ನನಗೆ 31 ಅಲ್ಲ, ಬರೀ 28 ವರ್ಷ, ಹುಟ್ಟುಹಬ್ಬ ದಿನ ಗೂಗಲ್‌ಗೆ ಕ್ಲಾಸ್ ತೆಗೆದುಕೊಂಡ ದೀಪಿಕಾ ದಾಸ್

First Published | Feb 23, 2024, 2:10 PM IST

ನಾಗಿಣಿ ಮತ್ತು ಬಿಗ್ ಬಾಸ್ ಖ್ಯಾತಿಯ ನಟಿ ದೀಪಿಕಾ ದಾಸ್ ಇಂದು ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಸಂದರ್ಭ ತನ್ನ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ಕೊಟ್ಟ ಗೂಗಲ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 
 

ಜನಪ್ರಿಯ ಟಿವಿ ಸೀರಿಯಲ್ ನಾಗಿಣಿ ಮೂಲಕ ಅಮೃತಾ ಆಗಿ ಮನೆಮಾತಾದ ನಟಿ ದೀಪಿಕಾ ದಾಸ್ (Deepika Das). ಆ ಒಂದು ಸೀರಿಯಲ್ ನ ನಟನೆಯಿಂದಾಗಿ ಇಂದಿಗೂ ಪ್ರೇಕ್ಷಕರು ಅವರನ್ನು ನಾಗಿಣಿಯಾಗಿಯೇ ನೆನಪಿಸಿಕೊಳ್ಳುತ್ತಾರೆ. 

ನಾಗಿಣಿ ಸೀರಿಯಲ್ ಮತ್ತು ಬಿಗ್ ಬಾಸ್ (Bigg Boss Kannada) ಎರಡು ಸೀಸನ್ ಗಳ ಮೂಲಕ ಜನಪ್ರಿಯತೆ ಗಳಿಸಿದ ಬಾಸ್ ಲೇಡಿ ದೀಪಿಕಾ ದಾಸ್ ಇಂದು ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ. 

Tap to resize

ಬಿಳಿ ಬಣ್ಣದ ಫ್ಲೋರಲ್ ಡ್ರೆಸ್ (Floral Dress) ಧರಿಸಿ, ಒಂದು ಕೈಯಲ್ಲಿ ರೋಸ್ ಬುಕ್ಕೆ ಮತ್ತೊಂದು ಕೈಯಲ್ಲಿ ಕಪ್ ಕೇಕ್ ಹಿಡಿದು, ಕಣ್ಣು ಮುಚ್ಚಿಕೊಂಡು ತಮ್ಮ ಮುದ್ದು ನಾಯಿ ಮರಿ ಜೊತೆಗೆ ಮುದ್ದಾಗಿ ಪೋಸ್ ಕೊಟ್ಟಿರುವ ದೀಪಿಕಾ ದಾಸ್ ತುಂಬಾನೆ ಕ್ಯೂಟ್ ಆಗಿ ಕಾಣಿಸುತ್ತಿದ್ದಾರೆ. 
 

ತಮ್ಮ ಫೋಟೋದ ಜೊತೆಗೆ ದೀಪಿಕಾ ಕ್ಯಾಪ್ಶನ್ ಕೂಡ ಹಾಕಿದ್ದು, ಆ ಮೂಲಕ ತಮ್ಮ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ಕೊಟ್ಟ ಗೂಗಲ್ (Google) ನ ಕಿವಿ ಹಿಂಡಿದ್ದಾರೆ. ಗೂಗಲ್ ನಲ್ಲಿ ದೀಪಿಕಾ ಹುಟ್ಟು ಹಬ್ಬದ ದಿನಾಂಕ 23 ಫೆಬ್ರುವರಿ 1993 ಅಂದ್ರೆ ಈಗ 31 ವರ್ಷ ಅಂತ ಇದೆ. 
 

ಇದನ್ನೆ ಇಟ್ಟುಕೊಂಡು ದೀಪಿಕಾ 'ಹೇ ಗೂಗಲ್ ನನಗೆ 31 ವರ್ಷ ಆಯ್ತು ಅಂತ ಹೇಳೋದನ್ನು ನಿಲ್ಸು. ನನಗೀಗ ಅಧಿಕೃತವಾಗಿ 28 ವರ್ಷ ವಯಸ್ಸಾಗಿದೆ ಅಷ್ಟೇ (ಆದರೂ 82ರಂತೆ ಫೀಲ್ ಆಗ್ತಿದೆ) ' ಎಂದು ಹೇಳುವ ಮೂಲಕ ಗೂಗಲ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಜೊತೆಗೆ ಥ್ಯಾಂಕ್ಸ್ ಯುನಿವರ್ಸ್,  ನನ್ನ ಜೀವನದಲ್ಲಿ ಆಗಿರುವ ಎಲ್ಲಾ ವಿಷಯಕ್ಕೂ ಥ್ಯಾಂಕ್ಸ್  ಎಂದು ಹೇಳುತ್ತಾ, ನನಗೆ ನಾನೇ ಮೊದಲಿಗೆ ವಿಶ್ ಮಾಡ್ತೀನಿ ಎಂದು ಹ್ಯಾಪಿ ಬರ್ತ್ ಡೇ ಮೈ ಸೆಲ್ಪ್ (happy birthday myself) ಎನ್ನುತ್ತಾ ಕ್ಯೂಟ್ ಆಗಿ ಬರೆದುಕೊಂಡಿದ್ದಾರೆ. 

ಇನ್ನು ನೆಚ್ಚಿನ ನಟಿಯ ಹುಟ್ಟು ಹಬ್ಬಕ್ಕೆ (birthday) ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ನೀವಿನ್ನು 18 ವರ್ಷದವರ ಹಾಗೇ ಇದ್ದೀರಾ, ಬ್ಯೂಟಿ ಕ್ವೀನ್ ನೀವು, ನಿಮ್ಮ ಎಲ್ಲಾ ಕನಸುಗಳು ಈಡೇರಲಿ, ಆದಷ್ಟು ಬೇಗ ಮತ್ತೆ ಕಿರುತೆರೆಗೆ ಬನ್ನಿ ಎಂದು ಹಾರೈಸಿದ್ದಾರೆ. 

Latest Videos

click me!