ನನಗೆ ವಯಸ್ಸಾಗಿಲ್ಲ, ಇದು ನನ್ನ 2ನೇ ಮದುವೆನೂ ಅಲ್ಲ; ನೆಟ್ಟಿಗರಿಗೆ 'ಗಟ್ಟಿಮೇಳ' ನಟಿ ಸ್ವಾತಿ ಕ್ಲಾರಿಟಿ

First Published | Mar 31, 2023, 3:35 PM IST

ಸೀರಿಯಲ್‌ನಲ್ಲಿ ಖಡಕ್‌ ವಿಲನ್‌ ಆಗಿ ಮಿಂಚುವ ಸ್ವಾತಿ ವೈವಾಹಿಕ ಜೀವನದ ಬಗ್ಗೆ ಅನೇಕ ಗಾಸಿಪ್‌ಗಳು ಕೇಳಿ ಬಂದಿತ್ತು. ಅದರ ಬಗ್ಗೆ ಕ್ಲಾರಿಟಿ ಕೊಟ್ಟಿದ್ದಾರೆ...  
 

ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಸ್ವಾತಿ ಕೆಲವು ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸಾಮಾಜಿಕ ಜಾಲತಾಣದಲ್ಲಿ ಸಂತೂರ್ ಮಮ್ಮಿ ಎರಡನೇ ಮದುವೆ ಎಂದು ಕಾಲೆಳೆದಿದ್ದಾರೆ. ಅದಿಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. 

'ವೈವಾಹಿಕ ಜೀವನದಲ್ಲಿ ಖುಷಿಯಾಗಿರುವೆ. ನನ್ನ ಸ್ನೇಹಿತನನ್ನು ಮದುವೆ ಮಾಡಿಕೊಂಡಿರುವೆ ಹೀಗಾಗಿ ನನ್ನ ಬೆಸ್ಟ್‌ ಫ್ರೆಂಡ್‌ ನನ್ನ ಲೈಫ್‌ ಪಾರ್ಟನರ್ ಆಗಿದ್ದಾರೆ. ನನ್ನ ಬಗ್ಗೆ ಸಂಪೂರ್ಣವಾಗಿ ಗೊತ್ತಿರುವ ಕಾರಣ ಎಲ್ಲವೂ ಸ್ಮೂತ್ ಆಗಿ ನಡೆಯುತ್ತಿದೆ ಎಂದು ಕನ್ನಡ ಖಾಸಗಿ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

Tap to resize

'ನನ್ನ ಗಂಡನ ಮನೆ ಕಡೆ ತುಂಬಾ ತಪ್ಪು ತಿಳಿದುಕೊಂಡಿದ್ದು ಹುಡುಗಿಗೆ ಎರಡನೇ ಮದುವೆ ಮೂರನೇ ಮದುವೆ ನಾ ಎಂದು. ಆ ನಂತರ ಅದು ಸೀರಿಯಲ್ ಮದುವೆ ಎಂದು ಕ್ಲಾರಿಟಿ ಕೊಟ್ಟರು'

'ಮದುವೆ ಫೋಟೋ ಹಾಕಿದಾಗ ಅನೇಕರು ಎರಡನೇ ಮದುವೆ ಎನ್ನುತ್ತಿದ್ದರ ಹೀಗಾಗಿ ಅನೇಕರಿಗೆ ಕ್ಲಾರಿಟಿ ಕೊಡಬೇಕು ಸೀರಿಯಲ್‌ನಲ್ಲಿ ತಾಯಿ ಪಾತ್ರ ಮಾಡ್ತೀನಿ ಆದರೆ ರಿಯಲ್ ಲೈಫ್‌ನಲ್ಲಿ ನನಗೆ ಅಷ್ಟೋಂದು ಮದುವೆ ಆಗಿಲ್ಲ ಇತ್ತೀಚಿಗೆ ನಾನು ಮದುವೆ ಆಗಿರುವುದು ಹಾಗೂ ಇದು ನನ್ನ ಮೊದಲನೇ ಮದುವೆ'

'ವಿಲನ್ ಪಾತ್ರ ಮಾಡುತ್ತಿರುವುದಕ್ಕೆ ಅನೇಕರು ಬೈದಿದ್ದಾರೆ ಅಲ್ಲದೆ ಶ್ರೀಮಂತೆ ಕುಟುಂಬದ ಅತ್ತೆ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ. ಕಥೆ ಚೆನ್ನಾಗಿದೆ ಎಂದು ಆಯ್ಕೆ ಮಾಡುವೆ ಸಿರಿವಂತೆ ಅಲ್ಲ ಬಡವರ ಪಾತ್ರದಲ್ಲೂ ಕಾಣಿಸಿಕೊಳ್ಳುವುದಕ್ಕೆ ಇಷ್ಟ ಪಡುವೆ'

'ಅನೇಕರು ನಾನು ಧರಿಸುವ ಉಡುಪುಗಳನ್ನು ನೋಡಲು ಕಾಯುತ್ತಿರುತ್ತಾರೆ. ಎರಡು ಸಾವಿರಕ್ಕೂ ಹೆಚ್ಚು ಸೀರೆಗಳಿದೆ, 50-60 ಹ್ಯಾಂಡ್‌ಬ್ಯಾಗ್‌ಗಳಿದೆ ಲೆಕ್ಕ ಮಾಡದಷ್ಟು ಚಪ್ಪಲಿಗಳಿದೆ. 

ಅದೆಷ್ಟೇ ಬಟ್ಟೆ ಇದ್ರೂ ಬಟ್ಟೆ ಇಲ್ಲ ಬಟ್ಟೆ ಇಲ್ಲ ಅನಿಸುತ್ತದೆ.  ಧಾರಾವಾಹಿ ಹೊರತು ಪಡಿಸಿ ನಾನು ಮೇಕಪ್ ಇಲ್ಲದೆ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತೀನಿ. ನನ್ನ ವೃತ್ತಿ ಜೀವನಕ್ಕೆ ಸಪೋರ್ಟ್‌ ಮಾಡುವ ಪಾರ್ಟ್‌ನರ್ ಆಂಡ್ ಫ್ಯಾಮಿಲಿ ಸಿಕ್ಕಿದೆ ಎಂದು ಸ್ವಾತಿ ಹೇಳಿದ್ದಾರೆ. 

Latest Videos

click me!