Annayya Serial: ಜಿಮ್ ಸೀನಾಗೆ ಬಂದ ಪರಿಸ್ಥಿತಿ ಯಾರಿಗೂ ಬಾರದೇ ಇರ್ಲಿ ಅಂತಿದ್ದಾರಲ್ಲ ಜನ!

Published : Jul 14, 2025, 05:27 PM IST

ಅಣ್ಣಯ್ಯ ಸೀರಿಯಲ್ ಪ್ರೊಮೋ ನೋಡಿದಾ ಜನರು ಏನೇ ಆದ್ರೂ ನಮ್ ಜಿಮ್ ಸೀನಾಗೆ ಬಂದ ಪರಿಸ್ಥಿತಿ ಮತ್ಯಾರಿಗೂ ಬಾರದೇ ಇರಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

PREV
17

ಅಣ್ಣಯ್ಯ ಧಾರಾವಾಹಿ ಝೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿ. ಈ ಕಥೆಯಲ್ಲಿ ಬರುವ ಎಲ್ಲಾ ಪಾತ್ರಗಳು ಸಹ ಜನರಿಗೆ ಸಿಕ್ಕಾಪಟ್ಟೆ ಇಷ್ಟ. ಕೆಲವೊಂದು ಪಾತ್ರಗಳು ದ್ವೇಷಿಸುವಷ್ಟು ಕೋಪ ತರಿಸಿದರೆ, ಕೆಲವೊಂದು ಪಾತ್ರಗಳು ಪ್ರೀತಿ ತರುತ್ತವೆ. ಅಂತಹ ಒಂದು ಪಾತ್ರ ಜಿಮ್ ಸೀನಾನದ್ದು. ಇದೀಗ ಜನರು ಜಿಮ್ ಸೀನಾ ಪರಿಸ್ಥಿತಿಗೆ ಮರುಗುತ್ತಿದ್ದು, ಇಂತಹ ಪರಿಸ್ಥಿತಿ ಇನ್ಯಾರಿಗೂ ಬಾರದೇ ಇರಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

27

ಹೌದು, ಅಂದ ಹಾಗೆ ಅಣ್ಣಯ್ಯ ಧಾರಾವಾಹಿಯ (Annayya Serial) ಕಥೆಯ ಪ್ರಕಾರ ಜಿಮ್ ಸೀನಾ ಪಿಂಕಿಯನ್ನು ಇಷ್ಟಪಟ್ಟಿದ್ದ. ಆತನನ್ನೆ ಮದುವೆಯಾಗುವ ಪ್ಲ್ಯಾನ್ ಕೂಡ ಮಾಡಿದ್ದ. ಆದರೆ ಗುಂಡಮ್ಮನ ಮದುವೆಯ ಸಂದರ್ಭದಲ್ಲಿ ಸೀನಾ ಮೇಲೆ ತಪ್ಪು ಬಂದು, ಮದುವೆ ನಿಲ್ಲುವ ಸಂದರ್ಭ ಬಂದಾಗ, ಮಾದಪ್ಪ ತನ್ನ ಮಗನನ್ನೆ ಹಸೆಮಣೆ ಮೇಲೆ ಕೂರಿಸಿ, ಗುಂಡಮ್ಮನ ಕತ್ತಿಗೆ ತಾಳಿ ಕಟ್ಟುವಂತೆ ಮಾಡಿದ್ದ.

37

ಇದಾದ ಬಳಿಕ ಗುಂಡಮ್ಮ ಮತ್ತು ಸೀನಾ ಇಬ್ಬರು ಒಂದೇ ಮನೆಯಲ್ಲಿ ನಾಯಿ- ಬೆಕ್ಕಿನಂತೆ ಜಗಳ ಮಾಡೋದಕ್ಕೆ ಶುರುಮಾಡಿದ್ರು. ಗುಂಡಮ್ಮ ರಶ್ಮಿಯನ್ನು ಅತ್ತೆ ಕೂಡ ಊಟ ಕೊಡದೇ ಸತಾಯಿಸಿದ್ದು ಆಯ್ತು. ಸೀನಾ ಮತ್ತು ಪಿಂಕಿ ಮಧ್ಯೆ ಏನೋ ಇದೆ ಎಂದು ತಿಳಿದ ಪಾರು ತನ್ನ ತಮ್ಮನಂತಿರುವ ಸೀನಾಗೆ ಬುದ್ದಿ ಹೇಳಿದ್ದು ಆಯ್ತು, ಶಿವು ತನ್ನ ತಂಗಿಯರ ಜೀವನ ಹಾಳು ಮಾಡಲು ಬರುವ ಯಾರನ್ನೂ ಸುಮ್ಮನೆ ಬಿಡೋದಿಲ್ಲ ಎಂದು ಪಿಂಕಿಗೆ ವಾರ್ನ್ ಮಾಡಿದ್ದೂ ಆಯ್ತು.

47

ಇದೀಗ ಪಿಂಕಿ ಜಿಮ್ ಸೀನಾ (gym Seena) ಮುಂದೆ ತನ್ನ ಅಸಲಿ ಮುಖ ತೆರೆದಿಟ್ಟಿದ್ದಾಳೆ. ಶಿವಣ್ಣನ ಕುರಿತು ಪಿಂಕಿ ಬಾಯಿಗೆ ಬಂದಂತೆ ಮಾತನಾಡಿ ನಿನ್ನ ಬಾವ ನನಗೆ ಎಚ್ಚರಿಕೆ ಕೊಡ್ತಾನೆ, ಅಂಗಡಿಯಲ್ಲಿ ಕೆಲಸ ಮಾಡೋ ಅವನು ನನಗ್ಯಾಕೆ ಬುದ್ಧಿ ಹೇಳೋದು?” ಎಂದಿದ್ದಾಳೆ. ಜೊತೆಗೆ ಸೀನಾನನ್ನು ತೀರಾ ಕೆಟ್ಟದಾಗಿ ಬೈಯ್ದು ನೀನು ಬೀದಿಯಲ್ಲಿ ಓಡಾಡ್ತಾ ಇದ್ರೆ, ನಾಯಿ ಕೂಡ ನಿನ್ನನ್ನು ಮೂಸಿ ನೋಡಲ್ಲ ಅಂತದ್ರಲ್ಲಿ ನಾನು ನಿನ್ನನ್ನು ಇಷ್ಟ ಪಟ್ಟೆ ಎಂದೆಲ್ಲಾ ಬಯ್ಯುತ್ತಾಳೆ.

57

ಇನ್ನೊಂದೆಡೆ ಗುಂಡಮ್ಮ ಸೀನಾನನ್ನು ನೋಡಿ, ನನ್ನ ಗಂಡ ಸಿನಿಮಾ ಹೀರೋ ಥರ ಇದ್ದಾನೆ, ಯುವರಾಜ ನನ್ನ ಗಂಡ. ಆ ಮಾಕಾಳವ್ವನ ಮೇಲೆ ಆಣೆ ಮಾಡಿ ಹೇಳ್ತೀನಿ, ಸೀನಾಗೆ ನಾನು ಹೇಳಿ ಮಾಡಿಸಿದ ಹುಡುಗಿ ಅಲ್ಲ, ಅವರಿಗೆ ಚೆನ್ನಾಗಿರೋ ಹುಡುಗಿ ಸಿಗಬೇಕಿತ್ತು. ಆದರೆ ನಾನು ಪುಣ್ಯ ಮಾಡಿದ್ದೆ ನನಗೆ ಒಳ್ಳೆ ಗುಣ ಇರುವ, ರಾಜಕುಮಾರನಂತಹ ಗಂಡ ಸಿಕ್ಕಿದ್ದಾನೆ ಎನ್ನುತ್ತಾರೆ ರಶ್ಮಿ.

67

ಇದನ್ನೆಲ್ಲಾ ಕೇಳಿ, ಸೀನಾ ತುಂಬಾನೆ ಬೇಜಾರು ಮಾಡಿಕೊಳ್ಳುತ್ತಾನೆ. ನಾನು ಇಷ್ಟು ದಿನ ಇಷ್ಟಪಟ್ಟ ಪಿಂಕಿ ನನ್ನ ಬಗ್ಗೆ ಏನೇನೋ ಹೇಳ್ತೀದ್ದಾನೆ, ಆದರೆ ನಾನು ಇಷ್ಟಾನೆ ಪಡದಿರುವ ರಶ್ಮಿ ನನ್ನನ್ನು ರಾಜಕುಮಾರ ಅಂತಿದ್ದಾನೆ. ಏನಾಗ್ತಿದೆ ನನ್ನ ಬಾಳಲ್ಲಿ ಎಂದು ದುಃಖ ಪಡುತ್ತಿದ್ದಾನೆ.

77

ಸೀನಾ ದುಃಖ ಪಡ್ತಿರೋದನ್ನು ನೋಡಿ, ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದು, ಸೀನಾಗೆ ಬಂದ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು ಎಂದಿದ್ದಾರೆ. ಅಷ್ಟೇ ಆಲ್ಲದೇ ಸೀನಾನನ್ನು ಎಲ್ಲಾ ರೀತಿಯ ಬೇಸರಗಳಿಂದ ಹೊರ ತಂದು ಆತನಿಗೆ ಆದಷ್ಟು ಬೇಗಾ ನೆಮ್ಮದಿ ಕೊಡುವಂತೆ ಸಹ ಜನ ಕೇಳಿಕೊಳ್ಳುತ್ತಿದ್ದಾರೆ.

Read more Photos on
click me!

Recommended Stories