ಹಳ್ಳಿ ಪವರ್-ರಿ ಲೋಡೆಡ್ ರಿಯಾಲಿಟಿ ಶೋ ವಿನ್ನರ್ ಯಾರು? ವಿಜೇತರಿಗೆ ಸಿಗೋ ಹಣ ಎಷ್ಟು?

Published : Nov 19, 2026, 01:11 PM IST

ಜೀ ಕನ್ನಡ ವಾಹಿನಿಯ 'ಹಳ್ಳಿ ಪವರ್-ರಿ ಲೋಡೆಡ್' ರಿಯಾಲಿಟಿ ಶೋನ ಫಿನಾಲೆ ಐಹೊಳೆಯಲ್ಲಿ ಮುಕ್ತಾಯಗೊಂಡಿದೆ. ವೈರಲ್ ವಿಡಿಯೋಗಳ ಪ್ರಕಾರ, ಫಿನಾಲೆಯಲ್ಲಿ ಇಬ್ಬರು ಸ್ಪರ್ಧಿಗಳು ನಿಂತಿದ್ದಾರೆ. ಈ ವಾರ ಫಿನಾಲೆ ಸಂಚಿಕೆ ಪ್ರಸಾರವಾಗಲಿದೆ.

PREV
15
ಹಳ್ಳಿ ಪವರ್-ರಿ ಲೋಡೆಡ್

ಜೀ ಕನ್ನಡ ವಾಹಿನಿಯಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಪ್ರಸಾರವಾಗುತ್ತಿರುವ ಅತಿದೊಡ್ಡ ರಿಯಾಲಿಟಿ ಶೋ ಹಳ್ಳಿ ಪವರ್-ರಿಲೋಡೆಡ್‌ಗೆ ಈ ವಾರ ತೆರೆ ಬೀಳಲಿದೆ. ಕಳೆದ ನಾಲ್ಕು ತಿಂಗಳಿನಿಂದ ಬಾಗಲಕೋಟೆ ಜಿಲ್ಲೆಯ ಐತಿಹಾಸಿಕ ಗ್ರಾಮ ಐಹೊಳೆಯಲ್ಲಿ ಜೀ ಕನ್ನಡ ತಂಡ ಬೀಡು ಬಿಟ್ಟಿತ್ತು. ಫಿನಾಲೆ ಸಂಚಿಕೆಯ ಚಿತ್ರೀಕರಣ ಮುಕ್ತಾಯಗೊಂಡಿದ್ದು, ವಿಡಿಯೋ ಕ್ಲಿಪ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

25
ನಿವೇದಿತಾ vs ಬಿಬಿ

ಕಳೆದ ವರ್ಷ ಜೀ ಪವರ್ ವಾಹಿನಿಯಲ್ಲಿ ಪ್ರಸಾರವಾಗಿ ಜನಪ್ರಿಯತೆ ಪಡೆದುಕೊಂಡಿದ್ದ ಹಳ್ಳಿ ಪವರ್, ಈ ಬಾರಿ ಜೀ ಕನ್ನಡಕ್ಕೆ ಶಿಫ್ಟ್ ಆಗಿತ್ತು. 2025ರಲ್ಲಿ ಬೆಳಗಾವಿ ಜಿಲ್ಲೆಯ ಸಂಗೊಳ್ಳಿಯಲ್ಲಿ ಕಾರ್ಯಕ್ರಮ ನಡೆದಿತ್ತು. ಈ ಬಾರಿ ಬಾಗಲಕೋಟೆಗೆ ಶಿಫ್ಟ್ ಆಗಿತ್ತು. 2026ರ ರೀಲೋಡೆಡ್ ಸೀಸನ್‌ನಲ್ಲಿ ವೀರ ಸೈನಿಕ ನಿವೇದಿತಾ ರೈ ಮತ್ತು ಬೆಂಕಿ ಬಿಬಿ ಹಜೀರಾ ಫಿನಾಲೆಯಲ್ಲಿ ನಿಂತ್ಕೊಂಡಿದ್ದಾರೆ.

35
ವಿನ್ನರ್ ಹೆಸರು ಘೋಸಿಸುವ ವಿಡಿಯೋ ತುಣುಕು

ಕಾರ್ಯಕ್ರಮ ಆರಂಭದಿಂದಲೂ ಈ ಇಬ್ಬರು ಸ್ಪರ್ಧಿಗಳು ವೀಕ್ಷಕರನ್ನು ರಂಜಿಸುತ್ತಾ ಬಂದಿದ್ದಾರೆ. ತಮ್ಮ ಪ್ರಖರ ಮಾತುಗಳಿಂದ ಬಿಬಿ ಹಜೀರಾ ಅಭಿಮಾನಿಗಳನ್ನು ಸಂಪಾದಿಸಿದ್ರ, ವೀರ ಸೈನಿಕ ನಿವೇದಿತಾ ತಮ್ಮ ಸಂಯಮದ ಆಟದಿಂದ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ವೇದಿಕೆ ಮೇಲೆ ನಿರೂಪಕ ಅಕುಲ್ ಬಾಲಾಜಿ, ಇಬ್ಬರು ಸ್ಪರ್ಧಿಗಳ ಕೈಯನ್ನು ಹಿಡಿದುಕೊಂಡು ವಿನ್ನರ್ ಹೆಸರು ಘೋಸಿಸುವ ವಿಡಿಯೋ ತುಣುಕುಗಳು ವೈರಲ್ ಆಗುತ್ತಿವೆ.

45
ಯಾರು ವಿನ್ನರ್?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋ ವಿಡಿಯೋ ಪ್ರಕಾರ, ನಿವೇದಿತಾ ಹಳ್ಳಿ ಪವರ್ ಕಾರ್ಯಕ್ರಮದ ವಿಜೇತೆಯಾಗಿದ್ದಾರೆ. ಬೆಂಕಿ ಬಿಬಿ ಹಜೀರಾ ಅವರು ಹಳ್ಳಿ ಪವರ್ ಶೋನ ಮೊದಲ ರನ್ನರ್ ಅಪ್ ಆಗಿ ಹೊರ ಹೊಮ್ಮಿದ್ದಾರೆ. ಸೆಮಿ ಫಿನಾಲೆ ವಾರಕ್ಕೆ ಸೀಸನ್ 1ರ ಸ್ಪರ್ಧಿಗಳು ಕಾರ್ಯಕ್ರಮಕ್ಕೆ ಆಗಮಿಸಿ, ಹಾಲಿ ಆಟಗಾರರಿಗೆ ಜೋಶ್ ತುಂಬಿದ್ದರು.

55
ಎಷ್ಟು ಬಹುಮಾನ?

ರಿಯಾಲಿಟಿ ಶೋ ಹಳ್ಳಿ ಪವರ್-ರಿಲೋಡೆಡ್‌ ರಿಯಾಲಿಟಿ ಶೋ ವಿನ್ನರ್‌ಗೆ 20 ಲಕ್ಷ ರೂಪಾಯಿ ನಗದು ಬಹುಮಾನ ಸಿಗಲಿದೆ. ಇನ್ನುಳಿದಂತೆ ಕಾರ್ಯಕ್ರಮದ ಆಯೋಜಕ ಕಂಪನಿಗಳಿಂದ ಒಂದಿಷ್ಟು ಉಡುಗೊರೆಗಳು ಸಿಗಲಿವೆ. ವೀರ ಸೈನಿಕ ನಿವೇದಿತಾ 20 ಲಕ್ಷ ರೂಪಾಯಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories