ಇಂದ್ರಜಿತ್ ಲಂಕೇಶ್ ಪುತ್ರ ಸಮರಜಿತ್‌ ಜೊತೆ ಬಿಗ್ ಬಾಸ್ ಸಾನ್ಯ ಅಯ್ಯರ್

Published : Aug 16, 2023, 09:24 AM IST

ವೈರಲ್ ಆಯ್ತು ಇಂದ್ರಜಿತ್ ಲಂಕೇಶ್ ಪುತ್ರನ ಫೋಟೋಗಳು. ಮದುವೆ ವಿಚಾರ ಅಂದುಕೊಳ್ಳಬೇಡಿ ಇದು....ಸಿನಿಮಾ....

PREV
16
ಇಂದ್ರಜಿತ್ ಲಂಕೇಶ್ ಪುತ್ರ ಸಮರಜಿತ್‌ ಜೊತೆ ಬಿಗ್ ಬಾಸ್ ಸಾನ್ಯ ಅಯ್ಯರ್

‘ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಒಂದು ಸ್ಕ್ರಿಪ್ಟ್‌ ಮಾಡಿದ್ದೆ. ನಾಯಕ ಪಾತ್ರಕ್ಕೆ ಹುಡುಕಾಡುತ್ತಿದ್ದಾಗ ಮಗ ಸಮರಜಿತ್‌ ಈ ಪಾತ್ರಕ್ಕೆ ಸೂಟ್‌ ಆಗ್ತಾನಲ್ವಾ ಅಂತನಿಸಿತು. 

26

ಆತ ಥಿಯೇಟರ್‌ನಲ್ಲಿ ಡಿಗ್ರಿ ಮಾಡಿದ್ದಾನೆ. ಜಾಹೀರಾತುಗಳಲ್ಲಿ ನಟಿಸಿದ್ದಾನೆ. ಲಗಾನ್, ಹೈವೇ, ಜೆರ್ಸಿಯಂಥಾ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ ಸುಪ್ರಸಿದ್ಧ ಛಾಯಾಗ್ರಾಹಕ ಅನಿಲ್‌ ಮೆಹ್ತಾ ಬಳಿ ಕೆಲಸ ಮಾಡಿದ ಅನುಭವ ಇದೆ. ಗರಡಿ, ಕರಟಕ ದಮನಕ ಚಿತ್ರಗಳಿಗೆ ಅಸಿಸ್ಟೆಂಟ್‌ ಆಗಿ ಕೂಡ ಕೆಲಸ ಮಾಡಿದ್ದಾನೆ.’

36

ಇಂದ್ರಜಿತ್‌ ಲಂಕೇಶ್‌ ತಮ್ಮ ಹೊಸ ಸಿನಿಮಾದ ಬಗ್ಗೆ, ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಲಾಂಚ್‌ ಆಗುತ್ತಿರುವ ಪುತ್ರ ಸಮರ್‌ಜಿತ್‌ ಲಂಕೇಶ್‌ ಬಗ್ಗೆ ವಿವರ ನೀಡಿದ್ದು ಹೀಗೆ.

46

ಈ ಸಿನಿಮಾ ಮೂಲಕ ಬಿಗ್‌ಬಾಸ್ ಹುಡುಗಿ, ಕಿರುತೆರೆ ನಟಿ ಸಾನ್ಯಾ ಅಯ್ಯರ್‌ ಸಹ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 

56

ಸದ್ಯ ಈ ಸಿನಿಮಾಗೋಸ್ಕರ ಸಾಹಸ ನಿರ್ದೇಶಕ ಚೇತನ ಡಿಸೋಜಾ ಅಕಾಡೆಮಿಯಲ್ಲಿ ಸಮರ್‌ಜಿತ್ (Samarajith Lankesh) ಸಾಹಸ ತರಬೇತಿ ಪಡೆಯುತ್ತಿದ್ದಾರೆ. 

66

ಮುರಳಿ ಮಾಸ್ಟರ್‌ ಬಳಿ ಡ್ಯಾನ್ಸ್‌ ಟ್ರೈನಿಂಗ್‌ ಅನ್ನೂ ಪಡೆಯುತ್ತಿದ್ದಾರೆ. ಸದ್ಯದಲ್ಲೇ ಈ ಸಿನಿಮಾ ಕುರಿತ ಹೆಚ್ಚಿನ ಮಾಹಿತಿ ನೀಡುವುದಾಗಿ ಇಂದ್ರಜಿತ್‌ ತಿಳಿಸಿದ್ದಾರೆ. 

Read more Photos on
click me!

Recommended Stories