ಅಯ್ಯೋ ಗೀತಾ ಬಿಟ್ಟು ಬೇರೆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡ್ಕೊಂಡ ದನುಷ್ ಗೌಡ, ರೂಮರ್ಸ್‌ಗೆ ಬಿತ್ತು ತೆರೆ!

First Published | Dec 15, 2023, 5:38 PM IST

ಗೀತಾ ಸೀರಿಯಲ್ ನಾಯಕ ಧನುಷ್ ಗೌಡ ದಾಂಪತ್ಯ ಜೀವನದ ಮೊದಲ ಹೆಜ್ಜೆಯನ್ನಿಡುತ್ತಿದ್ದು, ಇಂದು ನಿಶ್ಚಿತಾರ್ಥ ನಡೆದಿದ್ದು, ಗೀತಾ ಸೀರಿಯಲ್ ನಟಿ ಭವ್ಯ ಗೌಡ ಭಾಗಿಯಾಗಿದ್ದರು. 
 

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಗೀತಾ ಸೀರಿಯಲ್ ನಾಯಕ ನಟ ಧನುಷ್ ಗೌಡ (Dhanush Gowda) ಅವರ ನಿಶ್ಚಿತಾರ್ಥ ಇಂದು ನಡೆದಿದ್ದು, ಈ ಸಂಭ್ರಮದಲ್ಲಿ ಗೀತಾ ಸೀರಿಯಲ್ ನಟಿ ಭವ್ಯ ಗೌಡ ಸಹ ಭಾಗಿಯಾಗಿದ್ದರು. 
 

ಭವ್ಯ ಗೌಡ (Bhavya Gowda) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಧನುಷ್ ನಿಶ್ಚಿತಾರ್ಥ ಸಂಭ್ರಮದ ಫೋಟೊಗಳನ್ನು ಶೇರ್ ಮಾಡಿದ್ದು, ಫೈನಲಿ…. ಕಂಗ್ರಾಜುಲೇಶನ್ಸ್ ಧನು, ತುಂಬಾನೆ ಖುಷಿಯಾಯಿತು ಎಂದು ಬರೆದುಕೊಂಡಿದ್ದಾರೆ, ಅಲ್ಲದೆ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಉಂಗುರ ಬದಲಾಯಿಸುವ ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ. 
 

Tap to resize

ಭವ್ಯ ಗೌಡ, ತನ್ನ ಇಬ್ಬರು ತಂಗಿಯರು ಮತ್ತು ಸ್ನೇಹಿತರ ಜೊತೆ ನಿಶ್ಚಿತಾರ್ಥ ಸಮಾರಂಭಕ್ಕೆ ತೆರಳಿ ಬೆಸ್ಟ್ ಫ್ರೆಂಡ್ ಸಂಭ್ರಮದಲ್ಲಿ ಭಾಗಿಯಾಗಿ ತಾವೂ ಸಂಭ್ರಮಿಸಿದ್ದಾರೆ. ಧನುಷ್ ಸಂಗಾತಿಯ ಹೆಸರು ಮತ್ತು ಅವರ ಹಿನ್ನೆಲೆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಧನುಷ್ ಗೌಡರ ಹೊಸ ಜೀವನಕ್ಕೆ ಹಲವರು ಶುಭ ಕೋರಿದ್ದಾರೆ. 
 

ಧನುಷ್ ಗೌಡ ನಿಶ್ಚಿತಾರ್ಥದ ಫೋಟೋಗಳನ್ನು (engagement photos) ನೋಡುತ್ತಿದ್ದಂತೆ ಗೀತಾ ಸೀರಿಯಲ್ ಅಭಿಮಾನಿಗಳಿಗೆ ಮಾತ್ರ ನಿರಾಶೆಯಾದಂತೆ ಕಾಣುತ್ತಿದೆ. ಭವ್ಯ ಗೌಡ ಮತ್ತು ಧನುಷ್ ಗೌಡ ಜೋಡಿಯಾಗಬೇಕೆಂದು ಆಶಿಸುವ ಅಭಿಮಾನಿಗಳೇ ಹೆಚ್ಚಾಗಿದ್ದು ಇದೇ ಈಗ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. 
 

ಗೀತಾ ಸೀರಿಯಲ್ ಆರಂಭವಾದ ಬಳಿಕ ಇಬ್ಬರೂ ಯಾವುದೆ ಕಾರ್ಯಕ್ರಮ, ಔಟಿಂಗ್ ಏನೇ ಇದ್ದರೂ ಹೆಚ್ಚಾಗಿ ಜೊತೆಯಾಗಿಯೇ ಸುತ್ತಾಡುತ್ತಿದ್ದರು. ಹಾಗಾಗಿ ಇವರಿಬ್ಬರು ಡೇಟ್ ಮಾಡುತ್ತಿದ್ದಾರೆ ಎನ್ನುವ ರೂಮರ್ಸ್ ಕೂಡ ಹರಡಿತ್ತು, ಇಬ್ಬರು ಸಾಕಷ್ಟು ಸಲ ತಾವು ಫ್ರೆಂಡ್ಸ್ ಎಂದು ಹೇಳಿದ್ದರೂ ಸಹ ಇಬ್ಬರನ್ನು ರಿಯಲ್ ಲೈಫಲ್ಲೂ ಜೋಡಿಯಾಗಿ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. 
 

ಇದೀಗ ಧನುಷ್ ಗೌಡ ಫೋಟೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಏನೇನೋ ಕಾಮೆಂಟ್ ಮಾಡುತ್ತಿದ್ದಾರೆ. ನಾನು ನೀವಿಬ್ರು ಲೈಫ್ ಪಾಟ್ನರ್ಸ್ (life partner) ಆಗ್ತೀರಾ ಅಂಕೊಂಡಿದ್ದೆ. ಇಷ್ಟದಿನ ನಿಜವಾಗ್ಲೂ ಈಗ ಈ ಫೋಟೋ ನೋಡಿ ಬೇಜಾರ್ ಆಗ್ತಾ ಇದೆ ಎಂದಿದ್ದಾರೆ. ಮತ್ತೊಬ್ಬರು ಯಾಕೋ ಗೊತ್ತಿಲ್ಲಾ ಮನಸ್ಸಿಗೆ ತುಂಬಾ ನೋವಾಗಿದೆ .ಜೋರಾಗಿ ಅಳ್ಬೇಕು ಅಂತ ಅನಿಸ್ತಾ ಇದೆ. ಅದ್ಕೆ ಹೇಳೋದು ಯಾರನ್ನು ಜಾಸ್ತಿ ಹಚ್ಕೊ ಬಾರ್ದು ಅಂತ ಎಂದು ಕಾಮೆಂಟ್ ಮಾಡಿದ್ದಾರೆ. 
 

ಅಭಿಮಾನಿಗಳ ಹಾರ್ಟ್ ಬ್ರೇಕ್ (heartbreakಆಗಿದೆ. ನೀವಿಬ್ಬರು ಜೋಡಿಯಾಗಿದ್ದರೆ ಚೆನ್ನಾಗಿರ್ತಿತ್ತು. ಗೀತಾ ಮತ್ತು ವಿಜಯ್ ಜೋಡಿನೇ ಬೆಸ್ಟ್ ಜೋಡಿ. ನೀವಿಬ್ಬರು ಮದ್ವೆಯಾಗಿಬಿಡಿ. ತುಂಬಾ ಬೇಜಾರಾಗ್ತಿದೆ ಎಂದೆಲ್ಲಾ ಕಾಮೆಂಟ್ ಸುರಿಮಳೆ ಬರ್ತಿದೆ. ಅದೇನೇ ಇರಲಿ ಹೊಸ ಜೀವನಕ್ಕೆ ಕಾಲಿಡುತ್ತಿರುವ ನಿಶ್ಚಿತಾರ್ಥದ ಸಂಭ್ರಮದಲ್ಲಿರುವ ಧನುಷ್ ಗೌಡ ಜೋಡಿಗೆ ಶುಭಾಷಯ. 
 

Latest Videos

click me!