ಕಿರುತೆರೆ ನಟಿ ರಾಧಿಕಾ ರಾವ್‌ ಗರ್ಭಿಣಿ; ವಿಶೇಷ ಫೋಟೋ ವೈರಲ್?

First Published | Mar 29, 2023, 2:45 PM IST

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ರಾಧಿಕಾ ರಾವ್. ಕಾಮೆಂಟ್ಸ್‌ಗಳಲ್ಲಿ ವಿಶ್ ಮಾಡಿದ ಸಿನಿ ಸ್ನೇಹಿತರು ಮತ್ತು ಆಪ್ತರು...

ಮಂಗಳೂರು ಚೆಲುವೆ ರಾಧಿಕಾ ರಾವ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ.

 'You + Me = Three' ಎಂದು ಬರೆದುಕೊಂಡು ಪತಿ ಜೊತೆಗಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ನೇರಳೆ ಬಣ್ಣದ ಸೀರೆಯಲ್ಲಿ ರಾಧಿಕಾ ಹಾಗೂ ನೀಲಿ ಬಣ್ಣದ ಔಟ್‌ಫಿಟ್‌ನಲ್ಲಿ ಪತಿ ಕಾಣಿಸಿಕೊಂಡಿದ್ದಾರೆ.

Tap to resize

 ರಾಧಾ ಕಲ್ಯಾಣ ಧಾರಾವಾಹಿಯಲ್ಲಿ ರಾಧಿಕಾ ಅಭಿನಯಿಸಿ ಕನ್ನಡ ಕಿರುತೆರೆ ವೀಕ್ಷಕರಿಗೆ ತುಂಬಾ ಹತ್ತಿರವಾಗಿದ್ದಾರೆ. ಮದುವೆ ನಂತರ ಬಣ್ಣದ ಪ್ರಪಂಚದಿಂದ ಬ್ರೇಕ್ ತೆಗೆದುಕೊಂಡಿದ್ದರು.

ಮಾರ್ಚ್‌ 11, 2020ರಲ್ಲಿ ರಾಧಿಕಾ ಮತ್ತು ಆಕರ್ಷ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟರು.  2019ರ ಮಾರ್ಚ್‌ನಲ್ಲಿ ಕಾಮನ್ ಫ್ರೆಂಡ್ ಮೂಲಕ ಪರಿಚಯವಾದರು.

ಪರಿಚಯವಾದ 6 ತಿಂಗಳಿಗೆ ಆಕರ್ಷ್‌ ಡಿಫರೆಂಟ್ ಆಗಿ ಪ್ರಪೋಸ್ ಮಾಡಿದ್ದರು. ಓಕೆ ಹೇಳಿದ ರಾಧಿಕಾ ಅಕ್ಟೋಬರ್‌ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು.

 ಮಂಗ್ಳೂರ್ ಹುಡ್ಗಿ, ಹುಬ್ಳಿ ಹುಡುಗ ಧಾರವಾಹಿ ಇವರ ಸಿನಿ ಬದುಕನ್ನೇ ಬದಲಾಯಿಸಿತ್ತು. ಭಾಷೆ ಬೇರೆ, ಸಂಸ್ಕೃತಿ ಸಂಪ್ರದಾಯ, ಆಚಾರ ವಿಚಾರಗಳೇ ಬೇರೆ ಬೇರೆಯಾಗಿರುವ ಈ ಕಥೆ ಕರ್ನಾಟಕದಲ್ಲಿ ಒಂದು ರೀತಿಯ ಹವಾ ಕ್ರಿಯೆಟ್ ಮಾಡಿತ್ತು.

Latest Videos

click me!