300 ಮದುವೆ ಪ್ರಪೋಸಲ್‌; 'ಸೀತಾ ರಾಮ' ವೈಷ್ಣವಿಗೆ ಮೆಸೇಜ್ ಮಾಡಿದವರು ಯಾರು?

Published : Feb 23, 2024, 12:38 PM IST

ಮೋಸ್ಟ್‌ ಎಲಿಜಿಬಲ್‌ ಟು ಮ್ಯಾರಿ ಹುಡುಗಿ ವೈಷ್ಣವಿ ಗೌಡಗೆ ಇದುವರೆಗೂ 300 ಲವ್ ಆಂಡ್ ಮ್ಯಾರೇಜ್ ಪ್ರಪೋಸಲ್‌ ಬಂದಿದೆ. ಆಮೇಲೆ ಏನಾಯ್ತು? 

PREV
18
300 ಮದುವೆ ಪ್ರಪೋಸಲ್‌; 'ಸೀತಾ ರಾಮ' ವೈಷ್ಣವಿಗೆ ಮೆಸೇಜ್ ಮಾಡಿದವರು ಯಾರು?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿಯಲ್ಲಿ ಮಿಂಚುತ್ತಿರುವ ವೈಷ್ಣವಿಗೆ ಎಷ್ಟು ಪ್ರಪೋಸಲ್‌ ಬಂದಿದೆ ಗೊತ್ತಾ? 

28

ಬಿಗ್ ಬಾಸ್‌ನಲ್ಲಿ ಸ್ಪರ್ಧಿಸಿರುವ ವೈಷ್ಣವಿ ಎಲಿಮಿನೇಟ್ ಆಗಿ ಹೊರ ಬರುತ್ತಿದ್ದಂತೆ ಸುದೀಪ್‌ ನಿಮ್ಮ ಪ್ರಕಾರ ಅಂದಾಜು ಎಷ್ಟು ಲವ್ ಪ್ರಪೋಸಲ್‌ ಬಂದಿದೆ ಎಂದು ಕೇಳಿದ್ದರು.

38

ಕಿಚ್ಚ ಸುದೀಪ್ ಪ್ರಶ್ನೆಗೆ ಆಲೋಚನೆ ಮಾಡಿ ಉತ್ತರಿಸಿದ ವೈಷ್ಣವಿ ಅವರು, ಸುಮಾರು 200ರಿಂದ 300 ಪ್ರಪೋಸಲ್‌ಗಳು ಬಂದಿವೆ ಎಂದು ಹೇಳಿದ್ದಾರೆ. 

48

 ಇದನ್ನು ಕೇಳಿದ ಸುದೀಪ್ ಆಹ್... ಎಂದು ಶಾಕ್ ಆಗಿ ಕೇಳುತ್ತಾ ಈ 200.., 300 ಪ್ರಪೋಸಲ್‌ಗಳಲ್ಲಿ ಯಾವುದೂ ಕರೆಕ್ಟ್ ಆಗಿದೆ ಅಂತ ಅನಿಸಲೇ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

58

 ನನಗೆ ಲವ್ ಪ್ರಪೋಸಲ್‌ಗಳನ್ನು ನೋಡಬೇಕು ಅಂತಾನೇ ಅನಿಸಲಿಲ್ಲ ಸರ್. ನಾನು ಯಾವಾಗಲೂ ಮನಸ್ಸಿನ ಮಾತುಗಳನ್ನು ಕೇಳುವಂತಹ ಹುಡುಗಿ. 

68

 ಆದ್ದರಿಂದ ನನ್ನ ಮನಸ್ಸು ಕೂಡ ಯಾವುದೇ ಪ್ರಪೋಸಲ್‌ಗಳನ್ನು ನೋಡುವುದಕ್ಕೆ ಪ್ರೇರಣೆಯೇ ಆಗಲಿಲ್ಲ ಎಂದಿದ್ದಾರೆ.ಯಾವುದೇ ಪ್ರಪೋಸಲ್‌ಗಳು ನನಗೆ ಕನೆಕ್ಟ್ ಆಗಲೇ ಇಲ್ಲ. 

78

 ಯಾವುದೇ ಪ್ರಪೋಸ್‌ಗಳ ವೈಬ್ಸ್ ನನ್ನ ಮನಸ್ಸಿಗೆ ಮುಟ್ಟಲಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುದೀಪ್ ಅವುಗಳನ್ನು ನೋಡದೇ ಹೇಗೆ ಕನೆಕ್ಟ್ ಆಗುತ್ತದೆ ಎಂದು ಕೆಣಕಿದ್ದಾರೆ.

88

ಆಗ ಅದು ನಮ್ಮ ಮನಸ್ಸಿಗೆ ಅನ್ನಿಸಬೇಕು ಸರ್.. ಒಬ್ಬರನ್ನು ಪ್ರೀತಿ ಮಾಡಬೇಕು ಅಂದರೆ ಅವರ ಮುಖವನ್ನು ನೋಡಬೇಕು ಅಂತೇನಿಲ್ಲ ಎಂದಿದ್ದಾರೆ. ಪುನಃ ಶಾಕ್‌ ಆದ ಸುದೀಪ್‌ ಮತ್ತೆ ಇನ್ನೇನು ನೋಡಬೇಕು ಎಂದು ಕೇಳಿದ್ದಾರೆ. 

Read more Photos on
click me!

Recommended Stories