Small Screen

ಧನುಷ್ ಗೌಡ

ಬಹುಶಃ ಧನುಷ್ ಗೌಡ ಅಂದ್ರೆ ಯಾರಿಗೂ ಗೊತ್ತೆ ಇಲ್ಲ. ಯಾಕಂದ್ರೆ ಗೀತಾ ಸೀರಿಯಲ್‌ನಲ್ಲಿ ವಿಜಯ್ ಪಾತ್ರದ ಮೂಲಕ ರಾಜ್ಯಾದ್ಯಂತ ಜನಪ್ರಿಯತೆ ಪಡೆದ ನಟ.

Image credits: Instagram

ಗೀತಾ ಸೀರಿಯಲ್

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೀತಾ ಸೀರಿಯಲ್‌ನಲ್ಲಿ ಮೊದಲಿಗೆ ಅಹಂಕಾರಿಯಾಗಿ, ಈಗ ಗೀತಾಳ ಪ್ರೀತಿಯ ವಿಜಿ/ ಅಮ್ಮಂದಿರ ಮುದ್ದಿನ ವಿಜಯ್ ಪಾತ್ರದಲ್ಲಿ ಧನುಷ್ ನಟಿಸುತ್ತಿದ್ದಾರೆ. 
 

Image credits: Instagram

ವಿದ್ಯಾಭ್ಯಾಸದಲ್ಲಿ ಹಿಂದೆ ನಟನೆಯಲ್ಲಿ ಮುಂದೆ

ಧನುಷ್ ಗೆ ಬಾಲ್ಯದಿಂದಲೂ ಕಲಿಯೋದರ ಕಡೆಗೆ ಹೆಚ್ಚಿನ ಆಸಕ್ತಿ ಕಡಿಮೆಯಂತೆ. ನಟನೆ ಕಡೆಗೆ ಆಸಕ್ತಿ ಇದ್ದುದೇ ನಟನಾ ಜಗತ್ತಿಗೆ ಬರಲು ಕಾರಣವಾಯ್ತು. 
 

Image credits: Instagram

ಕಸಿನ್ಸ್ ಬೆಂಬಲ

ನಟನಾಗಲು ಧನುಷ್ ಅವರ ಕಸಿನ್ಸ್ ತುಂಬಾ ಪ್ರೋತ್ಸಾಹ ನೀಡಿದ್ರಂತೆ. ನೀನು ನೋಡೋಕೆ ಚೆನ್ನಾಗಿದ್ಯ, ನಟನೆಗೆ ಯಾಕೆ ಟ್ರೈ ಮಾಡ್ಬಾರ್ದು ಎಂದಾಗ ಧನುಷ್ ಗೂ ಅದು ಸರಿ ಎನಿಸಿತಂತೆ. 
 

Image credits: Instagram

ಹಲವಾರು ಆಡಿಶನ್ಸ್‌ನಲ್ಲಿ ರಿಜೆಕ್ಟ್

ಡಿಪ್ಲೊಮಾ ಬಳಿಕ ಹಲವಾರು ಸೀರಿಯಲ್ಸ್ ಆಡಿಶನ್ ಕೊಟ್ರಂತೆ, ಆದ್ರೆ ರಿಜೆಕ್ಟ್ ಆಗಿ ಮನೆಯಲ್ಲಿ ಕೂರುವಂತಾದಾಗ ರಿಲೇಟೀವ್ಸ್ ಇದೆಲ್ಲ ಆಗಲ್ಲ, ಬೀದಿ ಬೀದಿಯಲ್ಲಿ ಹೀರೋ ಇದ್ದಾರೆ ಅಂದ್ರಂತೆ. 
 

Image credits: Instagram

ಆಗಲ್ಲ ಎಂದವರ ಮುಂದೆ ಗೆದ್ದ ಧನುಷ್

3 ವರ್ಷ ಮನೆಯಲ್ಲಿದ್ದು, ನಿನ್ನಿಂದ ಆಗಲ್ಲ ಎನ್ನುವವರ ಮುಂದೆ ಧನುಷ್ ಪ್ರಯತ್ನ ಬಿಡದೆ ಆಡಿಶನ್ ಕೊಟ್ಟು ಕೊನೆಗೆ ಗೀತಾ ಸೀರಿಯಲ್‌ನಲ್ಲಿ ನಾಯಕನಾಗಿ ಆಯ್ಕೆಯಾಗಿ, ರಾಜ್ಯದ ಮನೆಮಾತಾದರು.. 
 

Image credits: Instagram

ಜನಪ್ರಿಯ ಜೋಡಿ

ಇನ್ನು ಗೀತಾ ಸೀರಿಯಲ್ ನ ಜೋಡಿಗಳಾದ ಗೀತಾ ಮತ್ತು ವಿಜಯ್ ಪ್ರೇಕ್ಷಕರ ಫೇವರಿಟ್ ಜೋಡಿ. ಆನ್‌ಸ್ಕ್ರೀನ್‌ನಂತೆ ಆಫ್‌ಸ್ಕ್ರೀನ್‌ನಲ್ಲೂ ಇಬ್ಬರು ಜೋಡಿಯಾದ್ರೆ ಚೆನ್ನ ಎನ್ನುತ್ತಾರೆ ಅಭಿಮಾನಿಗಳು.
 

Image credits: Instagram

ನಾನು ಭವ್ಯ ಫ್ರೆಂಡ್ಸ್ ಅಷ್ಟೇ

ಈ ಆನ್ ಸ್ಕ್ರೀನ್ ಜೋಡಿ ಹೆಚ್ಚಾಗಿ ಜೊತೆಗೆ ಇರೋದನ್ನು ನೋಡಿ ಹಲವಾರು ಜನ ಲವ್, ಮದ್ವೆ ಎಂದೆಲ್ಲಾ ಗಾಸಿಪ್ ಮಾಡಿದ್ದು, ಇದನ್ನ ಮಾಡ್ಬೇಡಿ ನಾವು ಜಸ್ಟ್ ಫ್ರೆಂಡ್ಸ್ ಅಷ್ಟೇ ಎಂದಿದ್ದಾರೆ ಧನುಷ್. 
 

Image credits: Instagram

ಸಿನಿಮಾದಿಂದ ದೂರ ಉಳಿದ ಬಾಲನಟಿ ಸಿಂಧು ರಾವ್‌ಗೆ ಗಂಡು ಮಗು!

ಸೌಂದರ್ಯದಲ್ಲೂ, ಸ್ಟೈಲಲ್ಲೂ ನಂ.1 ಈ ಟಾಪ್ ಸೀರಿಯಲ್ ವಿಲನ್ ಶಾರ್ವರಿ

ವೈನ್‌ಯಾರ್ಡಲ್ಲಿ ಭಾಗ್ಯಲಕ್ಷ್ಮಿ ನಟಿಯರು, ತೇರೆ ಮೇಲೆ ಮಾತ್ರ ಗೌರಮ್ಮ ಎಂದ್ರು!

ಅಣ್ಣ ನೀನೇ ಅದೃಷ್ಟವಂತ; 'ರಾಮಾಚಾರಿ' ವೈಶಾಖ ರಿಯಲ್ ಗಂಡ ಇವ್ರೇ!