Ganavi Laxman: ಮೇಕಪ್ ಇಲ್ಲ, ಲಿಪ್‌ಸ್ಟಿಕ್ಕೂ ಇಲ್ಲ: ಲಂಗ ದಾವಣಿಯಲ್ಲಿ ಥೇಟ್ ಹಳ್ಳಿ ಹುಡುಗಿಯಾದ ಮಗಳು ಜಾನಕಿ!

Published : Nov 16, 2023, 08:32 AM IST

ಮಗಳು ಜಾನಕಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟು ತನ್ನದೇ ಆದ ಛಾಪು ಮೂಡಿಸಿದವರು ಗಾನವಿ ಲಕ್ಷ್ಮಣ್. ತಮ್ಮ ಸಹಜ ಅಭಿನಯದಿಂದ ಜನರ ಮನಗೆದ್ದಿದ್ದ ನಟಿ ನೋಡಲು ಕೂಡ ಬಹಳ ಸುಂದರವಾಗಿ ಇದ್ದಾರೆ. ಇದೀಗ ಅವರ ಹೊಸ ರೂಪದ ಫೋಟೋಗಳು ಹೆಚ್ಚು ಗಮನ ಸೆಳೆಯುತ್ತಿವೆ.

PREV
16
Ganavi Laxman: ಮೇಕಪ್ ಇಲ್ಲ, ಲಿಪ್‌ಸ್ಟಿಕ್ಕೂ ಇಲ್ಲ: ಲಂಗ ದಾವಣಿಯಲ್ಲಿ ಥೇಟ್ ಹಳ್ಳಿ ಹುಡುಗಿಯಾದ ಮಗಳು ಜಾನಕಿ!

ಕನ್ನಡದ ನಾಯಕಿ ಗಾನವಿ ಲಕ್ಷ್ಮಣ್ ಒಂದಷ್ಟು ಸ್ಪೆಷಲ್ ಫೋಟೋ ಹಂಚಿಕೊಂಡಿದ್ದಾರೆ. ಲಂಗ-ದಾವಣಿ ಧರಿಸಿರೋ ಈ ಫೋಟೋಗಳಲ್ಲಿ ಮೇಕಪ್‌ ಇಲ್ವೇ ಇಲ್ಲ. ಎಲ್ಲೂ ಲೈಟಿಂಗ್ ಕಮಾಲ್ ಕೂಡ ಇಲ್ಲ. ಇರೋದೆಲ್ಲ ನಾಚ್ಯೂರಲ್ ಆಗಿಯೇ ಇದೆ.

26

ಗಾನವಿ ಲಕ್ಷ್ಮಣ್ ಮೇಕಪ್ ಇಲ್ಲ ಲಿಪ್‌ಸ್ಟಿಕ್ ಇಲ್ಲದ ಸಿಂಪಲ್ ಫೋಟೋ ಹಂಚಿಕೊಂಡಿದ್ದೇ ಇಲ್ಲ ಬಿಡಿ. ಗಾನವಿ ಇನ್‌ಸ್ಟಾಗ್ರಾಮ್‌ಗೆ ಹೋದ್ರೆ, ನಿಮಗೆ ಡಿ ಗ್ಲಾಮರಸ್ ಈ ಫೋಟೋಗಳು ಹೆಚ್ಚು ಗಮನ ಸೆಳೆಯುತ್ತಿವೆ. ಇದೇ ಫೋಟೋಗಳ ಕಾಮೆಂಟ್ ಬಾಕ್ಸ್‌ಗೆ ಹೋದ್ರೂ ಸಾಕು, ಅಲ್ಲೂ ವಿವಿಧ ಕಾಂಪ್ಲಿಮೆಂಟ್ಸ್ ನಿಮ್ಮನ್ನ ಸೆಳೆಯುತ್ತವೆ.

36

ಗಾನವಿ ಲಕ್ಷ್ಮಣ ಈ ಫೋಟೋಗಳು ತುಂಬಾನೆ ಸಿಂಪಲ್ ಆಗಿವೆ. ಇವುಗಳನ್ನ ನೋಡಿದ ಕೆಲವು ಫ್ಯಾನ್ಸ್, ಲಕ್ಷಣವಾದ ಭಾರತೀಯ ಹೆಣ್ಣು. ಭಾವನೆ ಸೂಸುವ ಕಣ್ಣುಗಳು, ಸುಂದರ ಚಿತ್ರಗಳು ಗಾನವಿ ಅಂತಲೇ ಬಣ್ಣಿಸಿದ್ದಾರೆ. ಇನ್ನು ಕೆಲವರು ಯು ಆರ್ ಸೋ ಬ್ಯೂಟಿಫುಲ್ ಅನ್ನೋದನ್ನೇ ಹೆಚ್ಚು ಕಾಮೆಂಟಿಸಿದ್ದಾರೆ.

46

ಕಿರುತೆರೆಯಲ್ಲಿ 'ಮಗಳು ಜಾನಕಿ' ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಮಲೆನಾಡಿನ ಸುಂದರಿ ಗಾನವಿ, ರಿಷಬ್ ಶೆಟ್ಟಿ ನಟನೆಯ 'ಹೀರೋ', ಮತ್ತು ಭಾವಚಿತ್ರ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 

56

'ವೇದ' ಚಿತ್ರದಲ್ಲಿ ಗಾನವಿ ಅಭಿನಯ ನೋಡಿ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಅಷ್ಟರ ಮಟ್ಟಿಗೆ ಗಾನವಿ ಆಕ್ಟಿಂಗ್ ಕಮಾಲ್ ಮಾಡಿತ್ತು. ಸದ್ಯ ತೆಲುಗಿನ 'ರುದ್ರಂಗಿ' ಸಿನಿಮಾದಲ್ಲಿ ಗಾನವಿ ನಟಿಸಿದ್ದಾರೆ. ಕನ್ನಡದ ಜೊತೆ ತೆಲುಗು ಸಿನಿಮಾದಲ್ಲಿ ಕೂಡ ಅವರು ಕಾಣಿಸಿಕೊಳ್ತಿದ್ದಾರೆ.

66

ಚಿಕ್ಕಮಗಳೂರಿನ ಚಿಕ್ಕ ಮಲ್ಲಿಗೆ ಗಾನವಿ ಲಕ್ಷ್ಮಣ್, ಕಡಿಮೆ ಅವಧಿಯಲ್ಲಿಯೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಗಾನವಿಗೆ ನಟನೆಗಿಂತ ನೃತ್ಯದಲ್ಲಿ ಸಾಕಷ್ಟು ಆಸಕ್ತಿಯಿತ್ತು. ಸೈಕಾಲಜಿ ಮತ್ತು ಕ್ರಿಮಿನಾಲಜಿಯಲ್ಲಿ ಪದವಿ ಪಡೆದಿದ್ದಾರೆ.

Read more Photos on
click me!

Recommended Stories