ರಶ್ಮಿ ದೇಸಾಯಿ ಕೂಡ ದೂರದರ್ಶನದಿಂದ ಸ್ವಲ್ಪ ದೂರ ಉಳಿದಿದ್ದಾರೆ. ನಾಗಿನ್6 ರಲ್ಲಿ ನಟಿಸಿದ ಬಳಿಕ ಎರಡು ರಿಯಾಲಿಟಿ ಶೋಗಳಲ್ಲಿ ರಶ್ಮಿ ದೇಸಾಯಿ ಕಾಣಿಸಿಕೊಂಡಿದ್ದರು. 2023ರಲ್ಲಿ, ಅವರು ಎಂಟರ್ಟೈನ್ಮೆಂಟ್ ಕಿ ರಾತ್: ಹೌಸ್‌ಫುಲ್, 2025 ರಲ್ಲಿ, ಅವರು ವಾಗ್ಲೆ ಕಿ ದುನಿಯಾ - ನಯಿ ಪೀಧಿ ನಯೇ ಕಿಸ್ಸೆ ಕಾರ್ಯಕ್ರಮದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2025ರಲ್ಲಿ ಗುಜರಾತಿ ಸಿನಿಮಾ ಶ್ರೀಮತಿ ಮಾರಾ ಆನ್‌ಲೈನ್ ಚೆ ನಲ್ಲಿ ಕಾಣಿಸಿಕೊಂಡರು. ಇತ್ತೀಚೆಗೆ ಪಾಡ್‌ಕ್ಯಾಸ್ಟ್ ಸಹ ಪ್ರಾರಂಭಿಸಿದ್ದಾರೆ.