Bigg Boss Kannada 12: ಬಿಗ್‌ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಗಿಲ್ಲಿ ನಟ ರೋಸ್ಟ್

Published : Nov 14, 2025, 02:57 PM IST

ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ, ಈಜುಕೊಳದ ಟಾಸ್ಕ್ ವೇಳೆ ಸ್ವತಃ ಬಿಗ್‌ಬಾಸ್‌ನಿಂದಲೇ ರೋಸ್ಟ್ ಆಗಿದ್ದಾರೆ. ಇದರ ಜೊತೆಗೆ, ಸಹ ಸ್ಪರ್ಧಿಗಳಾದ ರಿಷಾ ಗೌಡ ಮತ್ತು ಕಾವ್ಯಾ ಶೈವ ಜೊತೆಗಿನ ಅವರ ಸಂಬಂಧದಲ್ಲಿನ ಬಿರುಕಿನ ಬಗ್ಗೆಯೂ ಈ ಲೇಖನ ಬೆಳಕು ಚೆಲ್ಲುತ್ತದೆ.

PREV
15
ಗಿಲ್ಲಿ ನಟ

ಬಿಗ್‌ಬಾಸ್ ಸೀಸನ್ 12ರ ಸ್ಪರ್ಧಿಯಾಗಿರುವ ಗಿಲ್ಲಿ ನಟ ತಮ್ಮ ಮಾತುಗಳಿಂದಲೇ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ತಮ್ಮ ವಿರುದ್ಧ ಯಾರೇ ಮಾತನಾಡಿದ್ರೆ ಆ ಕ್ಷಣದಲ್ಲಿಯೇ ಗಿಲ್ಲಿ ನಟ ಪ್ರತಿಕ್ರಿಯೆ ನೀಡುತ್ತಾರೆ. ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವಿನ ಸಂಭಾಷಣೆಯ ವಿಡಿಯೋ ಕ್ಲಿಪ್ ಸಹ ವೈರಲ್ ಆಗುತ್ತಿರುತ್ತವೆ.

25
ಈಜುಕೊಳದಲ್ಲೊಂದು ಟಾಸ್ಕ್

ಇದೀಗ ಮೊದಲ ಬಾರಿಗೆ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ರೋಸ್ಟ್ ಆಗಿದ್ದಾರೆ. ಬಿಗ್‌ಬಾಸ್‌ನಿಂದಲೇ ಗಿಲ್ಲಿ ನಟ ರೋಸ್ಟ್ ಆಗಿದ್ದಾರೆ. ಹಿಂದಿನ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಸ್ವಿಮ್ಮಿಂಗ್‌ಪೂಲ್‌ನಲ್ಲಿ ವಿಶೇಷ ಟಾಸ್ಕ್ ನೀಡಿದ್ದರು. ಈಜುಕೊಳದಲ್ಲಿನ ಸೆಟಪ್ ನೋಡಿ ಸ್ಪರ್ಧಿಗಳು ಏನಿರಬಹುದು ಅಂದಾಜಿಸುತ್ತಿದ್ದರು.

35
ರೋಸ್ಟ್ ಮಾಡಿದ್ರು ಬಿಗ್‌ಬಾಸ್

ಅಂತೆಯೇ ಎಲ್ಲರಗಿಂತ ಮುಂದೆ ಬಂದ ಗಿಲ್ಲಿ ನಟ ಬಿಗ್‌ಬಾಸ್ ನೀಡಿದ ಟಾಸ್ಕ್ ಡಿಕೋಡ್ ಮಾಡಲು ಮುಂದಾದರು. ಫಸ್ಟ್‌ ಇಲ್ಲಿ ಅಂತ ಗಿಲ್ಲಿ ನಟ ಹೇಳುತ್ತಿದ್ದಂತೆ ಮೊದಲು ಬೆಂಚ್ ಮೇಲೆ ಕುಳಿತುಕೊಳ್ಳಬೇಕು ಎಂದು ಬಿಗ್‌ಬಾಸ್ ಸೂಚಿಸುತ್ತಾರೆ. ಬಿಗ್‌ಬಾಸ್ ಹೀಗೆ ಹೇಳುತ್ತಿದ್ದಂತೆ ಮನೆ ಮಂದಿಯೆಲ್ಲಾ ಜೋರಾಗಿ ನಗುತ್ತಾರೆ. ನಂತರ ಗಿಲ್ಲಿ ನಟಗೆ ರೋಸ್ಟ್ ಮಾಡಿದ್ದಕ್ಕೆ ಎಲ್ಲರೂ ಬಿಗ್‌ಬಾಸ್‌ಗೆ ಧನ್ಯವಾದ ಹೇಳುತ್ತಾರೆ.

45
ಗಿಲ್ಲಿ ನಟ ವರ್ಸಸ್ ರಿಷಾ

ಮತ್ತೊಂದೆಡೆ ಗಿಲ್ಲಿ ನಟ ಮಾಡುವ ತಮಾಷೆ ಬೇರೆಯವರಿಗೆ ನೋವುಂಟು ಮಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಎಲ್ಲದರ ನಡುವೆ ಗಿಲ್ಲಿ ನಟ ಮತ್ತು ರಿಷಾ ಗೌಡ ನಡುವೆ ನಡೆದ ಜಗಳ ಈ ಹಿಂದಿನ ವೀಕೆಂಡ್ ಸಂಚಿಕೆಯಲ್ಲಿ ಸದ್ದು ಮಾಡಿತ್ತು. ಗಿಲ್ಲಿ ಮೇಲೆ ಹಲ್ಲೆ ನಡೆಸಿದರೂ ಮನೆಯಲ್ಲಿರುವ ಸ್ಪರ್ಧಿಗಳಿಂದಾಗಿ ರಿಷಾ ಉಳಿದುಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada: ರಕ್ಷಿತಾ ಶೆಟ್ಟಿ ಕಾಲ್ಗುಣ ಸರಿಯಿಲ್ವ? ಹತ್ತಿರ ಆದವರೆಲ್ಲ ಮನೆಯಿಂದ ಔಟ್‌

55
ಗಿಲ್ಲಿ-ಕಾವ್ಯಾ ಬ್ರೇಕಪ್

ಗಿಲ್ಲಿ ನಟ ಮತ್ತು ಕಾವ್ಯಾ ಶೈವ ಜಂಟಿ ಸ್ಪರ್ಧಿಗಳಾಗಿ ಬಿಗ್‌ಬಾಸ್‌ಗೆ ಎಂಟ್ರಿ ಕೊಟ್ಟಿದ್ದರು. ಬಿಗ್‌ ಮನೆಯಲ್ಲಿ ಈ ಇಬ್ಬರ ಸ್ಪರ್ಧಿಗಳ ತಮಾಷೆಯ ಗೆಳೆತನ ನೋಡುಗರಿಗೆ ಇಷ್ಟವಾಗುತ್ತಿದೆ. ಆದ್ರೆ ಈ ಹಿಂದಿನ ಸಂಚಿಕೆಯಲ್ಲಿ ತನ್ನನ್ನು ಕಾವು ಎಂದು ಕರೆಯಬೇಡ ಎಂದು ಗಿಲ್ಲಿಗೆ ಕಾವ್ಯಾ ಹೇಳಿದ್ದಾರೆ.

ಇದನ್ನೂ ಓದಿ: ತಪ್ಪು ಸಾಬೀತುಪಡಿಸಿ, Bigg Boss Kannada 12 ಶೋ ಬಿಡ್ತೀನಿ; ಕಿಚ್ಚ ಸುದೀಪ್‌ ಮುಂದೆ ಅಶ್ವಿನಿ ಗೌಡ ಚಾಲೆಂಜ್

Read more Photos on
click me!

Recommended Stories