ಗೋಲ್ಡನ್ ಸೀರೇಲಿ ಚಿನ್ನದ ಗೊಂಬೆಯಂತೆ ಮಿಂಚಿದ ಹಿಟ್ಲರ್ ಕಲ್ಯಾಣದ ಲೀಲಾ ಆಲಿಯಾಸ್ ಮಲೈಕಾ

Published : Mar 29, 2023, 04:36 PM IST

ಹಿಟ್ಲರ್ ಕಲ್ಯಾಣದ ಎಡವಟ್ಟು ರಾಣಿ ಲೀಲಾ ಆಲಿಯಾಸ್ ಮಲೈಕಾ ವಸುಪಾಲ್ ಗೋಲ್ಡನ್ ಬಣ್ಣದ ಸೀರೆಯುಟ್ಟ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಮಲೈಕಾ ನೋಡಿದ ನೆಟ್ಟಿಗರು ಬಂಗಾರದ ಗೊಂಬೆ ಎಂದು ಹೇಳ್ತಿದ್ದಾರೆ. 

PREV
17
ಗೋಲ್ಡನ್ ಸೀರೇಲಿ ಚಿನ್ನದ ಗೊಂಬೆಯಂತೆ ಮಿಂಚಿದ ಹಿಟ್ಲರ್ ಕಲ್ಯಾಣದ ಲೀಲಾ ಆಲಿಯಾಸ್ ಮಲೈಕಾ

ಕಿರುತೆರೆಯ ಟಾಪ್‌ ಧಾರಾವಾಹಿಯಗಳಲ್ಲಿ 'ಹಿಟ್ಲರ್ ಕಲ್ಯಾಣ' (Hitler Kalyana Serial) ಕೂಡ ಒಂದು. ಈ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಭಾರಿ ಸದ್ದು ಮಾಡುತ್ತಿರುವ ಮುದ್ದು ಹುಡುಗಿ ಮಲೈಕಾ ವಸುಪಾಲ್. ಸದ್ಯ ಸೀರಿಯಲ್ ನಲ್ಲಿ ಮದುವೆ ಎಪಿಸೋಡ್ ನಡೆಯುತ್ತಿರೋದ್ರಿಂದ ಮದುವೆಯ ಗೋಲ್ಡನ್ ಕಲರ್ ಸೀರೆ ಮತ್ತು ಮರೂನ್ ಬ್ಲೌಸ್ ಧರಿಸಿರುವ ಫೋಟೋಗಳನ್ನು ಮಲೈಕಾ ಆಲಿಯಾಸ್ ಲೀಲಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. 

27

ದಂತದ ಗೊಂಬೆಯಂತೆ ಮೈಬಣ್ಣ ಹೊಂದಿರುವ ಸುಂದರೆ ಎಡವಟ್ಟು ಲೀಲಾ ಆಲಿಯಾಸ್ ಮಲೈಕಾ (Malaika Vasupal). ಇದೀಗ ಎಜೆ ಜೊತೆ ಮತ್ತೆ ಹಸೆಮಣೆ ಏರುವ ಸಂದರ್ಭದಲ್ಲಿದ್ದಾರೆ. ಇವರ ಮದುವೆ ಸೀರೆ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಈ ಸೀರೆಯಲ್ಲಿ ನಟಿ ಬಂಗಾರದ ಬೊಂಬೆಯಂತೆ ಕಾಣಿಸುತ್ತಿದ್ದಾರೆ. 
 

37

ಇನ್ನು ಮಲೈಕಾ ವಸುಪಾಲ್ ಬಗ್ಗೆ ಹೇಳೋದಾದ್ರೆ ದಾವಣಗೆರೆ ಮೂಲದ ಚೆಲುವೆಗೆ ಬಾಲ್ಯದಿಂದಲೂ ಆ್ಯಕ್ಟಿಂಗ್ ಅಂದರೆ ಪ್ರಾಣ.  ಆದ್ರೆ ತಂದೆ ತಾಯಿ ಒತ್ತಾಯಕ್ಕೆ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ಪದವಿ ಬಳಿಕವಷ್ಟೆ ಅವರು ಆಕ್ಟಿಂಗ್ ಜಗತ್ತಿಗೆ ಕಾಲಿಟ್ಟಿದ್ದಾರೆ. 

47

ದೀಲಿಪ್ ರಾಜ್ (Dileep Raj) ತಮ್ಮ ಹಿಟ್ಲರ್ ಕಲ್ಯಾಣಕ್ಕಾಗಿ ಮುಗ್ದ ಮುಖದ ಸುಂದರಿಯ ಹುಡುಕಾಟದಲ್ಲಿದ್ದರು. ಆಗ ಸಿಕ್ಕಿದ್ದೇ ಎಡವಟ್ಟು ರಾಣಿ ಲೀಲಾ/ ಮಲೈಕಾ ವಸುಪಾಲ್. ಇದು ಮಲೈಕಾ ಮೊದಲ ಸೀರಿಯಲ್ ಆಗಿದ್ದರೂ, ನಟನೆಯಂತೂ ಪ್ರೇಕ್ಷರನ್ನು ಮೋಡಿ ಮಾಡಿದ್ದಂತೂ ಸುಳ್ಳಲ್ಲ. 

57

ಮಲೈಕಾಗೆ ಚಿಕ್ಕಂದಿನಿಂದಲೂ ನಟನೆಯಲ್ಲಿ ಆಸಕ್ತಿ, ಅವರು ಶಾಲಾ ಕಾಲೇಜಿನ ಕಾರ್ಯಕ್ರಮದಲ್ಲಿ ನೃತ್ಯದಲ್ಲಿ ಭಾಗವಹಿಸುತ್ತಿದ್ದರು. ಕಾಲೇಜು ಕಲಿಯುವಾಗಲೇ ನಟಿಸುವಂತೆ ಅವರಿಗೆ ಆಫರ್ಸ್ ಬರುತ್ತಿದ್ದವು. ಆದರೆ ಮನೆಯಲ್ಲಿ ಶಿಕ್ಷಣ ಮೊದಲು ಮುಗಿಸು ಎಂದಿದ್ದರಿಂದ, ಸಿವಿಲ್‌ ಎಂಜಿನಿಯರಿಂಗ್‌ (Civil engineering) ಪದವಿ ಪಡೆದ ಬಳಿಕ ಮಲೈಕಾ ನಟನಾ ಜಗತ್ತಿಗೆ ಎಂಟ್ರಿ ಕೊಟ್ಟಿದ್ದಾರೆ. 

67

ಇನ್ನು ಕಿರುತೆರೆಗೆ ನೇರವಾಗಿ ಹಿರಿತೆರೆಗೆ ಚಾನ್ಸ್ ಗಿಟ್ಟಿಸಿಕೊಂಡಿರುವ ಮಲೈಕಾ, ಇದೀಗ ಚಿಕ್ಕಣ್ಣ ಹೀರೋ ಆಗಿರುವ ಮೊದಲ ಸಿನಿಮಾದಲ್ಲೇ ನಾಯಕಿಯಾಗಿದ್ದು, ಸಿನಿಮಾ ಶೂಟಿಂಗ್ ಕೂಡ ಮುಗಿದಿದ್ದು, ಸದ್ಯದಲ್ಲೇ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಕೂಡ ಇದೆ.

77

ತಮ್ಮ ಮೊದಲ ಸಿನಿಮಾದಲ್ಲೇ ದೊಡ್ಡ ಬ್ಯಾನರ್‌ ಜೊತೆಗೆ ಕೆಲಸ ಮಾಡುವ ಅವಕಾಶ ಮಲೈಕಾಗೆ ಒಲಿದುಬಂದಿದೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿರುವ 'ಉಪಾಧ್ಯಕ್ಷ'  (Upadhyaksha Movie) ಚಿತ್ರದ ಮೂಲಕ ಮಲೈಕಾ ಚಂದನವನಕ್ಕೆ ಕಾಲಿಟ್ಟಿದ್ದು, ಮುಂದೆ ತಾನು ಅಂದುಕೊಂಡಂತೆ ಹೆಚ್ಚು ಹೆಚ್ಚು ಚಲನಚಿತ್ರ, ಸೀರಿಯಲ್ ಗಳಲ್ಲಿ ಅಭಿನಯಿಸಿ ಸಾಧನೆ ಮಾಡಲಿ ಎಂದು ಹಾರೈಸೋಣ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories