Kannada singer Aishwarya Rangarajan: ಅವಾರ್ಡ್ಸ್ ವೇದಿಕೆಯಲ್ಲಿ ಪ್ರಸಿದ್ಧ ಗಾಯಕಿ ಐಶ್ವರ್ಯ ರಂಗರಾಜನ್ ಅವರ ಪತಿ ನೀಡಿದ ಆ ಒಂದು ತಮಾಷೆಯ ಉತ್ತರ, ಇಡೀ ಸಭಿಕರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ! ಹಾಗಾದ್ರೆ, ಐಶ್ವರ್ಯಗೆ ಅವರ ಗಂಡ ಮನೆಯಲ್ಲಿ ಏನೆಂದು ಕರೆಯುತ್ತಾರೆ?
ಇತ್ತೀಚೆಗೆ ನಡೆದ 'ಚಿತ್ತಾರ ಮ್ಯೂಸಿಕ್ ಅವಾರ್ಡ್ಸ್ 2025' ಕಾರ್ಯಕ್ರಮದ ವೇದಿಕೆಯಲ್ಲಿ ಚಂದನವನದ ಪ್ರಸಿದ್ಧ ಗಾಯಕಿ ಐಶ್ವರ್ಯ ರಂಗರಾಜನ್ (Aishwarya Rangarajan) ಹಾಗೂ ಅವರ ಪತಿಯ ನಡುವೆ ನಡೆದ ತಮಾಷೆಯ ಸಂಭಾಷಣೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ.
26
ಹೆಸರು ಸ್ವಲ್ಪ ಮರೆತುಹೋಗುತ್ತೆ
ಕಾರ್ಯಕ್ರಮದ ವೇಳೆ ನಿರೂಪಕಿ ಅನುಪಮಾ ಗೌಡ, "ಮನೆಯಲ್ಲಿ ಹೆಂಡತಿಯನ್ನು ಏನೆಂದು ಕರೆಯುತ್ತೀರಿ?" ಎಂದು ಪ್ರಶ್ನಿಸಿದಾಗ, ಐಶ್ವರ್ಯ ಅವರ ಪತಿ "ನಾನು ಇವಳೇ ಅಂತಾನೇ ಕರೆಯೋದು, ಯಾಕಂದ್ರೆ ಹೆಸರು ಸ್ವಲ್ಪ ಮರೆತುಹೋಗುತ್ತೆ" ಎಂದು ತಮಾಷೆ ಮಾಡಿದರು. ಪತಿಯ ಈ ಹೇಳಿಕೆ ಕೇಳಿ ಐಶ್ವರ್ಯ ರಂಗರಾಜನ್ ಸೇರಿದಂತೆ ಸಭೆಯಲ್ಲಿದ್ದ ಇಡೀ ಚಿತ್ರರಂಗದ ಗಣ್ಯರು ಜೋರಾಗಿ ನಕ್ಕರು.
36
ಐಶ್ವರ್ಯ ಹೇಳಿದ್ದೇನು?
ಇದಕ್ಕೆ ಮುದ್ದಾಗಿ ಸ್ಪಷ್ಟನೆ ನೀಡಿದ ಐಶ್ವರ್ಯ, "ನಾವು ಮೊದಲಿನಿಂದಲೂ ಬೆಸ್ಟ್ ಫ್ರೆಂಡ್ಸ್ ಆಗಿದ್ದೆವು. ಆ ಫ್ರೆಂಡ್‌ಶಿಪ್ ದಾಟಿ ಹಸ್ಬೆಂಡ್-ವೈಫ್ ರಿಲೇಶನ್‌ಶಿಪ್‌ಗೆ ಬಂದು 'ಗೃಹಸ್ಥ'ನಾಗಲು ಅವರಿಗೆ ಇನ್ನು ಸ್ವಲ್ಪ ಸಮಯ ಬೇಕಿದೆ" ಎಂದು ನಗುತ್ತಾ ಸಮರ್ಥಿಸಿಕೊಂಡರು.
ಮದುವೆಯ ನಂತರದ ಮೊದಲ ಪ್ರಶಸ್ತಿ ಸಂಸಾರಿಕ ಜೀವನದ ತಮಾಷೆಯ ಮಾತುಗಳ ನಡುವೆಯೇ ಐಶ್ವರ್ಯ ರಂಗರಾಜನ್ ತಮ್ಮ ಸಂತಸವನ್ನು ಹಂಚಿಕೊಂಡರು. "ಮದುವೆಯಾದ ತಕ್ಷಣವೇ ನನ್ನ ಇಡೀ ಕುಟುಂಬದವರು (ಅಮ್ಮ, ಅಣ್ಣ, ಅತ್ತಿಗೆ) ಮತ್ತು ನನ್ನ ಪತಿಯ ಎದುರಲ್ಲೇ ಪಡೆಯುತ್ತಿರುವ ಮೊದಲ ಪ್ರಶಸ್ತಿ ಇದಾಗಿದ್ದರಿಂದ ಇದು ನನಗೆ ಅತ್ಯಂತ ವಿಶೇಷವಾದದ್ದು" ಎಂದು ಪ್ರಶಸ್ತಿ ಸ್ವೀಕರಿಸಿ ಭಾವುಕರಾದರು.
ವೇದಿಕೆಯ ಮೇಲಿನ ಈ ಕ್ಯೂಟ್ ಹಾಗೂ ಫನ್ನಿ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ದಂಪತಿಯ ಸಂಭಾಷಣೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
56
ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದ ಐಶ್ವರ್ಯ
ಐಶ್ವರ್ಯ ಅವರು ಚಿಕ್ಕ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಮತ್ತು ವೀಣೆ ಅಭ್ಯಾಸ ಮಾಡಿದ್ದು, ವೆಸ್ಟರ್ನ್ ಹಾಗೂ ಭಕ್ತಿಗೀತೆಗಳಲ್ಲೂ ಪರಿಣಿತಿ ಹೊಂದಿದ್ದಾರೆ. ಜೀ ವಾಹಿನಿಯ ಸರಿಗಮಪ ಹಾಗೂ 'ವಾಯ್ಸ್ ಆಫ್ ಬೆಂಗಳೂರು' ಮುಂತಾದ ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದರು.
66
ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ಗಾಯಕಿ
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಅತ್ಯಂತ ಬೇಡಿಕೆಯ ಗಾಯಕಿಯಾಗಿ ಗುರುತಿಸಿಕೊಂಡಿದ್ದು, ಕಲ್ಪನಾ 2, ಹ್ಯಾಪಿ ನ್ಯೂ ಇಯರ್, ದುನಿಯಾ 2, ಕನ್ನಡ ಗೊತ್ತಿಲ್ಲ, ಆದಿಲಕ್ಷ್ಮಿ ಪುರಾಣ ಮುಂತಾದ ಹಿಟ್ ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಟಿ. ಎನ್. ಸೀತಾರಾಮ್ ಅವರ ಪ್ರಸಿದ್ಧ ಧಾರಾವಾಹಿ ಮಗಳು ಜಾನಕಿಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಜನಿಸಿ ಬೆಳೆದ ಇವರು ಎಂ.ಇ.ಎಸ್ ಪದವಿ ಕಾಲೇಜಿನಲ್ಲಿ ಶಿಕ್ಷಣ ಪೂರ್ಣಗೊಳಿಸಿದ್ದು, ಮಂಗಳೂರು ಮೂಲದ ಸಾಯಿ ಸ್ವರೂಪ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.