ್ಲ್ಯಾಕ್ ರೋಸ್ ಅರುಂಧತಿಯೇ?! ವೀಕ್ಷಕರ ಊಹೆ ನಿಜವಾಗುತ್ತ?

Published : Mar 21, 2025, 03:30 PM ISTUpdated : Mar 21, 2025, 04:38 PM IST

ಕರಿಮಣಿ ಧಾರಾವಾಹಿಯಲ್ಲಿ ಕರ್ಣನಿಗೆ ಕಾಟ ಕೊಡುತ್ತಿರುವ ಆ ಬ್ಲ್ಯಾಕ್ ರೋಸ್ ನಿಜವಾಗಿಯೂ ಯಾರು? ಅರುಂಧತಿನೇ ಬ್ಲ್ಯಾಕ್ ರೋಸ್ ಆ? ವೀಕ್ಷಕರ ಊಹೆ ನಿಜವಾಗುತ್ತಾ?   

PREV
16
ಕರ್ಣನಿಗೆ ಕಾಟ ಕೊಡುತ್ತಿರುವ ಬ್ಲ್ಯಾಕ್ ರೋಸ್ ಅರುಂಧತಿಯೇ?! ವೀಕ್ಷಕರ ಊಹೆ ನಿಜವಾಗುತ್ತ?

ಕಲರ್ಸ್ ಕನ್ನಡಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಕರಿಮಣಿ (Karimani). ಆರಂಭದಲ್ಲಿ ಸಾಹಿತ್ಯ ಮದುವೆಯನ್ನು ತಡೆಯುವ ವಿಲನ್ ಕರ್ಣನಾಗಿ ಆರಂಭವಾದ ವಿಭಿನ್ನ ಕಥೆಯ ಕರಿಮಣಿ ಧಾರಾವಾಹಿ, ಇದೀಗ ಅದೇ ಕರ್ಣ ಸಾಹಿತ್ಯ ಕುತ್ತಿಗೆಗೆ ತಾಳಿ ಕಟ್ಟುವ ಹಾಗೆ ಆಗಿದೆ. ಆದರೆ ಇದೆಲ್ಲದರ ಮಧ್ಯೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಬ್ಲ್ಯಾಕ್ ರೋಸ್ ಮೂಲಕ. 
 

26

ಹಲವಾರು ತಿಂಗಳುಗಳಿಂದ ಬ್ಲ್ಯಾಕ್ ರೋಸ್ ಕಥೆ ಕೇಳಿ ಬರುತ್ತಿದೆ. ಬ್ಲ್ಯಾಕ್ ರೋಸ್ ನಿಂದ ಕರ್ಣನ ಜೀವನದಲ್ಲಿ ಹಾಗೂ ಸಾಹಿತ್ಯ ಬದುಕಿನಲ್ಲಿ ಆದ ಘಟನೆಗಳು ಒಂದೊಂದು ಅಲ್ಲ. ಪ್ರತಿದಿನ ಒಂದೊಂದು ವಿಧದಲ್ಲಿ ಕಾಡುವ ಆ ಬ್ಲ್ಯಾಕ್ ರೋಸ್ ಯಾರು ಎಂಬುದನ್ನು ಹುಡುಕೋದರಲ್ಲೇ ಕಥೆ ಮುಗಿದು ಹೋಗಿದೆ. ಕರ್ಣ ಮತ್ತು ಸಾಹಿತ್ಯ ಮದುವೆಯಾಗಿದ್ದರೂ, ಅವರಿಬ್ಬರ ನಡುವಿನ ಪ್ರೇಮ ಕಥೆ ಬಿಟ್ಟು ನಿರ್ದೇಶಕರು ಬ್ಲ್ಯಾಕ್ ರೋಸ್ ಬೆನ್ನು ಬಿದ್ದಿರೋದು ವೀಕ್ಷಕರ ನೆಮ್ಮದಿ ಕೆಡಿಸಿದೆ. 
 

36

ಇತ್ತೀಚಿನ ಎಪಿಸೋಡ್ ಗಳಲ್ಲಿ ಇನ್ನೇನು ಬ್ಲ್ಯಾಕ್ ರೋಸ್ ಸಿಕ್ಕಿಯೇ ಬಿದ್ದ ಎನ್ನುವಷ್ಟರಲ್ಲೇ ಆತ ತಪ್ಪಿಸಿಕೊಂಡಿದ್ದ. ಮತ್ತೆ ನೋಡಿದ್ರೆ ಕರ್ಣನ ಮಾವನೇ ಬ್ಲ್ಯಾಕ್ ರೋಸ್ ಅನ್ನೋ ಥರ ತೋರಿಸಿದ್ದು, ಆಗಿದೆ. ಅಬ್ಬಾ ಕೊನೆಗೂ ಬ್ಲ್ಯಾಕ್ ರೋಸ್ ಯಾರು ಅನ್ನೋದು ಗೊತ್ತಾಯ್ತಲ್ವಾ ಎಂದುಕೊಳ್ಳುವಷ್ಟರಲ್ಲಿ, ಹೊಸ ಟ್ವಿಸ್ಟ್ ನೀಡಿದ್ದು, ಬ್ಲ್ಯಾಕ್ ರೋಸ್ ಅನ್ನೋದು ಗಂಡಸು ಅಲ್ಲ, ಹೆಂಗಸು ಅನ್ನೋ ಸತ್ಯ ರಿವೀಲ್ ಆಗಿದೆ. 
 

46

ಅಷ್ಟಕ್ಕೂ ಆ ಬ್ಲ್ಯಾಕ್ ರೋಸ್ ಯಾರು? ಯಾರು? ಎನ್ನುವ ಕುತೂಹಲಗಳ ನಡುವೆ ವೀಕ್ಷಕರು ಸೀರಿಯಲ್ ಪ್ರೊಮೋ ನೋಡಿ, ತಮ್ಮ ಅನಿಸಿಕೆಗಳನ್ನು ಹೇಳಿದ್ದಾರೆ. ವೀಕ್ಷಕರು ಈ ಬ್ಲ್ಯಾಕ್ ರೋಸ್ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ.  Black rose ಈ ಪದ ಕೇಳಿ ಕೇಳಿ ಬೋರ್ ಆಗಿದೆ. ಅರುಂಧತಿ ನೆ ಬ್ಲಾಕ್ ರೋಜ್ ಅದು ಎಲ್ಲರಿಗೂ ಗೊತ್ತು. ಸೀರಿಯಲ್ ಟೈಟಲ್ ಕರಿಮಣಿಗಿಂತ ಕರಿಗುಲಾಬಿ ಅಂತ ಇರ್ಬೇಕಿತ್ತು. ಈಗ್ಲು ಇನ್ನ ಕಾಲ ಮಿಂಚಿಲ್ಲ ಅರುಂಧತಿ ನ black rose ಮಾಡಿ ನಿಮ್ಮ ಕಥೆ ನ ನೀವೇ ಹಾಳು ಮಾಡಬೇಡಿ, ನಮಗೆ ರಾಮಾಯಣ ಕಥೆ ಗೊತ್ತು ನೀವು ಬೇರೆ ಕಥೆ ಬಗ್ಗೆ ಯೋಚಿಸಿ ಎಂದು ವೀಕ್ಷಕರು ಕಿಡಿ ಕಾರಿದ್ದಾರೆ. 
 

56

ಮತ್ತೊಂದಿಷ್ಟು ಜನರು ಡೈರೆಕ್ಟರ್ ಸ್ಟೋರಿ.ಟ್ರ್ಯಾಕ್ ಚೇಂಜ್ ಮಾಡಿ. ಬ್ಲಾಕ್ ರೋಜ್ ಬಿಟ್ರೆ ಬೇರೆ ಏನೂ ಇಲ್ಲ. ಸಾಹಿತ್ಯ ಕರ್ಣ ಹೊಸದಾಗಿ ಮದುವೆಯಾಗಿದ್ದಾರೆ. ಅವರನ್ನ ಸರಿ ಮಾಡೋದು ಬಿಟ್ಟು ಇದ್ಯಾವುದೋ ಬ್ಲಾಕ್ ರೋಜ್ಅಂತೆ. ಅರುಂಧತಿನ ಕಿಡ್ನಾಪ್ ಮಾಡೋದ್ ಅಂತೆ. ಕರ್ಣ ಹುಡುಕೊಂಡು ಹೋಗೋದು. ಇದು ಬಿಟ್ರೆ ಸ್ಟೋರಿ ಮುಂದೆ ಏನು ಇಲ್ಲ. ಇನ್ನು ಸ್ವಲ್ಪ ದಿನದಲ್ಲಿ ಭರತ್ ಕೂಡ ಬ್ಲ್ಯಾಕ್ ರೋಸ್ ಟೀಮಲ್ಲಿ ಇದ್ದಾನೆ ಅಂತ ತೋರಿಸಿ. ಆಮೆಲೆ ಇಡೀ ಫ್ಯಾಮಿಲಿ ಬ್ಲ್ಯಾಕ್ ರೋಸ್ ಫ್ಯಾಮಿಲಿ ಆಗುತ್ತೆ ಎಂದರೆ, ಇನ್ನೊಬ್ಬರು ಯಪ್ಪೋ ಈ ಧಾರವಾಹಿ ಬ್ಲಾಕ್ ರೋಸ್ ಕೇಳಿ ಕೇಳಿ ಕಿವೀಲಿ ರಕ್ತ ಬರ್ತಿದೆ. ಕರ್ಮ ಕರ್ಮ ಮೊದ್ಲು ಧಾರವಾಹಿ ನಾ ತೆಗೆದು ಹಾಕಿ. ಅದು ಯಾವಾಗ ತೋರಿಸ್ತೀರು ಬ್ಲಾಕ್ ರೋಸ್ ನಾ ಬೇಗ ತೋರ್ಸಿ ಎಂದಿದ್ದಾರೆ. ಮತ್ತೊಬ್ಬರು Black rose concept 1960-1990 ಅಲ್ಲಿ ಸಿನೆಮಾ ನೋಡುವವರಿಗೆ ಗೊತ್ತಿರುತ್ತೆ. ಆಗಿನ ಕಾಲದಲ್ಲಿ ವಿಲನ್ಸ್ ಯಾವ್ದೋ ಪರದೆ ಹಿಂದೆ ಇದು ಕೆಲಸ ಮಾಡ್ತಿರ್ತಾರೆ ಅದೇ ಈ ಸೀರಿಯಲ್ ನಲ್ಲಿ ರಿಪೀಟ್ ಆಗಿದೆ ಎಂದಿದ್ದಾರೆ. 
 

66

ಮತ್ತೊಬ್ಬರು ವಾಯ್ಸ್ ಕೇಳಿದರೆ ಅರುಂಧತಿ ಅಲ್ಲ ಅನ್ಸುತ್ತೆ. ಮನಸು ಹೇಳುತ್ತದೆ ಅರುಂಧತಿನೇ ಬ್ಲಾಕ್ ರೋಜ್ ಅಂತ. ಇದು ಯಾವುದು ಸತ್ಯ ಯಾವುದು ಸುಳ್ಳು ಡೈರೆಕ್ಟ್ ರಿವಿಲ್ ಮಾಡ್ಬಿಡಿ. ಆ ಲೇಡಿ ಯಾರು ನಂಬರ್ ಒನ್ ಕೇಡಿ ಎಂದಿದ್ದಾರೆ. ಮತ್ತೊಬ್ಬರು ಅರುಂಧತಿಗೆ ಬಯ್ಯುತ್ತಾ, ಇಷ್ಟು ದಿನ ದುಡ್ಡಿಗೋಸ್ಕರ ಅಮ್ಮನ ಪ್ರೀತಿ ಬಳಸಿಕೊಂಡು ಎಮೋಷನಲ್ ಕಾರ್ಡ್ ಪ್ಲೇ ಮಾಡಿದ್ಲಾ ರಾಕ್ಷಸಿ. ಕರ್ಣ ಇವರನ್ನ ಸುಮ್ನೆ ಬಿಡಬೇಡ ಎಂದಿದ್ದಾರೆ. 
 

Read more Photos on
click me!

Recommended Stories