'ಅಮೃತಧಾರೆ'ಯಲ್ಲಿ ವೀಕ್ಷಕರಿಗೆ ಅರ್ಥ ಆಗ್ದೆ ಇರೋದು, ಸದ್ಯ ಎದುರಾಗಿರುವ ದೊಡ್ಡ ಪ್ರಶ್ನೆ ಅಂದ್ರೆ ಇದೇ ನೋಡಿ!

Published : Oct 25, 2025, 01:08 PM IST

Amruthadhaare Kannada Serial: ಸದ್ಯಕ್ಕೆ ಇದೇ ವಿಚಾರ ವೀಕ್ಷಕರ ತಲೆಗೆ ಹುಳು ಬಿಟ್ಟಂತಾಗಿದೆ. ಹಾಗಾಗಿ ಮಲ್ಲಿ ಕಾಣಿಸಿಕೊಂಡಾಲೆಲ್ಲಾ ವೀಕ್ಷಕರು ಕೇಳುತ್ತಿರುವ ಒಂದೇ ಒಂದು ಪ್ರಶ್ನೆಯೆಂದರೆ…

PREV
16
ಇದೆಲ್ಲಾ ಸಾಧ್ಯವಾಗಿದ್ದು ಮಲ್ಲಿಯಿಂದ

ಸದ್ಯಕ್ಕಂತೂ 'ಅಮೃತಧಾರೆ' ಧಾರಾವಾಹಿ ವೀಕ್ಷಕರಿಗೆ ಸಿಕ್ಕಾಪಟ್ಟೆ ಖುಷಿಯಾಗಿದೆ. ಇಷ್ಟು ದಿನ ಬೇರೆ ಬೇರೆ ಕಡೆಯಿದ್ದ ಗೌತಮ್-ಭೂಮಿಕಾ ಈಗ ಒಂದೇ ವಠಾರದಲ್ಲಿದ್ದಾರೆ. ಹಾಗಾಗಿ ಒಬ್ಬರ ಮುಖ ಒಬ್ಬರು ನೋಡಲೇಬೇಕಿದೆ. ಇದೆಲ್ಲಾ ಸಾಧ್ಯವಾಗಿದ್ದು ಮಲ್ಲಿಯಿಂದ ಎಂಬುದು ಎಲ್ಲರಿಗೂ ಗೊತ್ತಿರುವುದೇ. ಗೌತಮ್ ಚೆನ್ನಾಗಿರಲೆಂದೇ ದೂರವಾಗಿದ್ದ ಭೂಮಿಕಾಗೆ ಈಗೀಗ ಗೌತಮ್‌ ಬಿಟ್ಟಿರಲು ಸಾಧ್ಯವಾಗುತ್ತಿಲ್ಲ. ಏತನ್ಮಧ್ಯೆ ಭೂಮಿಕಾ-ಗೌತಮಿ ಮಗಳು ಕೂಡ ಅವರ ಕೈ ಸೇರಾಗಿದೆ. ಆದರೆ ಅವರಿಬ್ಬರಿಗೂ ಆಕೆ ತಮ್ಮದೇ ಮಗಳು ಎಂಬುದು ಗೊತ್ತಿಲ್ಲ.

26
ಮತ್ತೆ ಹೆಚ್ಚಾಯ್ತು ಗಂಡನ ಮೇಲಿದ್ದ ಪ್ರೀತಿ

ಗೌತಮ್ ಈಗ ಮಗಳ ಲಾಲನೆ-ಪಾಲನೆಯಲ್ಲಿ ಬ್ಯುಸಿ. ಇತ್ತೀಚೆಗೆ ಆಕೆಯನ್ನು ಶಾಲೆಗೆ ಸೇರಿಸಲೆಂದು ಕರೆದುಕೊಂಡು ಹೋದಾಗ ಭೂಮಿಕಾ ಆ ಶಾಲೆಯ ಹೆಡ್‌ಮಿಸ್ ಎಂಬುದು ಗೌತಮ್‌ಗೂ ಗೊತ್ತಾಗಿದೆ. ಇತ್ತ ಕಡೆ ಗೌತಮ್ ಬಳಿ ಇರುವ ಆ ಮಗಳು ಯಾರು? ಎಂಬುದು ಸಹ ಭೂಮಿಕಾಗೆ ಈಗ ತಿಳಿದಿದೆ. ಸಹಜವಾಗಿಯೇ ಗಂಡನ ಮೇಲಿದ್ದ ಪ್ರೀತಿ ಮತ್ತೆ ದುಪಟ್ಟಾಗಿದೆ.

36
ರಾಜೇಂದ್ರ ಭೂಪತಿ ಮಗಳು

ಇದೆಲ್ಲದರ ಮಧ್ಯೆ ಈಗ ಮಲ್ಲಿ ಆಸ್ತಿ ಏನಾಯ್ತು ಎಂಬುದೇ ವೀಕ್ಷಕರಿಗೆ ಬಗೆಹರಿಯದ ಸಮಸ್ಯೆಯಂತಾಗಿದೆ. ಹೌದು. ಮಲ್ಲಿ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗಲೆಲ್ಲಾ ಆಕೆಯ ಡ್ರೆಸ್‌ ಕೋಡ್‌ ಒಂದು ಕಡೆ ಚರ್ಚೆಯಾದರೆ, ಇತ್ತ ಕಡೆ ಆಕೆಯ ಆಸ್ತಿಯ ಬಗ್ಗೆಯೂ ವೀಕ್ಷಕರಿಗೆ ಕುತೂಹಲ ಹುಟ್ಟುತ್ತದೆ. ಏಕೆಂದರೆ ಮಲ್ಲಿ ಗೌತಮ್ ಪಾಲಿನ ಶತ್ರುವಾಗಿದ್ದ ರಾಜೇಂದ್ರ ಭೂಪತಿ ಮಗಳು.

46
ವೀಕ್ಷಕರು ಕೇಳುತ್ತಿರುವ ಒಂದೇ ಒಂದು ಪ್ರಶ್ನೆ

ರಾಜೇಂದ್ರ ಭೂಪತಿ, ಜೈದೇವ್ ಸ್ನೇಹ ಬೆಳೆಸಿ ಗೌತಮ್ ಆಸ್ತಿಯನ್ನ ಲಪಟಾಯಿಸುವ ಹೊತ್ತಿನಲ್ಲೇ ಸಿಕ್ಕಿಬಿದ್ದಿದ್ದ. ಆಗಲೇ ಗೌತಮ್‌ಗೆ ಈತ ಯಾರೆಂಬ ದೊಡ್ಡ ಸತ್ಯ ಗೊತ್ತಾಯ್ತು. ಅದಾದ ನಂತರ ರಾಜೇಂದ್ರ ಭೂಪತಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಇದೇ ವಿಚಾರ ವೀಕ್ಷಕರ ತಲೆಗೆ ಹುಳು ಬಿಟ್ಟಂತಾಗಿದೆ. ಹಾಗಾಗಿ ಮಲ್ಲಿ ಕಾಣಿಸಿಕೊಂಡಾಲೆಲ್ಲಾ ವೀಕ್ಷಕರು ಕೇಳುತ್ತಿರುವ ಒಂದೇ ಒಂದು ಪ್ರಶ್ನೆಯೆಂದರೆ "ನಂಗ್ ಅರ್ಥ ಆಗ್ದೇ ಇರೋದ್ ಎನ್ ಅಂದ್ರೆ ಮಲ್ಲಿಯ ನೂರಾರ್ ಕೋಟಿ ಆಸ್ತಿ ನಾ ಯಾರ್ ಅನುಭವಿಸ್ತಾ ಇದಾರೆ ಅನ್ನೋದು..." ಅಂತಿದ್ದಾರೆ.

56
ತಮಾಷೆಯಾಗಿ ಕೇಳಿರುವ ಪ್ರಶ್ನೆಗಳು ಹೀಗಿವೆ ನೋಡಿ...

ಈಗ ಧಾರಾವಾಹಿಯಲ್ಲಿ ಭೂಮಿಕಾ-ಗೌತಮ್ ಜೊತೆಗೆ ಹೈಲೆಟ್ ಆಗುತ್ತಿರುವುದು ಮಲ್ಲಿ ಪಾತ್ರ. ಮೊದಲಿನಿಂದಲೂ ಮಲ್ಲಿ ಪಾತ್ರಕ್ಕೆ ತನ್ನದೇ ಆದ ತೂಕವಿದೆ. ಈಗೀಗ ಗೌತಮ್-ಭೂಮಿಕಾಳನ್ನು ಒಂದು ಮಾಡಲು ಹರಸಾಹಸಪಡುತ್ತಿರುವ ಮಲ್ಲಿಯ ತುಂಟತನ, ಮಗ್ಧತನ ಎಲ್ಲವೂ ಜನರ ಗಮನಸೆಳೆದಿದೆ. ಈ ಹೊತ್ತಿನಲ್ಲಿ ಸದ್ಯ ಮಲ್ಲಿ ಬಗ್ಗೆ ವೀಕ್ಷಕರು ಕಾಮೆಂಟ್ ಮಾಡುತ್ತಿರುವುದು ಇದೊಂದೇ ವಿಚಾರಕ್ಕೆ. ಬಹುಶಃ ನಿಮಗೂ ಹಾಗೆ ಅನಿಸಿದರೆ ಸದ್ಯದರಲ್ಲೇ ನಿರ್ದೇಶಕರೇ ಉತ್ತರ ಕೊಡಬಹುದು ಬಿಡಿ. ಹಾಗೆಯೇ ವೀಕ್ಷಕರು ತಮಾಷೆಯಾಗಿ ಮಲ್ಲಿ ಕುರಿತು ಕೇಳಿರುವ ಪ್ರಶ್ನೆಗಳು ಹೀಗಿವೆ ನೋಡಿ...

66
ಐವತ್ತಕ್ಕೂ ಹೆಚ್ಚು ಲೆಕ್ಸ್‌ ಬಂದಿದೆ..

*ನಂಗ್ ಅರ್ಥ ಆಗ್ದೇ ಇರೋದ್ ಎನ್ ಅಂದ್ರೆ ಮಲ್ಲಿಯ ನೂರಾರ್ ಕೋಟಿ ಆಸ್ತಿ ನಾ ಯಾರ್ ಅನುಭವಿಸ್ತಾ ಇದಾರೆ ಅನ್ನೋದು.…
*ಮಲ್ಲಿ ಅವರ ಆಸ್ತಿ ಏನಾಯ್ತು.
*ಚಿಕ್ಕಿ ಸ್ಟೈಲ್ ಚೇಂಜ್ ಆಗೋಯ್ತು ಫುಲ್ಲು.
*ಮಲ್ಲಿ ಅಪ್ಪು ಸೂಪರ್..ಮಲ್ಲಿ ಆಸ್ತಿ ಎಲ್ಲಿ ಹೋಯ್ತು.
*ಚಿಕ್ಕಿ ಮಗನ ಕಾಂಬಿನೇಶನ್ ಸೂಪರ್.

ಸದ್ಯ ಇದೇ ಕಾಮೆಂಟ್ಸ್‌ಗೆ ಐವತ್ತಕ್ಕೂ ಹೆಚ್ಚು ಲೆಕ್ಸ್‌ ಬಂದಿದೆ ಎಂದರೆ ಮಲ್ಲಿಯ ಆಸ್ತಿಯ ಬಗ್ಗೆ ವೀಕ್ಷಕರಿಗೆ ಇರುವ ಕುತೂಹಲ ನೀವೇ ಅರ್ಥ ಮಾಡಿಕೊಳ್ಳಿ.

Read more Photos on
click me!

Recommended Stories