ಈ ಫೋಟೋಗೆ ಕಮೆಂಟ್ ಮಾಡಿರುವ ಕರಣ್ ಕೆಆರ್ ಅಭಿಮಾನಿಗಳು, ಇವೆಲ್ಲಾ ಜೀವನದ ಸುಂದರ ನೆನಪುಗಳು, ತಂದೆಯ ಪ್ರತಿರೂಪ ನೀವು ಹ್ಯಾಪಿ ಬರ್ತ್ ಡೇ ಎಂದು ಶುಭಾಶಯಗಳನ್ನು ತಿಳಿಸಿದ್ದಾರೆ. ತಂದೆಗೆ ತಕ್ಕ ಮಗ, ತದ್ರೂಪಿ, ಸ್ಪುರದ್ರೂಪಿ. ಏನ್ ಹೇಳ್ಬೇಕು ಗೊತ್ತಿಲ್ಲ, ಆದ್ರೆ ನಿಮ್ಮ ತಂದೆ ಸೂರ್ಯ ಆದ್ರೆ ನೀವು ಅವರ ಕಿರಣದ ತರ. ಇಬ್ರೂ ಬೆಳಗ್ತಾ ಇದೀರಾ, ಅವ್ರು ನಿಮ್ಮ ಮನೆ ಮನಸ್ಸನ್ನ, ನೀವು ಕಿರುತೆರೆ ಹಾಗೂ ಅಭಿಮಾನಿಗಳ ಮನಸನ್ನ. ಅಷ್ಟೇ ವ್ಯತ್ಯಾಸ ಎಂದು ಬರೆದು ಮೆಚ್ಚುಗೆ ಸೂಚಿಸಿದ್ದಾರೆ.