Lakshmi Nivasa : ಜಯಂತನ ಅತಿ ವಿನಯ ನೋಡಿ ವೀಕ್ಷಕರಿಗೆ ಡೌಟ್… ರೌಡಿಯೋ, ಸೈಕೋನೋ ಅಂತಿದ್ದಾರೆ ಜನ

Published : Feb 23, 2024, 02:22 PM ISTUpdated : Feb 23, 2024, 02:30 PM IST

ಲಕ್ಷ್ಮೀ ನಿವಾಸ ಸೀರಿಯಲ್ ನಲ್ಲೀಗ ಮನೆಮಗಳು ಜಾಹ್ನವಿಯ ನಿಶ್ಚಿತಾರ್ಥದ ಸಂಭ್ರಮ ನಡೆಯುತ್ತಿದೆ. ಒಂದು ಸಣ್ಣ ಕೆಟ್ಟಗುಣಗಳೂ ಇಲ್ಲದ, ಅತಿ ವಿನಯವಂತನಾದ ಜಯಂತ್ ಗುಣ ಮಾತ್ರ ಯಾಕೋ ಪ್ರೇಕ್ಷಕರಿಗೆ ಅನುಮಾನ ಹುಟ್ಟಿಸಿದೆ.   

PREV
17
Lakshmi Nivasa : ಜಯಂತನ ಅತಿ ವಿನಯ ನೋಡಿ ವೀಕ್ಷಕರಿಗೆ ಡೌಟ್… ರೌಡಿಯೋ, ಸೈಕೋನೋ ಅಂತಿದ್ದಾರೆ ಜನ

ಝೀ ಕನ್ನಡದಲ್ಲಿ (Zee Kannada) ಹೊಸದಾಗಿ ಆರಂಭವಾಗಿ ಮನೆಕಟ್ಟು ಮತ್ತು ಮಕ್ಕಳ ಮದುವೆ ಮಾಡುವ ಕನಸನ್ನು ಹೊತ್ತಿರುವ ಅಪ್ಪ ಅಮ್ಮನ ಕಥೆಯನ್ನು ಹೊಂದಿರುವ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಶ್ವೇತಾ, ದಿಶಾ ಮದನ್, ಚಂದನಾ, ಅಜಯ್ ರಾವ್ ಮೊದಲಾದವರು ನಟಿಸಿರುವ ಸೀರಿಯಲ್ ಲಕ್ಷ್ಮೀ ನಿವಾಸ. 
 

27

ಸದ್ಯ ಧಾರಾವಾಹಿಯಲ್ಲಿ ಜಾಹ್ನವಿ ಮತ್ತು ಶ್ರೀಮಂತ ಬ್ಯುಸಿನೆಸ್ ಮೆನ್ ಜಯಂತ್ ನಿಶ್ಚಿತಾರ್ಥದ (engagement) ಸಂಭ್ರಮ ನಡೆಯುತ್ತಿದೆ. ಅತಿ ಶ್ರೀಮಂತನಾದರೂ ತನ್ನ ನಯ, ವಿನಯದಿಂದಲೇ ಮನೆ ಮಂದಿಯ ಮನಸ್ಸು ಗೆದ್ದಿದ್ದಾರೆ ಜಯಂತ್. ಆದರೇ ಅದೇ ಈಗ ವೀಕ್ಷಕರ ಅನುಮಾನಕ್ಕೆ ಕಾರಣವಾಗಿದೆ. 
 

37

ಲಕ್ಷ್ಮೀ ನಿವಾಸದಲ್ಲಿ  (Lakshmi Nivasa) ಪ್ರತಿದಿನ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಇದೆಲ್ಲದರ ನಡುವೆ ಇದೀಗ ಚಂದದ ಹುಡುಗ, ಬಂಗಾರದಂಥ ಹುಡುಗಿಗೆ ನಿಶ್ಚಿತಾರ್ಥ ಆಗೇ ಬಿಡ್ತು. ಇಷ್ಟೇಲ್ಲಾ ಒಳ್ಳೆಯದು ಆಗ್ತಿದೆ ಅಂದ ಮೇಲೆ ಯಾವುದೋ ದೊಡ್ಡ ಟ್ವಿಸ್ಟ್ ಇರಲೇಬೇಕಲ್ಲ. ಜಯಂತ್ ವಿಲನ್ ಆಗ್ತಾನ ಎಂದು ಕೇಳ್ತಿದ್ದಾರೆ ವೀಕ್ಷಕರು. 
 

47

ಕಥೆಯಲ್ಲಿ ಒಂದಲ್ಲ ಒಂದು ಟ್ವಿಸ್ಟ್ ಇದ್ದರೆ ಮಾತ್ರ ಸೀರಿಯಲ್ (serial) ನೋಡೋದಕ್ಕೆ ಜನರಿಗೂ ಇಂಟ್ರೆಸ್ಟ್ ಬರೋದು ಅನ್ನೋದು ನಿಜಾ. ಆದರೆ ಇಲ್ಲಿ ವಿಶ್ವನ ಪ್ರೀತಿಯನ್ನು ಕೇವಲ ಸ್ನೇಹ ಅಂತಾನೆ ತಿಳಿದಿರುವ ಜಾಹ್ನವಿ, ಜಯಂತ್ ಜೊತೆ ಮದುವೆಯಾಗೋಕೆ ಒಪ್ಪಿಗೆ ನೀಡಿ, ನಿಶ್ಚಿತಾರ್ಥ ಕೂಡ ನಡೆದಿದೆ.
 

57

ಕಥೆಯಲ್ಲಿ ಟ್ವಿಸ್ಟ್ ಇಲ್ಲದೇ ಈ ರೀತಿ ಒಂದೇ ಬಾರಿ ಎಲ್ಲವೂ ಒಳ್ಳೆಯದಾಗಲು ಸಾಧ್ಯವೇ? ಜಯಂತ್ ನಿಜವಾಗಿಯೂ ಯಾರು? ತಾನೊಬ್ಬ ಅನಾಥ ಎನ್ನುವ ಆತ ನಿಜಕ್ಕೂ ಅನಾಥನಾಗಿದ್ದಾನ? ಅಥವಾ ಅವನು ತೋರಿಸುತ್ತಿರುವ ಅತಿ ವಿನಯ ನಿಜವೇ? ಅವನು ನಿಜವಾಗಿಯೂ ಜಾಹ್ನವಿಯನ್ನು ಇಷ್ಟಪಟ್ಟಿದ್ದಾನೆಯೇ? ಹೀಗೆ ಹಲವು ಪ್ರಶ್ನೆಗಳು ಜನರ ಮನಸಲ್ಲಿ ಮೂಡಿದೆ. 
 

67

ಜನರು ಈ ಜಯಂತ್ ದೊಡ್ಡ ವಿಲನ್ (Villain) ಇರಬಹುದು. ಸೀರಿಯಲ್ ನಲ್ಲಿ  ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡ್ತಾರೆ ಗುರು, ಆಲೋಚನೆ ಮಾಡಿ ಮಾಡಿ ತಲೆ ಮೊಸರ್ ಗಡಿಗಿ ಆಗೈತಿ, ಇಬ್ಬರ ಜೋಡಿ ಚೆನ್ನಾಗಿದೆ, ಆದರೆ ನೀವು ಟ್ವಿಸ್ಟ್ ಕೊಡ್ತಿರಾ ಅಂತ ಗೊತ್ತು, ಆದ್ರೆ ಜಯಂತ್ ಒಳ್ಳೆಯವನಾಗಿಯೇ ಇರಲಿ ಎಂದಿದ್ದಾರೆ. 
 

77

ಮತ್ತೆ ಕೆಲವರು ಈ ಜಯಂತ್ ಸೈಕೋ ಲವರ್ (psycho lover) ತರ ಅನ್ಸುತ್ತೆ, ವಿಶ್ವ ಮೇಲೆ ಡೌಟ್ ಪಡೋದು, ಜಾಹ್ನವಿಗೆ ತೊಂದ್ರೆ ಕೊಡೋದು ಎಲ್ಲಾ ಮಾಡೋ, ಪೊಸೆಸಿವ್ ವ್ಯಕ್ತಿ ಇವನು ಅನಿಸುತ್ತೆ ಅಥವಾ ಯಾವುದೋ ಸೇಡು ತೀರಿಸೋಕೆ ಬಂದ ವಿಲನ್ ಅನಿಸುತ್ತೆ ಎಂದು ಮತ್ತೆ ಕೆಲವರು ಹೇಳಿದ್ದಾರೆ. 
 

Read more Photos on
click me!

Recommended Stories