21 ವರ್ಷದ ಮಗನಿಗೆ 'ವರ್ಜಿನಿಟಿ ಕಳೆದುಕೊಂಡಿದ್ದು ಯಾವಾಗ?' ಎಂದು ಕೇಳಿದ್ದ ಮಲೈಕಾ ಅರೋರಗೆ ಇಂದು ಸಂಭ್ರಮವೋ ಸಂಭ್ರಮ

Published : Oct 25, 2025, 12:08 PM IST

ನಟಿ ಮಲೈಕಾ ಅರೋರಾ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮಲೈಕಾ ಅರೋರ ಅವರು ತಮ್ಮ ಡ್ಯಾನ್ಸ್‌, ಫಿಟ್‌ನೆಸ್‌ಗೆ ಹೆಸರುವಾಸಿಯಾಗಿದ್ದಾರೆ. ಅವರಿಂದು 50ನೇ ಜನ್ಮದಿನ ಆಚರಿಸುತ್ತಿರುವಾಗಿ ಮಲೈಕಾ ತಂಗಿ ಅಮೃತಾ ಅವರೇ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಮೂಲಕ ಹೇಳಿದ್ದಾರೆ. 

PREV
15
50ನೇ ವಯಸ್ಸಿಗೆ ಕಾಲಿಟ್ರು

1973 ರಂದು ಮಲೈಕಾ ಅರೋರ ಅವರು ಮಹಾರಾಷ್ಟ್ರದ ಥಾಣೆಯಲ್ಲಿ ಜನಿಸಿದರು. ಕೆಲವು ವರದಿಗಳು ಹೇಳುವಂತೆ, ಮಲೈಕಾ ಅರೋರ ಅವರು ಇತ್ತೀಚೆಗೆ ತಮ್ಮ 52ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ಆದರೆ ಅವರ ಸಹೋದರಿ ಅಮೃತಾ ಅರೋರ ಅವರು ಸೋಶಿಯಲ್‌ ಮೀಡಿಯಾದಲ್ಲಿ 50ನೇ ವಯಸ್ಸಿಗೆ ಕಾಲಿಟ್ಟಿದ್ದೀರಿ ಎಂದು ಶುಭ ಹಾರೈಸಿದ್ದರು. 

25
ತಂದೆ-ತಾಯಿ ಡಿವೋರ್ಸ್‌

ಮಲೈಕಾ ಅರೋರಾ ತಾಯಿ ಜಾಯ್ಸ್ ಪಾಲಿಕಾರ್ಪ್ ಅವರು ಮಲಯಾಳಿ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರು, ತಂದೆ ಅನಿಲ್ ಅರೋರ ಅವರು ಪಂಜಾಬಿ ಹಿಂದುವಾಗಿದ್ದು, ಭಾರತೀಯ ಮರ್ಚೆಂಟ್ ನೇವಿಯಲ್ಲಿ ಕೆಲಸ ಮಾಡಿದ್ದರು. ಮಲೈಕಾಗೆ 11 ವರ್ಷ ವಯಸ್ಸಿದ್ದಾಗಲೇ ಅವರ ತಂದೆ-ತಾಯಿ ಡಿವೋರ್ಸ್‌ ಪಡೆದಿದ್ದರು. ಆ ಬಳಿಕ ಮಲೈಕಾ ತಾಯಿ ಇನ್ನೊಂದು ಮದುವೆಯಾಗಿದ್ದರು. ಕಳೆದ ವರ್ಷ ಮಲೈಕಾ ಮಲತಂದೆ ಆತ್ಮ*ಹತ್ಯೆ ಮಾಡಿಕೊಂಡಿದ್ದರು.

35
ಮಗನ ಡಿವ

ಮಲೈಕಾ ತಂಗಿ ಅಮೃತಾ ಅರೋರಾ ಕೂಡ ಬಾಲಿವುಡ್ ನಟಿ. 1998ರಲ್ಲಿ ಮಲೈಕಾ ಅವರು ನಟ ಅರ್ಬಾಜ್ ಖಾನ್‌ರನ್ನು ಮದುವೆಯಾದರು. ಇವರಿಗೆ ಅರ್ಹಾನ್ ಖಾನ್ ಎಂಬ ಮಗನಿದ್ದಾನೆ. 18 ವರ್ಷಗಳ ದಾಂಪತ್ಯದ ಬಳಿಕ, 2017 ರಲ್ಲಿ ಇವರು ಡಿವೋರ್ಸ್‌ ಪಡೆದಿದ್ದರು.

45
12 ವರ್ಷದ ಕಿರಿಯವನ ಜೊತೆ ಬ್ರೇಕಪ್‌

ಮಲೈಕಾ ಅರೋರ ಅವರು ತನಗಿಂತ 12 ವರ್ಷದ ಕಿರಿಯವರಾದ ನಟ ಅರ್ಜುನ್ ಕಪೂರ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು, ಕಳೆದ ವರ್ಷ ಬ್ರೇಕಪ್‌ ಆದರು. 2025 ರ ಆರಂಭದಲ್ಲಿ ಡಿನೋ ಮೋರಿಯಾ ಜೊತೆ ಲವ್‌ನಲ್ಲಿದ್ದಾರೆ ಎಂದು ಹೇಳಲಾಗಿತ್ತು.

55
ಮಗನಿಗೆ ಕೇಳಿದ್ದ ಪ್ರಶ್ನೆ ಏನು?

ಮಲೈಕಾ ಅರೋರ ಅವರ ವಾಕಿಂಗ್‌ ಸ್ಟೈಲ್‌ ಭಾರೀ ಟ್ರೋಲ್‌ ಆಗುತ್ತಿರುತ್ತದೆ. ಒಂದು ಸಂದರ್ಶನವೊಂದರಲ್ಲಿ ಮಗನಿಗೆ ಅವರು ‘ನೀನು ಯಾವಾಗ ವರ್ಜಿನಿಟಿ ಕಳೆದುಕೊಂಡಿದ್ದೀಯಾ?” ಎಂದು ಕೇಳಿದ್ದರು.

Read more Photos on
click me!

Recommended Stories