ಫಸ್ಟ್ ಲವ್ ಮಧು ಅಲ್ಲ, ಮದುವೆ ಆಗೋಕೆ 40 ಲಕ್ಷ ಖರ್ಚು ಮಾಡಿದ್ದೆ, ಬಾರ್ ಮಾಡ್ತಿಲ್ಲ: ಗುಟ್ಟು ರಟ್ಟು ಮಾಡಿದ ನಿಖಿಲ್!

Published : Oct 07, 2026, 01:06 PM IST

Madhu Gowda husband Nikhil Q&A: ಖ್ಯಾತ ಯೂಟ್ಯೂಬರ್ ಮಧು ಗೌಡ ಹಾಗೂ ಪತಿ ನಿಖಿಲ್ ರವೀಂದ್ರ, ಅಭಿಮಾನಿಗಳ ಹತ್ತಾರು ಕುತೂಹಲಕಾರಿ ಪ್ರಶ್ನೆಗಳಿಗೆ ಮುಕ್ತವಾಗಿ ಉತ್ತರಿಸಿದ್ದಾರೆ. ತಮ್ಮ ಮೊದಲ ಪ್ರೀತಿಯ ಬಗ್ಗೆ ನಿಖಿಲ್ ಬಿಚ್ಚಿಟ್ಟ ಅಚ್ಚರಿಯ ಸಂಗತಿಗಳು ಇಲ್ಲಿವೆ ನೋಡಿ...

PREV
16
ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ ನಿಖಿಲ್

ಸೋಶಿಯಲ್ ಮೀಡಿಯಾ ಹಾಗೂ ಯೂಟ್ಯೂಬ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಜನಪ್ರಿಯ ಜೋಡಿ ಮಧು ಗೌಡ ಮತ್ತು ನಿಖಿಲ್ ರವೀಂದ್ರ. ಸದಾ ಸೈಲೆಂಟ್ ಆಗಿರುತ್ತಿದ್ದ ನಿಖಿಲ್ ಅವರ ಬಗ್ಗೆ ನೆಟ್ಟಿಗರಿಗೆ ಹತ್ತಾರು ಪ್ರಶ್ನೆಗಳು, ಗಾಸಿಪ್‌ಗಳಿದ್ದವು. ಇದೀಗ ತಮ್ಮ ಯೂಟ್ಯೂಬ್ ಚಾನೆಲ್‌ನ ವಿಶೇಷ ಕ್ಯೂ&ಎ (Q&A) ಸಂಚಿಕೆಯಲ್ಲಿ ನಿಖಿಲ್ ಅವರು ಬಾರ್ ಬಿಸಿನೆಸ್, ತಮ್ಮ ಹಳೆಯ ಲವ್ ಸ್ಟೋರಿ, ಸ್ವಂತ ಬಿಸಿನೆಸ್ ಹಾಗೂ ಮಧು ಅವರನ್ನ ಮದುವೆಯಾಗಲು ಪಟ್ಟ ಹರಸಾಹಸದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

26
ಮಧು ಮನೆಗೆ ಹೆಣ್ಣು ಕೇಳಲು 40 ಲಕ್ಷ ಖರ್ಚು ಮಾಡಿದ್ದೆ!

2018ರ ನಂತರ ನಾನು ಯಾವುದೇ ಕೆಲಸ (Job) ಮಾಡಿಲ್ಲ ಎಂದಿರುವ ನಿಖಿಲ್, "ಮಧು ಮನೆಗೆ ಹೆಣ್ಣು ಕೇಳಲು ಹೋಗುವಾಗ ಹುಡುಗ ಏನು ಕೆಲಸ ಮಾಡುತ್ತಿದ್ದಾನೆ ಎಂದು ಕೇಳುತ್ತಾರಲ್ಲ, ಅದಕ್ಕಾಗಿಯೇ 30-40 ಲಕ್ಷ ಖರ್ಚು ಮಾಡಿ ಮೆಡಿಕಲ್ ಸ್ಟೋರ್ ಓಪನ್ ಮಾಡಿದ್ದೆ. ಆದರೆ ನನಗೆ ಮೆಡಿಸಿನ್ ಬಗ್ಗೆ ಯಾವುದೇ ಜ್ಞಾನವಿರಲಿಲ್ಲ. ಹಾಗಾಗಿ ಒಂದು ವರ್ಷ ನಡೆಸಿ ನಷ್ಟದಲ್ಲಿ ಮುಚ್ಚಿದೆ. ಸದ್ಯ ಜಿಮ್ ಪಾರ್ಟ್ನರ್‌ಶಿಪ್ ಹಾಗೂ ಬೆಂಗಳೂರಿನಲ್ಲಿ ಹೊಸ ಬಿಗ್ ಪ್ರಾಜೆಕ್ಟ್ ಬಿಸಿನೆಸ್ ಮಾಡುತ್ತಿದ್ದೇನೆ" ಎಂದು ಅಸಲಿ ಸತ್ಯ ಬಿಚ್ಚಿಟ್ಟಿದ್ದಾರೆ.

36
ಬಾರ್ ಬಿಸಿನೆಸ್ ಗಾಸಿಪ್‌ಗೆ ಬ್ರೇಕ್

ನಿಖಿಲ್ ಅವರು ಬಾರ್ ತೆರೆಯುತ್ತಿದ್ದಾರೆ ಎಂಬ ವದಂತಿಗೆ ಸ್ಪಷ್ಟನೆ ನೀಡಿದ ಅವರು, "3-4 ವರ್ಷಗಳ ಹಿಂದೆ ಬಾರ್ ಮಾಡುವ ಪ್ಲಾನ್ ಇತ್ತು, ಆದರೆ ಮಾಡಲಿಲ್ಲ. ಸದ್ಯ ಮಾಡುತ್ತಿರುವುದು ಬಾರ್ ಅಲ್ಲ, ಬೇರೆಯದೇ ಆದ ದೊಡ್ಡ ಬಿಸಿನೆಸ್. ಇನ್ನು ನಾನು ರೆಗ್ಯುಲರ್ ಆಗಿ ಕುಡಿಯುವುದಿಲ್ಲ. ಮಗಳು ಲಡ್ಡು ಹುಟ್ಟಿದ ಖುಷಿಗೆ ಆಕೆಯ ಮೊದಲ ವರ್ಷದ ಹುಟ್ಟುಹಬ್ಬದವರೆಗೆ (ಆಗಸ್ಟ್ 24) ಡ್ರಿಂಕ್ಸ್ ಮುಟ್ಟಬಾರದು ಎಂದು ನಿರ್ಧರಿಸಿದ್ದೇನೆ" ಎಂದಿದ್ದಾರೆ.

46
ಮೊದಲ ಪ್ರೀತಿ ಮಧು ಅಲ್ಲ!

ನಿಮ್ಮ ಮೊದಲ ಪ್ರೀತಿ ಮಧು ಅವರೇನಾ ಎಂಬ ಪ್ರಶ್ನೆಗೆ ಉತ್ತರಿಸಿದ ನಿಖಿಲ್, "ಎಲ್ಲರ ಜೀವನದಲ್ಲೂ ಮೊದಲ ಪ್ರೀತಿ ಇದ್ದೇ ಇರುತ್ತದೆ. ನನಗೂ ಈ ಹಿಂದೆ ಒಬ್ಬರ ಮೇಲೆ ಕ್ರಶ್ ಇತ್ತು. ಬಳಿಕ 3-4 ತಿಂಗಳು ಒಂದು ಲವ್ ಆಗಿ ಬ್ರೇಕಪ್ ಆಗಿತ್ತು. ಈ ವಿಚಾರ ಮಧು ಅವರಿಗೂ ಮೊದಲೇ ಗೊತ್ತಿತ್ತು" ಎಂದು ನಗುತ್ತಲೇ ಒಪ್ಪಿಕೊಂಡಿದ್ದಾರೆ.

56
ನಿಶಾ ಮದುವೆ & ಡ್ರೀಮ್ ಹೌಸ್

ತಂಗಿ ನಿಶಾ ಮದುವೆ ಬಗ್ಗೆ ಮಾತನಾಡಿ, "ನಿಶಾಗೆ ಈಗಲೇ ಮದುವೆ ಮಾಡಲ್ಲ. ಆಕೆ ಇನ್ನೂ ಸಣ್ಣ ಹುಡುಗಿ. ಆಕೆ ಸ್ವಾವಲಂಬಿಯಾಗಿ, ಇಂಡಿಪೆಂಡೆಂಟ್ ಆಗಿ ಬದುಕಬೇಕು. ನಾವು ನಮ್ಮ ದೊಡ್ಡ ಡ್ರೀಮ್ ಹೌಸ್ ಕಟ್ಟಿದ ಮೇಲೆಯೇ ಆಕೆಯ ಮದುವೆ ಮಾಡುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

66
ತಂದೆ-ತಾಯಿಯ ಲವ್ ಮ್ಯಾರೇಜ್

ನಿಖಿಲ್ ಅವರ ತಂದೆ-ತಾಯಿಯ ಮದುವೆ ಬಗ್ಗೆ ಮಾತನಾಡಿದ ಮಧು, "ನಮ್ಮ ಅತ್ತೆಯವರು ಉಡುಪಿಯ ಶೆಟ್ಟಿಸ್ (Shetty), ಮಾವನವರು ಮೈಸೂರಿನ ಗೌಡ್ರು (Gowda). ಇಬ್ಬರದ್ದೂ ಅಂತರಜಾತಿ ಪ್ರೇಮ ವಿವಾಹ. ಹಾಗಾಗಿ ಅತ್ತೆ ಮದುವೆಯಾಗಿ ಮೈಸೂರಿನಲ್ಲಿ ಸೆಟಲ್ ಆದರು" ಎಂದು ಕುಟುಂಬದ ಗುಟ್ಟನ್ನು ಮೊದಲ ಬಾರಿಗೆ ಬಹಿರಂಗಪಡಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories