ಮೈಕಲ್‌ನ ಒಪ್ಪಿಕೊಳ್ಳುವುದು ಕಷ್ಟ; ಇಶಾನಿ ಪ್ರೀತಿಗೆ ಬ್ರೇಕ್ ಹಾಕಿ ಖಡಕ್ ಉತ್ತರ ಕೊಟ್ಟ ತಂದೆ

Published : Nov 15, 2023, 04:27 PM IST

ಬಿಗ್ ಬಾಸ್‌ ಮನೆಯಲ್ಲಿ ಅರಳಿತು ಪ್ರೀತಿ. ಮದುವೆ ಅಂದ್ರೆ ಇವತ್ತು ನಾಳೆ ಅಲ್ವೇ ಅಲ್ಲ ಎಂದು ಇಶಾನಿ ತಂದೆ....

PREV
17
ಮೈಕಲ್‌ನ ಒಪ್ಪಿಕೊಳ್ಳುವುದು ಕಷ್ಟ; ಇಶಾನಿ ಪ್ರೀತಿಗೆ ಬ್ರೇಕ್ ಹಾಕಿ ಖಡಕ್ ಉತ್ತರ ಕೊಟ್ಟ ತಂದೆ

ಕಲರ್ಸ್ ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿರುವ ಇಶಾನಿ ಮತ್ತು ಮೈಕಲ್ ಬಾಯ್‌ಫ್ರೆಂಡ್ ಗರ್ಲ್ ಫ್ರೆಂಡ್ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಈ ವಿಚಾರದ ಬಗ್ಗೆ ಇಶಾನಿ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. 

27

 'ಮೈಕಲ್ ಮತ್ತು ಇಶಾನಿ ವಿಚಾರ ಮುಂದಿನ ದಿನಗಳಲ್ಲಿ ಸೀರಿಯಸ್ ಆಗಿ ನನ್ನ ತನಕ ಬಂದರೆ ಖಂಡಿಯಾ ನನ್ನ ಮಗಳಿಗೆ ಸಲಹೆ ಕೊಡುತ್ತೀನಿ. ಈ ವಿಚಾರವನ್ನು ಒಪ್ಪಿಕೊಳ್ಳಲು ನನಗೆ ಕಷ್ಟವಾಗುತ್ತದೆ'

37

ಇರಲ್ಲಿ ಎರಡು ನಿಲುವು ಇಲ್ಲ ನನಗೆ ಒಪ್ಪಿಕೊಳ್ಳಲು ಕಷ್ಟ ಆಗುತ್ತದೆ. ತಂದೆಯಾಗಿ ನನ್ನ ಮಗಳಿಗೆ ಏನು ಹೇಳಬೇಕು ಅದನ್ನು ಹೇಳೇ ಹೇಳ್ತೀನಿ. ನಿರ್ಧಾರ ಮಾಡುವ ವಯಸ್ಸು ಮಕ್ಕಳಿಗೆ ಇದೆ ಆದರೆ ನಮ್ಮ ಅಭಿಪ್ರಾಯ ಏನು ಎಂದು ನಾವು ತಿಳಿಸಬೇಕು.

47

ಮದ್ವೆ ಅಂದ್ರೆ ಇವತ್ತು ಇದ್ದು ನಾಳೆ ಬಿಟ್ಟು ಹೋಗೋದು ಅಲ್ಲ ಹೀಗಾಗಿ ನನ್ನ ಮಗಳಿಗೆ ಒಳ್ಳೆಯದನ್ನು ಹೇಳಬೇಕು. ಇಶಾನಿಯನ್ನು ಮದುವೆ ಮಾಡಿಕೊಳ್ಳುವ ಹುಡುಗನ ವಿಚಾರದಲ್ಲಿ ಎಲ್ಲಾ ರೀತಿಯಲ್ಲಿ ನೋಡಿಕೊಂಡು ಮಾಡಿಕೊಳ್ಳುತ್ತೀವಿ. 

57

ಎಲ್ಲಾ ವಿಚಾರದಲ್ಲೂ ಕಾಂಪಿಟೇಷನ್‌ ಇದೆ ಆದರೂ ಒಳ್ಳೆ ವ್ಯಕ್ತಿತ್ವ ಇರುವ ಮನುಷ್ಯನಾಗಿ ಇರಬೇಕು ನೋಡಲು ಚೆನ್ನಾಗಿರಬೇಕು ಎಂದು ಕನ್ನಡ ಖಾಸಗಿ ಟಿವಿ ಸಂದರ್ಶನದಲ್ಲಿ ಇಶಾನಿ ತಂದೆ ಮಾತನಾಡಿದ್ದಾರೆ.

67

ನನಗೆ ಈಗಾಗಲೆ ಮಗ ಇದ್ದಾನೆ ಹೀಗಾಗಿ ಪ್ರೀತಿ ಕೊಟ್ಟು ಅರ್ಥ ಮಾಡಿಕೊಂಡು ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವಂತ ಹುಡುಗ ಆಗಿರಬೇಕು. ಮಗಳಿಗೋಸ್ಕರ ಕಾಂಪ್ರಮೈಸ್ ಮಾಡಿಕೊಳ್ಳುವುದು ಕಷ್ಟ ಆಗುತ್ತದೆ. 

77

ಆಕೆ ನೇರ ಮಾತನಾಡುತ್ತಾಳೆ ಆದರೆ ಮಾನಸಿಕವಾಗಿ ಆಕೆ ತುಂಬಾ ವೀಕ್ ಇದ್ದಾಳೆ. ನನ್ನ ಮಗಳ ವೀಕ್‌ನೆಸ್‌ ಅಂದ್ರೆ ಅತಿಯಾಗಿ ವೀಕ್‌ ಮಾನಸಿಕವಾಗಿ ಎಲ್ಲರಿಗೂ ಕರಗುತ್ತಾಳೆ ಒಂದು ರೀತಿ ಮಗುನೇ ಆಕೆ. 

Read more Photos on
click me!

Recommended Stories