ಸುಧಾರಾಣಿ ಬಿಗ್ ಬಾಸ್ 12ಕ್ಕೆ ಹೋಗೋದು ಕನ್ಫರ್ಮ್! ಯಾವ ಬೋ…. ಎನ್ನುತ್ತಾ ವಿಡೀಯೋ ಹರಿಬಿಟ್ಟ ನಟಿ

Published : Sep 10, 2025, 03:34 PM IST

ಕನ್ನಡದ ಹಿರಿಯ ನಟಿ ಸುಧಾರಾಣಿ ಬಿಗ್ ಬಾಸ್ ಸೀಸನ್ 12ಕ್ಕೆ ಹೋಗೋದು ಕನ್ಫರ್ಮ್ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಸ್ವತಃ ನಟಿ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದು, ಏನಂದಿದ್ದಾರೆ ನೋಡಿ.

PREV
16

ಸದ್ಯ ಕನ್ನಡ ಕಿರುತೆರೆಯಲ್ಲಿ ಬಿಗ್ ಬಾಸ್ ನದ್ದೆ ಹವಾ. ಈ ಬಾರಿ ಬಿಗ್ ಬಾಸ್ ಸೀಸನ್ 12  (Bigg Boss Season 12) ಶುರುವಾಗಲಿದೆ. ಇನ್ನು ಮುಂದೆ ಶೋ ಹೋಸ್ಟ್ ಮಾಡಲ್ಲ ಎಂದಿದ್ದ ಕಿಚ್ಚ ಸುದೀಪ್ ಮತ್ತೆ ಹೋಸ್ಟ್ ಮಾಡುತ್ತಿರುವುದು ವೀಕ್ಷಕರ ಸಂಭ್ರಮವನ್ನು ಹೆಚ್ಚಿಸಿದೆ. ಅದರಲ್ಲೂ ಈ ಬಾರಿ ಸುಧಾರಾಣಿ ಬಿಗ್ ಬಾಸ್ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.

26

ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ (Social media) ಹಲವಾರು ನಟ, ನಟಿಯರು, ಸೋಶಿಯಲ್ ಮೀಡಿಯಾದ ಇನ್ಫ್ಲ್ಯೂಯನ್ಸರ್ ಗಳ ಹೆಸರು ಕೇಳಿ ಬಂದಿದ್ದು, ಯಾರು ಬಿಗ್ ಬಾಸ್ ಗೆ ಹೋಗಲಿದ್ದಾರೆ ಎನ್ನುವ ವಿಷಯ ಇನ್ನೂ ಕೂಡ ಕನ್ಸರ್ಫ್ ಆಗಲಿಲ್ಲ. ಈ ಹೆಸರಿನ ಜೊತೆ ಕನ್ನಡ ಹಿರಿತೆರೆ ಹಾಗೂ ಕಿರುತೆರೆಯ ನಟಿ ಸುಧಾರಾಣಿ ಕೂಡ ಎಂಟ್ರಿ ಕೊಡ್ತಾರೆ ಎನ್ನುವ ಮಾಹಿತಿ ಹರಿದಾಡುತ್ತಿದ್ದೆ.

36

ಸೋಶಿಯಲ್ ಮೀಡಿಯಾ ಪೇಜ್ ಗಳಲ್ಲಿ ಈ ಬಾರಿ ಬಿಗ್ ಬಾಸ್ ಗೆ ಸುಧಾರಾಣಿ  (Sudharani) ಕನ್ಫರ್ಮ್, ಹಾಗಿದ್ರೆ ಎಂಟರ್ಟೇನ್’ಮೆಂಟ್ ಗೆ ಕೊರತೆ ಇಲ್ಲ. ಈ ಬಾರಿಯ ವಿನ್ನರ್ ಕೂಡ ಸುಧಾರಾಣಿ ಎನ್ನುವಂತಹ ಪೋಸ್ಟರ್ ಗಳು ಹರಿದಾಡುತ್ತಿವೆ. ಇದೀಗ ನಟಿ ಅದಕ್ಕೆ ತಮ್ಮ ಇನ್’ಸ್ಟಾಗ್ರಾಂನಲ್ಲಿ ಫನ್ನಿ ವಿಡಿಯೋ ಶೇರ್ ಮಾಡುವ ಮೂಲಕ ಉತ್ತರ ನೀಡಿದ್ದಾರೆ.

46

ಯಾರ್ ಹೇಳಿದ್ದು ಎನ್ನುವ ಕ್ಯಾಪ್ಶನ್ ಕೊಟ್ಟಿರುವ ಸುಧಾರಾಣಿ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪೋಸ್ಟ್ ಗಳ ಜೊತೆಗೆ ವಾಸ್ತು ಪ್ರಕಾರ ಸಿನಿಮಾದ ಒಂದೆರಡು ಸೀನ್ ಗಳನ್ನು ಕೂಡ ಸೇರಿಸಿ, ಫನ್ನಿಯಾಗಿ ವಿಡಿಯೋ ಎಡಿಟ್ ಮಾಡಿ ಹಂಚಿಕೊಂಡಿದ್ದು, ಇದೀಗ ಜನರನ್ನು ನಗಿಸುತ್ತಾ, ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. (ಸುಧಾರಾಣಿ ವಿಡಿಯೋ)

56

ವಿಡೀಯೋದ ಆರಂಭದಲ್ಲಿ ಸುಧಾರಾಣಿ ಬಿಗ್ ಬಾಸ್ 12ಕ್ಕೆ ಕನ್ಫರ್ಮ್ ಎನ್ನುವ ಪೋಸ್ಟ್ ಇದ್ದು, ಬಳಿಕ ನಟಿ ಯಾರ್ ಹೇಳಿದ್ದು ಎನ್ನುವ ಅವರದ್ದೇ ಡೈಲಾಗ್ ವಿಡೀಯೋ ಹಾಕಿದ್ದಾರೆ, ನಂತರ ಮತ್ತೊಂದು ವೈರಲ್ ಪೋಸ್ಟ್ ಹಾಕಿ, ಯಾವ… ಬೋ… ಎನ್ನುವ ಅರ್ಧ ಡೈಲಾಗ್ ಹಾಕಿ, ಟ್ರೋಲ್ ಪೇಜ್ ಗಳೇ ಬೆಜ್ಜಿ ಬೀಳುವಂತೆ ಟ್ರೋಲ್ ಮಾಡಿ, ಅಭಿಮಾನಿಗಳು ನಕ್ಕು ನಗುವಂತೆ ಮಾಡಿದ್ದಾರೆ.

66

ಈ ಮೂಲಕ ಈ ಬಾರಿ ಬಿಗ್ ಬಾಸ್ ಗೆ ಸುಧಾರಾಣಿಯವರು ಬರೋದಿಲ್ಲ ಎನ್ನುವುದನ್ನು ನಟಿ ಕನ್ಫರ್ಮ್ ಮಾಡಿದ್ದಾರೆ. ಕನ್ನಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಬ್ಯುಸಿಯಾಗಿರುವ ಸುಧಾರಾಣಿ ಅವರು ನಟಿಸುತ್ತಿದ್ದ ಶ್ರೀರಸ್ತು ಶುಭಮಸ್ತು ಸೀರಿಯಲ್ ಈಗಷ್ಟೇ ಮುಗಿದಿದೆ. ಮುಂದೆ ಯಾವ ಸೀರಿಯಲ್ ಅಥವಾ ಸಿನಿಮಾದಲ್ಲಿ ನಟಿಸುತ್ತಾರೆ ಕಾದು ನೋಡಬೇಕು.

Read more Photos on
click me!

Recommended Stories