ಕಿರುತೆರೆಯಲ್ಲಿ ಸಣ್ಣ-ಪುಟ್ಟ ಪಾತ್ರ ಮಾಡಿ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡ ಸ್ಟಾರ್ಸ್‌

First Published Jan 14, 2023, 4:23 PM IST

ದೂರದರ್ಶನವು ಅನೇಕ ಸೂಪರ್ ಸ್ಟಾರ್ ನಟರಿಗೆ ಯಶಸ್ಸಿನ ಮೆಟ್ಟಿಲಿನಂತೆ ಕಾರ್ಯ ನಿರ್ವಹಿಸಿದೆ. ಒಬ್ಬ ನಟನಿಗೆ ತಮ್ಮ ಕನಸುಗಳನ್ನು ನನಸಾಗಿಸಲು ಅನೇಕ ಮಾರ್ಗಗಳಿವೆ. ಕೆಲವು ನಟರು ತಮ್ಮ ವೃತ್ತಿಜೀವನವನ್ನು ರಂಗಭೂಮಿಯೊಂದಿಗೆ ಪ್ರಾರಂಭಿಸಿದರೆ, ಇತರರು ಮಾಡೆಲಿಂಗ್ನೊಂದಿಗೆ ಪ್ರಾರಂಭಿಸುತ್ತಾರೆ. ಇನ್ನು ಅನೇಕ ಕಲಾವಿದರು ದೂರದರ್ಶನದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ. ದೂರದರ್ಶನದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕೆಲವು ಕನ್ನಡ ಖ್ಯಾ ನಟರ (super stars of Kannada film industry) ಬಗ್ಗೆ ಇಲ್ಲಿದೆ ಮಾಹಿತಿ… 

ಸುದೀಪ್ ( Kichcha Sudeep)

ಇಂದು, ಸುದೀಪ್ ಭಾರತೀಯ ಚಲನಚಿತ್ರೋದ್ಯಮದಲ್ಲಿ (Indian film industry) ತಮ್ಮದೇ ಆದ ಉನ್ನತ ಸ್ಥಾನ ಗಳಿಸಿದ್ದಾರೆ. ಆದರೆ ಸೂಪರ್ ಸ್ಟಾರ್ ಆಗುವಲ್ಲಿನ ಸುದೀಪ್ ಪ್ರಯಾಣ ಗುಲಾಬಿಗಳ ಹಾಸಿಗೆಯಾಗಿರಲಿಲ್ಲ. ಮೊದಲಿಗೆ ಜಾಹೀರಾತಿನಲ್ಲಿ ಕಾಣಿಸಿಕೊಂಡ ನಂತರ ಸುದೀಪ್ 'ಪ್ರೇಮದ ಕಾದಂಬರಿ' ಎಂಬ ಟೆಲಿ ಸರಣಿಯಲ್ಲಿ ಒಂದು ಪಾತ್ರ ಮಾಡಿದ್ದರು. ಆದಾದ ನಂತರವೇ ಅವರು ಹಿರಿತೆರೆ ಮೇಲೆ ಕಾಣಿಸಿಕೊಂಡಿದ್ದು.

ಯಶ್ (Rocking star Yash)

ಇಂದು, ಪ್ರತಿಯೊಬ್ಬರೂ ಅವರನ್ನು 'ರಾಕಿ ಭಾಯ್' ಎಂದು ಕರೆಯುತ್ತಿದ್ದಾರೆ. ಉದ್ಯಮದಲ್ಲಿ ಶೂನ್ಯ ಹಿನ್ನೆಲೆಯೊಂದಿಗೆ ಬಂದ ಕೆಜಿಎಫ್ ಸ್ಟಾರ್ ಯಶ್ ಕಿರುತೆರೆಯ ಮೂಲಕ ವೃತ್ತಿ ಜೀವನ ಆರಂಭಿಸಿದರು. ಈಟಿವಿ ಕನ್ನಡದಲ್ಲಿ ಪ್ರಸಾರವಾದ ಅಶೋಕ್ ಕಶ್ಯಪ್ ನಿರ್ದೇಶನದ ನಂದ ಗೋಕುಲ ಎಂಬ ಟೆಲಿಸೀರಿಯಲ್ ಮೂಲಕ ಯಶ್ ತಮ್ಮ ನಟನಾ ವೃತ್ತಿ ಜೀವನ ಪ್ರಾರಂಭಿಸಿದರು. ನಂತರ ಮಳೆಬಿಲ್ಲು ಮತ್ತು ಪ್ರೀತಿ ಇಲ್ಲದ ಮೇಲೆ ಮುಂತಾದ ಹಲವಾರು ಟೆಲಿ ಸೀರಿಯಲ್‌ಗಳಲ್ಲಿ ಕಾಣಿಸಿಕೊಂಡರು.

ಪ್ರಕಾಶ್ ರೈ (Prakash Rai)

ಪ್ರಕಾಶ್ ರೈ ತಮ್ಮ ನಟನಾ ವೃತ್ತಿ ಜೀವನವನ್ನು ಬಿಸಿಲು ಕುದುರೆ ಮತ್ತು ಗುಡ್ಡದ ಭೂತ (ತುಳು ಮತ್ತು ಕನ್ನಡ) ಧಾರಾವಾಹಿಗಳೊಂದಿಗೆ ಪ್ರಾರಂಭಿಸಿದರು. ನಂತರ ಅವರು ಕನ್ನಡ ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ವಹಿಸಿಕೊಂಡರು. ಇಂದು, ಅವರು ದಕ್ಷಿಣ ಭಾರತದ ಚಲನಚಿತ್ರಗಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ನಟಿಸಿ ಜನರ ಮೆಚ್ಚಿನ ನಟ ಎನಿಸಿಕೊಂಡಿದ್ದಾರೆ. ಸುಧಾ ನರಸಿಂಹರಾಜು ಅವರೊಂದಿಗೆ ಅಭಿನಯಿಸಿದ ಗೂಡಿನಿಂದ ಗಗನಕ್ಕೆ ಇವರ ಫೇಮಸ್ ಸೀರಿಯಲ್. 

ಗಣೇಶ್ (Golden Star Ganesh)

ಕನ್ನಡ ಸಿನಿಮಾದ 'ಗೋಲ್ಡನ್ ಸ್ಟಾರ್' ಎಂದು ಪ್ರೀತಿಯಿಂದ ಕರೆಯಲ್ಪಡುವ ಗಣೇಶ್ ಒಂದು ಕಾಲದಲ್ಲಿ 'ಕಾಮಿಡಿ ಟೈಮ್ ಗಣೇಶ್' ಎಂದು ಕರೆಯಲ್ಪಡುತ್ತಿದ್ದರು. ನಟ ಹಾಸ್ಯ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು ಮತ್ತು ಪ್ರೇಕ್ಷಕರನ್ನು ಸ್ವಾಗತಿಸುವ ಅವರ ಡೈಲಾಗ್ - 'ನಮಸ್ಕಾರ, ನಮಸ್ಕಾರ, ನಮಸ್ಕಾರ' ತುಂಬಾನೆ ಫೇಮಸ್ ಆಗಿತ್ತು.

ಶ್ರೀನಗರ ಕಿಟ್ಟಿ (Srinagar Kitty)

'ಮಲೆನಾಡಿನ ಚಿತ್ರಗಳು', 'ದೊಡ್ಮನೆ', 'ಕಂದನ ಕಾವ್ಯ' ಮುಂತಾದ ಧಾರಾವಾಹಿ ಮೂಲಕ ಬಾಲನಟನಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಶ್ರೀನಗರ ಕಿಟ್ಟಿ ನಂತರ ಈ ಟಿವಿ, ಉದಯ ಮತ್ತು ಸುವರ್ಣ ಧಾರಾವಾಹಿಗಳಲ್ಲಿ ನಟಿಸಿದರು - ಅವುಗಳಲ್ಲಿ ಪ್ರಮುಖವಾದವು, ಚಂದ್ರಿಕಾ, ಆನಂದ ಸಾಗರ, ಮನೆ ಮನೆ ಕಥೆ ಮತ್ತು ಭೂಮಿ ಮೊದಲಾದ ಸೀರಿಯಲ್ ನಲ್ಲಿ ನಟಿಸಿದ್ದರು.

ಡಾರ್ಲಿಂಗ್ ಕೃಷ್ಣ (Darling Krishna)

ಸುನೀಲ್ ನಾಗಪ್ಪ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ. ಜಾಕಿ ಚಿತ್ರದಲ್ಲಿ ದುನಿಯಾ ಸೂರಿ ಅವರ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇವರು ಮೊದಲಿಗೆ ಕೃಷ್ಣ ರುಕ್ಮಿಣಿ ಸೀರಿಯಲ್ ಮೂಲಕ ನಟನಾ ವೃತ್ತಿಗೆ ಕಾಲಿಟ್ಟರು. ಅಲ್ಲಿ ಅವರು ಕೃಷ್ಣನ ಪ್ರಮುಖ ಪಾತ್ರವನ್ನು ನಿರ್ವಹಿಸಿದರು. ಈ ಧಾರಾವಾಹಿ ಎಷ್ಟು ಜನಪ್ರಿಯವಾಗಿತ್ತೆಂದರೆ, ಜನರು ಅವರನ್ನು ತೆರೆಯ ಮೇಲಿನ ಹೆಸರಾದ ಕೃಷ್ಣ ಎಂದು ಕರೆಯಲು ಪ್ರಾರಂಭಿಸಿದರು, ಇದು ಅಂತಿಮವಾಗಿ ಅವರ ಅಧಿಕೃತ ಹೆಸರಾಯಿತು.

ರಿಷಿ (Rishi)

ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ರಿಷಿ ನಟನೆಯಲ್ಲಿ ತುಂಬಾನೆ ಇಂಟ್ರೆಸ್ಟ್ ಇರೋದರಿಂದ ತಮ್ಮ ಕೆಲಸವನ್ನು ತೊರೆದರು. ಅವರು ಟಿ.ಎನ್.ಸೀತಾರಾಮ್ ಅವರ ಮಹಾಪರ್ವ ಸೀರಿಯಲ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಇದಾದ ನಂತರ, ನಟ ದೈನಂದಿನ ಧಾರಾವಾಹಿ 'ಅನುರೂಪ' ದಲ್ಲಿ ಪ್ರಮುಖ ಪಾತ್ರವನ್ನು ಪಡೆದರು ಮತ್ತು ಆ ಪಾತ್ರಕ್ಕಾಗಿ ಎರಡು ವರ್ಷಗಳ ಕಾಲ ಅತ್ಯುತ್ತಮ ನಟ ಪ್ರಶಸ್ತಿ ಗೆದ್ದರು.

click me!