ರಿಯಲ್ ಲೈಫಲ್ಲಿ ಸಖತ್ ಗ್ಲಾಮರಸ್ ಆಗಿದ್ದಾರೆ ಈ ಆನ್ ಸ್ಕ್ರೀನ್ ಅಮ್ಮಂದಿರು

Published : Jan 15, 2023, 02:17 PM IST

ತಮ್ಮ ರೀಲ್ ಜೀವನದಲ್ಲಿ ಪ್ರೀತಿಯ ತಾಯಿಯ ಪಾತ್ರವನ್ನು ನಿರ್ವಹಿಸುತ್ತಾ, ಸದಾ ಸೀರೆಯನ್ನೇ ಉಡುವ ನಟಿಯರಲ್ಲಿ ಅನೇಕರು ನಿಜ ಜೀವನದಲ್ಲಿ ಸಖತ್ ಬೋಲ್ಡ್ ಆಗಿದ್ದಾರೆ. ಫ್ಯಾಷನ್ ವಿಷಯಕ್ಕೆ ಬಂದಾಗ ಅವರು ತಮ್ಮ ಸ್ವ್ಯಾಗ್ ಅನ್ನು ಪ್ರದರ್ಶಿಸಲು ಎಂದಿಗೂ ನಾಚಿಕೆಪಡುವುದಿಲ್ಲ. ನಿಜ ಜೀವನದಲ್ಲಿ ಗ್ಲಾಮರಸ್ ಆಗಿರುವ ಕನ್ನಡ ಕಿರುತೆರೆಯ ಕೆಲವು ತಾಯಂದಿರು ಯಾರ್ಯಾರು ನೋಡೋಣ..

PREV
16
ರಿಯಲ್ ಲೈಫಲ್ಲಿ ಸಖತ್ ಗ್ಲಾಮರಸ್ ಆಗಿದ್ದಾರೆ ಈ ಆನ್ ಸ್ಕ್ರೀನ್ ಅಮ್ಮಂದಿರು
ವನಿತಾ ವಾಸು (Vanitha Vasu)

ಎವರ್ ಗ್ರೀನ್ ನಟಿ ಕನ್ನಡ ಮನರಂಜನಾ ಉದ್ಯಮಕ್ಕೆ ಪ್ರವೇಶಿಸಿದಾಗಿನಿಂದ ಯಾವಾಗಲೂ ಗ್ಲಾಮ್ ಗೊಂಬೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಆದರೆ ಟಿವಿಯಲ್ಲಿ ಅವರು ನಿರ್ವಹಿಸುವ ಆನ್-ಸ್ಕ್ರೀನ್ ಪಾತ್ರಗಳಲ್ಲಿ ಸದಾ ಸೀರೆಯನ್ನೆ ಉಡುವ ಅಮ್ಮನಾಗಿ ಕಾಣಿಸಿಕೊಂಡಿದ್ದರು. ಆದರೆ ಈ ನಟಿ ರಿಯಲ್ ಆಗಿ,  'ಬೋಲ್ಡ್ ಮತ್ತು ಟ್ರೆಂಡಿ' ಲುಕ್ ಇಷ್ಟಪಡ್ತಾರೆ.

26
ವಾಣಿಶ್ರೀ (Vanishree)

ವಾಣಿಶ್ರೀ ಅವರು ಜನಪ್ರಿಯ ಆನ್-ಸ್ಕ್ರೀನ್ ತಾಯಂದಿರಲ್ಲಿ ಒಬ್ಬರು. ಆದಾಗ್ಯೂ, ಅವರ ನಿಜ ಜೀವನದ ವಿಷಯಕ್ಕೆ ಬಂದಾಗ, ನಟಿ ತುಂಬಾ ಸರಳ ಮತ್ತು ಟ್ರೆಂಡಿ ಕ್ಯಾಶುಯಲ್ ವೆಸ್ಟರ್ನ್ ಉಡುಪನ್ನು ಧರಿಸುತ್ತಾರೆ. ಹೆಚ್ಚಾಗಿ ಇವರು ಮಾಡರ್ನ್ ಡ್ರೆಸ್ ನಲ್ಲೇ ಕಾಣಿಸಿಕೊಳ್ಳುತ್ತಾರೆ. 

36
ಸ್ವಾತಿ ಎಚ್ ವಿ  (Swathi HV)

ಮಾಜಿ ಮಿಸ್ ಕರ್ನಾಟಕ ಪ್ರಸ್ತುತ ಕನ್ನಡ ಕಿರುತೆರೆಯ ತೆರೆಯ ಮೇಲೆ ಹಲವಾರು ಸೀರಿಯಲ್ ಗಳಲ್ಲಿ ತಾಯಿಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸದಾ ಸೀರೆಯಲ್ಲಿಯೇ ಕಾಣಿಸಿಕೊಳ್ಳುವ ಈ ನಟಿ ರಿಯಲ್ ಲೈಫ್ ನಲ್ಲಿ ಸಖತ್ ಬೋಲ್ಡ್ ಆಗಿರುತ್ತಾರೆ. ಯಾವಾಗಲೂ ಟ್ರೆಂಡಿ ಉಡುಗೆಯಲ್ಲಿಯೇ ಕಾಣಿಸಿಕೊಳ್ಳುತ್ತಾರೆ. 

46
ಸ್ವಪ್ನಾ ದೀಕ್ಷಿತ್  (Swapna deekshith)

ಕಮಲಿ ಸೀರಿಯಲ್ ನಲ್ಲಿ ರಿಷಿ ಸರ್ ತಾಯಿಯಾಗಿ ಕಾಣಿಸಿಕೊಂಡ ಸ್ವಪ್ನಾ ದೀಕ್ಷಿತ್ ಸಹ ಯಾವಾಗಲೂ ಕಿರುತೆರೆಯಲ್ಲಿ ಸೀರೆಯಲ್ಲಿಯೇ ಮಿಂಚಿದ್ದಾರೆ. ಆದರೆ ನಿಜ ಜೀವನದಲ್ಲಿ ಇವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.

56
ಯಮುನಾ ಸನ್ನಿಧಿ (Yamuna Srinidhi)

ಯಮುನಾ ತನ್ನ ನಿಜ ಜೀವನದಲ್ಲಿ ನಿಜಕ್ಕೂ ಸಖತ್ ಗ್ಲಾಮರಸ್ ಆಗಿದ್ದಾರೆ. ಅವರು ಹೆಚ್ಚಾಗಿ ತನ್ನ ರೀಲ್ ಜೀವನದಲ್ಲಿ ಸೀರೆಯಲ್ಲಿ ಕಾಣಿಸಿಕೊಂಡರೂ, ತನ್ನ ನಿಜ ಜೀವನದಲ್ಲಿ ಸ್ಟೈಲ್ ದಿವಾ ಆಗಿದ್ದಾರೆ ಮತ್ತು ಯಾರನ್ನೂ ಬೇಕಾದರೂ ತನ್ನ ಲುಕ್ ಮೂಲಕ ಸೆಳೆಯುವ ಸ್ಟೈಲ್ ಇವರಲ್ಲಿದೆ.

66
ಜ್ಯೋತಿ ಕಿರಣ್ (Jyothi Kiran)

ಒಂಬತ್ತು ಮೊಳದ ಸೀರೆಯಲ್ಲಿ ಕಾಣಿಸಿಕೊಳ್ಳುವ ಜ್ಯೋತಿ ಕಿರಣ್ ಆನ್-ಸ್ಕ್ರೀನ್ ಪಾತ್ರಕ್ಕಿಂತ ಭಿನ್ನವಾಗಿ, ನಟಿ ತನ್ನ ನಿಜ ಜೀವನದಲ್ಲಿ ಗುರುತಿಸಲಾಗದಂತೆ ಕಾಣುತ್ತಾರೆ. ಇವರು ತನ್ನ ನಿಜ ಜೀವನದಲ್ಲಿ ಸಂಪೂರ್ಣ ವಿಭಿನ್ನವಾಗಿ ಮಾಡರ್ನ್ ಡ್ರೆಸ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories