ಅನುಬಂಧ ಅವಾರ್ಡ್ 2023: ನಿಮ್ಮ ಪೇವರಿಟ್ ಯಾರು ಕಮೆಂಟ್ ಮಾಡಿ, ನಟಿಯರ ನಿಜ ನಾಮಧೇಯ ಇಲ್ಲಿದೆ

Published : Aug 15, 2023, 03:50 PM ISTUpdated : Aug 16, 2023, 10:37 AM IST

ಹಲವು ಸೂಪರ್‌ ಹಿಟ್ ಸೀರಿಯಲ್‌ ಮತ್ತು ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಕಲರ್ಸ್ ಕನ್ನಡ ವಾಹಿನಿಯ ಅನುಬಂಧ ಅವಾರ್ಡ್ಸ್ (Anubandha Awards)  ಮತ್ತೆ ಬಂದಿದೆ. ಈ ಬಾರಿ 10ನೇ ವರ್ಷದ  ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ನಡೆಯುತ್ತಿದ್ದು, ದಶಕದ ಸಂಭ್ರಮದಲ್ಲಿದೆ. ಎಂದಿನಂತೆಯೂ ಜನ ಮೆಚ್ಚಿದ ನಾಯಕಿ ಸ್ಥಾನಕ್ಕೆ 12 ಸೀರಿಯಲ್‌ಗಳ ನಾಯಕಿಯರು ನಾಮಿನೇಶನ್‌ ಆಗಿದ್ದು, ಜಿಯೋ ಸಿನೆಮಾ ಅಪ್ಲಿಕೇಶನ್ ಮೂಲಕ ನಿಮ್ಮ ನೆಚ್ಚಿನ ನಾಯಕಿ ನಟಿಯನ್ನು ಆಯ್ಕೆ ಮಾಡಬಹುದಾಗಿದೆ.

PREV
112
ಅನುಬಂಧ ಅವಾರ್ಡ್ 2023: ನಿಮ್ಮ ಪೇವರಿಟ್ ಯಾರು ಕಮೆಂಟ್ ಮಾಡಿ, ನಟಿಯರ ನಿಜ ನಾಮಧೇಯ ಇಲ್ಲಿದೆ

ಗೃಹಪ್ರವೇಶ ಧಾರಾವಾಹಿಯ ನಾಯಕಿ ಪಲ್ಲವಿ. ಇದು ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ. ಸದ್ಯ ಪಲ್ಲವಿ ಅಪ್ಪನ ಮನೆಯಲ್ಲಿದ್ದರೂ ಮನೆಯವರಿಗೆ ಯಾರಿಗೂ ಸತ್ಯ ಗೊತ್ತಿಲ್ಲ. ಇವರ ನಿಜ ಹೆಸರು ಸ್ಪಂದನಾ ಸೋಮಣ್ಣ.

212

ಗಂಡ ಹೆಂಡತಿಯ ಧಾರಾವಾಹಿಯ ನಾಯಕಿ ಸ್ವಾತಿ. ಮದುವೆಗೆ ಮುನ್ನವೇ ಹುಡುಗನಿಂದ ಮೋಸ ಹೋಗಿ ಗರ್ಭಿಣಿಯಾದ ಕಥೆ.  ಈಕೆಗೆ ಸ್ನೇಹಿತ ಬೆನ್ನೆಲುಬಾಗಿ ನಿಂತು ಸಹಾಯ ಮಾಡುವ ಕಥೆಯಾಗಿದೆ. ಇವರ ನಿಜ ಹೆಸರು  ನಿರುಷಾ ಗೌಡ.

312

ತಾರಿಣಿ ಒಲವಿನ ನಿಲ್ದಾಣ ಧಾರಾವಾಹಿಯ ನಾಯಕಿ. ಪ್ರೀತಿ ಆಧಾರಿತ ಕಥೆಯಾಗಿದ್ದು, ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ  ಮದುವೆಯಾಗಿದ್ದಾರೆ. ಮದ್ಯಮವರ್ಗದ ಕುಟುಂಬದ ಕಥೆಯಾಗಿದೆ. ತಾರಿಣಿಯ  ನಿಜ  ಜೀವನದ ಹೆಸರು  ಅಮಿತಾ ಸದಾಶಿವ ಕುಲಾಲ್. 

412

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನಾಯಕಿ ಭಾಗ್ಯ. ಸಾಂಸರಿಕ ಜೀವನದ ಜಂಜಾಟ ಗಂಡ, ಹೆಂಡತಿ, ಮಕ್ಕಳು ಅತ್ತೆ-ಮಾವ ಇರುವ ಕುಟುಂಬವೊಂದರ ಕಥೆ ಇದಾಗಿದೆ. ಅತ್ತೆ-ಸೊಸೆ ಬಾಂಧವ್ಯದ ಕಥೆಯನ್ನು ಇಲ್ಲಿ ತೋರಿಸಲಾಗಿದೆ. ಸುಷ್ಮಾ ರಾವ್ ನಾಯಕಿಯಾಗಿ ಮಿಂಚಿದ್ದಾರೆ.

512

ಕೆಂಡಸಂಪಿಗೆ ಧಾರವಾಹಿಯಲ್ಲಿ ನಾಯಕಿ ಸಾಧನಾ. ಬಡ ಕುಟುಂಬದ ಹೆಣ್ಣು ಮಗಳನ್ನು ರಾಜಕಾರಣಿಯೊಬ್ಬ ಯಾವುದೋ ಸಂದರ್ಭಕ್ಕೆ ಮದುವೆಯಾದ ಕಥೆ. ಸದ್ಯ ನಾಯಕಿ ಗರ್ಭಿಣಿ, ತನ್ನ ತಮ್ಮನ ಸಾವಿಗೆ ನ್ಯಾಯ ಹುಡುಕುವುದರಲ್ಲಿದ್ದಾಳೆ. ನಾಯಕಿಯ ನಿಜ ಜೀವನದ ಹೆಸರು ಕಾವ್ಯ ಶೈವ.

612

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ನಾಯಕಿಯ ಹೆಸರು  ಲಕ್ಷ್ಮೀ. ಪ್ರೀತಿಸಿದ ಹುಡುಗಿ ಮದುವೆಗೆ ಒಪ್ಪಿಲ್ಲ ಅಂತ ವೈಷ್ಣವ್‌ ಮನೆಯವರ ಖುಷಿಗೋಸ್ಕರ ಲಕ್ಷ್ಮೀಯನ್ನು ಮದುವೆಯಾಗಿದ್ದಾನೆ. ಭೂಮಿಕಾ ರಮೇಶ್‌ ನಾಯಕಿಯ ನಿಜ ಜೀವನದ ಹೆಸರು. 

712

ಗೀತಾ ಸೀರಿಯಲ್‌ ನಲ್ಲಿ ಗೀತಾನೇ ನಾಯಕಿ. ಸದ್ಯ ಪ್ರೀತಿಸಿದ ಹುಡುಗನನ್ನು ಮದುವೆಯಾಗಿದ್ದಾಳೆ. ಗಂಡನ ಚಿಕ್ಕಮ್ಮನ ಅವ್ಯವಹಾರವನ್ನು ಬಯಲಿಗೆಳೆಯಲು ಪಣ ತೊಟ್ಟಿದ್ದಾಳೆ. ಗೀತಾಳ ನಿಜ ನಾಮಧೇಯ  ಭವ್ಯಾ ಗೌಡ.

812

ಅಂತರಪಟ ಧಾರಾವಾಹಿಯಲ್ಲಿ ನಾಯಕಿಯ ಹೆಸರು ಆರಾಧನಾ. ಇದು ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ. ಅಮ್ಮನಿಗೆ ಎರಡನೇ ಮದುವೆಯಾಗಿದ್ದು, ಆತ ನಾಯಕಿಗೆ ಹಿಂಸೆ ನೀಡುತ್ತಿರುತ್ತಾನೆ. ನಾಯಕಿ ಆರಾಧನಾಳ ನಿಜ ಜೀವನದ ಹೆಸರು ತನ್ವಿ ಬಾಲರಾಜ್.

912

ತ್ರಿಪುರ ಸುಂದರಿ ಧಾರಾವಾಹಿಯ ನಾಯಕಿ ಹೆಸರು ಆಮ್ರಪಾಲಿ. ಈಕೆ ಗಂಧರ್ವ ಲೋಕದ ಕನ್ಯೆ. ಭೂ ಲೋಕದಲ್ಲಿರುವ ಗಂಧರ್ವ ಲೋಕದ ರಾಜನನ್ನು ಹುಡುಕಿ ಬರು ಕಥೆ ಇದಾಗಿದೆ. ಈ ಧಾರಾವಾಹಿಯ ನಾಯಕಿಯ ನಿಜ ಹೆಸರು ದಿವ್ಯಾ ಸುರೇಶ್. 

1012

ರಾಮಚಾರಿ ಧಾರಾವಾಹಿಯಲ್ಲಿ ನಾಯಕಿಯ ಹೆಸರು ಚಾರುಲತಾ. ಶ್ರೀಮಂತ ಮನೆತನದ ಹೆಣ್ಣುಮಗಳು  ತನ್ನ ಸೊಕ್ಕಿನ ಜೀವನದಿಂದ ಬದಲಾಗಿ ಪೂಜೆ ಮಾಡುವ ಸಂಸ್ಕಾರಯುತ ಹುಡುಗನನ್ನು ಮದುವೆಯಾಗುವ ಕಥೆಯಾಗಿದೆ. ನಾಯಕಿಯ ನಿಜ ಜೀವನದ ಹೆಸರು ಮೌನ ಗುಡ್ಡೆಮನೆ.

1112

ಲಕ್ಷಣ ಧಾರಾವಾಹಿಯ ನಾಯಕಿ ನಕ್ಷತ್ರಾ. ಉತ್ಸಾಹಭರಿತ ಹುಡುಗಿ, ಕಪ್ಪು ಸುಂದರಿ. ಅಪ್ಪ ಶ್ರೀಮಂತನಾಗಿದ್ದರೂ ಬೆಳೆದಿದ್ದು ಬಡವರ ಮನೆಯಲ್ಲಿ ಉತ್ತಮ ಸಂಸ್ಕಾರ ಹೊಂದಿರುವ ಹುಡುಗಿ ತನ್ನವರಿಗಾಗಿ ಮಿಡಿಯುತ್ತಾಳೆ.  ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಈಕೆಯ ನಿಜ ಜೀವನದ ಹೆಸರು ವಿಜಯಲಕ್ಷ್ಮಿ.

1212

ಪುಣ್ಯವತಿ ಧಾರಾವಾಹಿಯ ನಾಯಕಿ ಪದ್ಮಿನಿ. ಡ್ಯಾನ್ಸ್‌ನಲ್ಲಿ ಆಸಕ್ತಿ ಹೊಂದಿರುವ ನಾಯಕಿ ತನ್ನ ತಂದೆಯ ಆಸೆಯಂತೆ ನಾಯಕನನ್ನು ಮದುವೆಯಾಗಲು ಒಪ್ಪುತ್ತಾಳೆ. ಆದರೆ ನಾಯಕ ಪದ್ಮಿನಿ ಎಂದುಕೊಂಡು ಮದುವೆಯಾಗಿರುವುದು ಆಕೆಯ ತಂಗಿಯನ್ನು. ಆದರೆ ಪದ್ಮಿನಿ-ಮತ್ತು ನಾಯಕ ಇಬ್ಬರೂ ಪ್ರೀತಿಯಲ್ಲಿದ್ದಾರೆ. ನಾಯಕಿಯ ನಿಜ ಜೀವನದ ಹೆಸರು ಪ್ರಿಯಾಂಕ ಡಿ ಎಸ್ . 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories