ಪತ್ನಿ ಸಂಗೀತಾ ಭಟ್‌ ಜೊತೆ ಹೊಸ ಮನೆಗೆ ಕಾಲಿಟ್ಟ ನಟ ಸುದರ್ಶನ್‌ ರಂಗಪ್ರಸಾದ್:‌ ಗೃಹ ಪ್ರವೇಶದ ಫೋಟೋಗಳಿವು!

Published : Jul 14, 2025, 03:26 PM ISTUpdated : Jul 14, 2025, 03:42 PM IST

ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಸಂಗೀತಾ ಭಟ್‌ ಅವರು ಹೊಸ ಮನೆಗೆ ಕಾಲಿಟ್ಟ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

PREV
123

ಸುದರ್ಶನ್‌ ರಂಗಪ್ರಸಾದ್‌ ಹಾಗೂ ಸಂಗೀತಾ ಭಟ್‌ ಅವರು ಹೊಸ ಮನೆಗೆ ಕಾಲಿಟ್ಟ ಫೋಟೋಗಳು ಇಲ್ಲಿವೆ! 

223

‘ಭಾಗ್ಯಲಕ್ಷ್ಮೀʼ ಧಾರಾವಾಹಿ ನಟ ಸುದರ್ಶನ್‌ ರಂಗಪ್ರಸಾದ್‌ ಹಾಗೂ ಖ್ಯಾತ ನಟಿ ಸಂಗೀತಾ ಭಟ್‌ ಅವರು ಕನಸಿನ ಮನೆಗೆ ಕಾಲಿಟ್ಟಿದ್ದಾರೆ. ಸ್ವಂತ ಮನೆ ಹೊಂದಿರೋದು ಎಲ್ಲರ ಕನಸು. ಅಂತೆಯೇ ಈ ಜೋಡಿ ಖುಷಿಯಿಂದ ಹೊಸ ಮನೆಗೆ ಕಾಲಿಟ್ಟಿದೆ.

323

ಸಂಗೀತಾ ಭಟ್‌ ಹಾಗೂ ಸುದರ್ಶನ್‌ ರಂಗಪ್ರಸಾದ್‌ ಅವರು ಶಾಸ್ತ್ರೋಕ್ತವಾಗಿ ಹೊಸ ಮನೆಯ ಪ್ರವೇಶ ಮಾಡಿದ್ದಾರೆ. 

423

ಹೊಸ ಮನೆಗೆ sukhasa ಎಂದು ಹೆಸರಿಟ್ಟಿದ್ದಾರೆ. #SukhãSa ನಮಗೆ ಕನಸಿನ ಮನೆ. Su-ಸುದರ್ಶನ, Sukha ಎಂದರೆ ಆನಂದ/ಸಂತೋಷ, ‘SuCasa’ ಎಂದರೆ ನಿಮ್ಮ ಮನೆ, ಖಾಸ ಎಂದರೆ ಗೃಹ, ಆಸ ಎಂದರೆ ಆಶ್ರಯ, Sa-ಸಂಗೀತಾ.

523

"ನಾವು ಭರವಸೆ ನೀಡಿದಂತೆ, ನಮ್ಮ ಜೀವನದ ಅತ್ಯಂತ ಸಂತೋಷದಾಯಕ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಇದು ಒಂದು ದಂಪತಿಯಾಗಿ ನಮ್ಮ ಜೀವನದ ಅತಿದೊಡ್ಡ ಮೈಲಿಗಲ್ಲು ಆಗಿದ್ದು ಒಂದು ಸಾಧನೆ ಹೇಳುವುದು" ಎಂದಿದ್ದಾರೆ ಸಂಗೀತಾ. 

623

“ಇದು ನಮ್ಮ ಸಂತೋಷದ ಮನೆ. ನಿಮ್ಮದೇ ಆದ ಸಂತೋಷದ ಮನೆ ಎಂದು ಕರೆಯಬಹುದಾದ ಒಂದು ಸ್ಥಳವನ್ನು ಹೊಂದಿರುವುದಕ್ಕಿಂತ, ಇನ್ನೂ ಖುಷಿ ಆಗಿರೋದು, ಶಾಶ್ವತವಾದದ್ದು ಯಾವುದೂ ಇಲ್ಲ” ಎಂದಿದ್ದಾರೆ ಸಂಗೀತಾ.

723

“ನಿಮ್ಮೊಂದಿಗೆ ಈ ವಿಷಯವನ್ನು ಹಂಚಿಕೊಳ್ಳುವುದು ನಮಗೆ ಖುಷಿ ಕೊಡುವುದು. ನಿಮ್ಮೆಲ್ಲರಿಗೂ ಕೃತಜ್ಞತೆ ಹೇಳುತ್ತೇವೆ. ಎಲ್ಲ ಪ್ರಾರ್ಥನೆಗಳಿಗೆ, ಆಶೀರ್ವಾದಗಳಿಗೆ ಧನ್ಯವಾದಗಳು. ನಾವು ಒಟ್ಟಿಗೆ ಅನುಭವಿಸಲು ಎಲ್ಲ ಅದ್ಭುತ ನೆನಪುಗಳ ಭಾಗವಾಗಿರುವ ನಮ್ಮ ಕುಟುಂಬ, ಸ್ನೇಹಿತರು, ಪೋಷಕರಿಗೆ ಧನ್ಯವಾದಗಳು” ಎಂದಿದ್ದಾರೆ. 

823

ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಲಿ ಮತ್ತು ಎಲ್ಲರೂ ಆಶೀರ್ವದಿಸಲ್ಪಡಲಿ ಎಂದು ನಿಮ್ಮೆಲ್ಲರಿಗೂ ಹಾರೈಸುವೆ ಎಂದಿದ್ದಾರೆ.

923

ಸುದರ್ಶನ್‌ ರಂಗಪ್ರಸಾದ್‌ ಹಾಗೂ ಸಂಗೀತಾ ಭಟ್‌ ಅವರು ʼಪ್ರೀತಿ ಗೀತಿ ಇತ್ಯಾದಿʼ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಮೂಲಕ ಈ ಜೋಡಿಗೆ ಪರಿಚಯ ಆಗಿತ್ತು. 

1023

ಈ ಪರಿಚಯ ಪ್ರೀತಿಗೆ ತಿರುಗಿ, ಮದುವೆಯಾಗಿದೆ. ಎರಡು ಕುಟುಂಬದವರು ಖುಷಿಯಿಂದ ಒಪ್ಪಿ ಈ ಮದುವೆ ಮಾಡಿದ್ದಾರೆ. 

1123

ಸಂಗೀತಾ ಭಟ್‌ ಹಾಗೂ ಸುದರ್ಶನ್‌ ರಂಗಪ್ರಸಾದ್‌ ಅವರು ಮದುವೆಯಾಗಿ ಒಂಭತ್ತು ವರ್ಷಗಳಾಗಿವೆ. 

1223

ಸುದರ್ಶನ್‌ ರಂಗಪ್ರಸಾದ್‌ ಅವರು ಈ ಹಿಂದೆ ಸ್ಟ್ಯಾಂಡಪ್‌ ಕಾಮಿಡಿಯನ್‌ ಕೂಡ ಹೌದು, ಸಾಕಷ್ಟು ಯಶಸ್ವಿ ಶೋಗಳನ್ನು ನಡೆಸಿಕೊಟ್ಟಿದ್ದಾರೆ. 

1323

ನಟಿ ಸಂಗೀತಾ ಭಟ್‌ ಅವರು ಕನ್ನಡ ಸಿನಿಮಾಗಳಲ್ಲಿ ಹೀರೋಯಿನ್‌ ಆಗಿ ಹೆಸರು ಮಾಡಿದವರು. 

1423

ಸಂಗೀತಾ ಭಟ್‌ ಅವರು ಕರಿಯರ್‌ನ ಉತ್ತುಂಗದಲ್ಲಿದ್ದಾಗ, ಸುದರ್ಶನ್‌ ಅವರಿಗೆ ನಟನೆ ಅವಕಾಶ ಇರಲಿಲ್ಲ. ಆ ಬಳಿಕ ಸುದರ್ಶನ್‌ ಅವರಿಗೆ ಕೆಲಸ ಇದ್ದಾಗ, ಸಂಗೀತಾ ನಟನೆಯಿಂದ ಹಿಂದೆ ಸರಿದರು. ಮದುವೆ ಆದಾಗಿನಿಂದಲೂ ಈ ಜೋಡಿ ಪರಸ್ಪರ ಅರ್ಥ ಮಾಡಿಕೊಂಡು ಜೀವನವನ್ನು ನಡೆಸುತ್ತಿದೆ. 

1523

ಸುದರ್ಶನ್‌ ರಂಗಪ್ರಸಾದ್‌ ಅವರು ವಿದೇಶದಲ್ಲಿ ಕೆಲ ವರ್ಷ ಕೆಲಸ ಮಾಡಿದ್ದರು. 

1623

ಲಾಕ್‌ಡೌನ್‌ ಬಳಿಕ ಈ ಜೋಡಿ ಬೆಂಗಳೂರಿಗೆ ಬಂದಿತ್ತು. ಆ ಬಳಿಕ ಇಲ್ಲಿಯೇ ಸೀರಿಯಲ್‌ ಅವಕಾಶ ಸಿಕ್ಕಿದ್ದರಿಂದ ಇಲ್ಲಿಯೇ ನೆಲೆಸಿದೆ. 

1723

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಹೀರೋ ತಾಂಡವ್‌ ಪಾತ್ರದಲ್ಲಿ ಸುದರ್ಶನ್‌ ರಂಗಪ್ರಸಾದ್‌ ಅವರು ನಟಿಸುತ್ತಿದ್ದಾರೆ. ಇದು ಹೀರೋ ಆದರೂ ಕೂಡ ನೆಗೆಟಿವ್‌ ಶೇಡ್‌ ಆಗಿದೆ.

1823

ಸದ್ಯ ಸಂಗೀತಾ ಭಟ್‌ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ. 

1923

ಅಂದಹಾಗೆ ಸಂಗೀತಾ ಭಟ್‌ ಹಾಗೂ ಕಿಶೋರ್‌ ಅವರು ʼಅರವಣಿಪುರಂʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸುದರ್ಶನ್‌ ರಂಗಪ್ರಸಾದ್‌ ಅವರು ನಿರ್ದೇಶನ ಮಾಡಿದ್ದಾರೆ. 

2023

ಸುದರ್ಶನ್‌ ರಂಗಪ್ರಸಾದ್‌ ಅವರು ಬರಹಗಾರ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಈ ಚಿತ್ರ ಹೇಗೆ ಮೂಡಿಬರಲಿದೆ ಎಂದು ಕಾದು ನೋಡಬೇಕಿದೆ. 

2123

ಸುದರ್ಶನ್‌ ರಂಗಪ್ರಸಾದ್‌ ಹಾಗೂ ಸಂಗೀತಾ ಭಟ್‌ ಅವರು ಕನ್ನಡ ಚಿತ್ರರಂಗದಲ್ಲಿ ಆಕ್ಟಿವ್‌ ಆಗಿದ್ದಾರೆ. ಅಷ್ಟೇ ಅಲ್ಲದೆ ಪ್ರತಿಭಾನ್ವಿತ ತಾರಾ ಜೋಡಿ ಎನ್ನಬಹುದು. 

2223

ಸುದರ್ಶನ್‌ ರಂಗಪ್ರಸಾದ್‌, ಸಂಗೀತಾ ಭಟ್ ಅವರು ಹೊಸ ಮನೆ ಖರೀದಿ ಮಾಡಿದ್ದಕ್ಕೆ ಅನೇಕರು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. 

2323

ಮಾತು ಕೊಟ್ಟಂತೆ ಈ ಜೋಡಿ ಸುಖ-ದುಃಖವನ್ನು ಹಂಚಿಕೊಂಡು ಯಶಸ್ಸಿನತ್ತ ಹೆಜ್ಜೆ ಹಾಕುತ್ತಿದೆ. 

Read more Photos on
click me!

Recommended Stories