ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 9ರ ಪ್ರವೀಣ ಸ್ಪರ್ಧಿ ಅನುಪಮಾ ಗೌಡ ಫಿನಾಲೆ ವಾರದಲ್ಲಿ ಎಲಿಮಿನೇಟ್ ಅಗುತ್ತಾರೆ. ಹೊರ ಬಂದು ಸಂದರ್ಶನ ಮತ್ತು ಪರ್ಸನಲ್ ಲೈಫ್‌ನಲ್ಲಿ ಬ್ಯುಸಿಯಾದ ನಟಿ ಈಗ ಅಭಿಮಾನಿಗಳ ಜೊತೆ ಸಮಯ ಕಳೆದಿದ್ದಾರೆ.
28
ಅನುಪಮಾ ಗೌಡ ಅಭಿಮಾನಿಗಳ ಒಳಗ ದೊಡ್ಡ ಸರ್ಪ್ರೈಸ್ ಹಮ್ಮಿಕೊಂಡಿದ್ದರು. ಹೋಟೆಲ್‌ವೊಂದರಲ್ಲಿ ಬಿಗ್ ಬಾಸ್ ಕಿಚ್ಚ ಸುದೀಪ್ ಜೊತೆಗಿರುವ ಫೋಟೋ ಕಟೌಟ್ ಹಾಕಿ ಅಲಂಕಾರ ಮಾಡಿದ್ದಾರೆ.
38
ಬಿಗ್ ಬಾಸ್ ಲೀವಿಂಗ್ ಏರಿಯಾದಲ್ಲಿರುವ ಸೋಫಾ ಮೇಲೆ ಕುಳಿತುಕೊಂಡಿರುವ ಗೊಂಬೆಯನ್ನು ಕೇಕ್ ಮೇಲೆ ಕೂರಿಸಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆ ಎಂಟ್ರಿ ಗೇಟ್ ಕೂಡ ಹಾಕಿಸಿ ಟ್ರೂ ವಿನ್ನರ್ ಬಿಗ್ ಬಾಸ್ ಸೀಸನ್ 9 ಎಂದು ಬರೆಸಿದ್ದಾರೆ.
48
ಕೆಂಪು ಬಣ್ಣದ ಡ್ರೆಸ್‌ನಲ್ಲಿ ಅನುಪಮಾ ಗೌಡ ಮಿಂಚಿದ್ದಾರೆ. ಅಲ್ಲಿಗೆ ಬಂದಿರುವ ಅಭಿಮಾನಿಗಳು ತಮ್ಮ ಟೀ-ಶರ್ಟ್ ಮೇಲೆ ಅನುಪಮಾ ಫೋಟೋ ಹಾಕಿಸಿಕೊಂಡು ಒಂದೊಂದು ಟೈಟಲ್ ಕೊಟ್ಟಿದ್ದಾರೆ.
'ನನ್ನ ಆತ್ಮೀಯರಿಗೆ ಸ್ಪೆಷಲ್ ಧನ್ಯವಾದಗಳು. ಎಷ್ಟು ಖುಷಿಯಾಗುತ್ತಿದೆ ಎಂದು ಹೇಳಿಕೊಂಡರೆ ಸಣ್ಣ ಪದವಾಗುತ್ತದೆ. ನೀವುಗಳು ನನ್ನ ಜೀವನದಲ್ಲಿ ಬಂದಿರುವುದು ಧನ್ಯವಾದಗಳು' ಎಂದು ಅನುಪಮಾ ಬರೆದುಕೊಂಡಿದ್ದಾರೆ.
78
'ನನಗೆ ಸದಾ ಸ್ಪೂರ್ತಿ ತುಂಬುವ ನಿಮಗೆ ಧನ್ಯವಾದಗಳು. ನಿಮ್ಮ ನಿರೀಕ್ಷೆಗಳನ್ನು ಮುಟ್ಟುವೆ ಎಂದುಕೊಂಡಿರುವೆ. ಇಂದು ನೀವು ನನ್ನನ್ನು ಆಚರಿಸಿದ್ದೀರಿ ನಿಮ್ಮನ್ನು ಪ್ರತಿ ದಿನ ಆಚರಿಸುವೆ' ಎಂದಿದ್ದಾರೆ.
88
'ಬಿಗ್ ಬಾಸ್ ಸೀಸನ್ 9 ಒಂದೊಳ್ಳೆ ಕಾರಣಕ್ಕೆ ಆಗಿದೆ... ಯಾರೇ ಬರಲಿ ನಿಮ್ಮಷ್ಟು ಆತ್ಮೀಯರು ನನಗೆ ಯಾರೂ ಇಲ್ಲ' ಎಂದಿದ್ದಾರೆ. ಹಾಗೂ ಪ್ರತಿಯೊಬ್ಬರ ಜೊತೆ ಪೋಸ್ ಕೊಟ್ಟಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.