Amruthadhaare Kannada Tv Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್-ಭೂಮಿಕಾ ಇದ್ದ ಬಂಗಲೆಗೆ ಅಜ್ಜಿ ಆಗಮನವಾಗಿದೆ. ತಮಗೆ ಹೇಗೆ ಬೇಕೋ ಹಾಗೆ ದುಡ್ಡಿನ ಮದದಲ್ಲಿ ಮೆರೆಯುತ್ತಿದ್ದ ಜಯದೇವ್-ಶಕುಂತಲಾಗೆ ಈಗ ಅವಳು ಬುದ್ಧಿ ಕಲಿಸಬೇಕಿದೆ. ಹೀಗಿರುವಾಗಲೇ ಆಘಾತಕಾರಿ ವಿಷಯ ಹೊರಬಿದ್ದಿದೆ.
ಗೌತಮ್ ಹಾಗೂ ಭೂಮಿಕಾ ಮನೆಗೆ ಬರಬೇಕು, ಮತ್ತೆ ಮೊದಲಿನ ಥರ ಈ ಮನೆ ಆಗಬೇಕು. ಗೌತಮ್ ತನ್ನ ಮಗನ ಜೊತೆ ಚೆನ್ನಾಗಿ ಜೀವನ ಮಾಡಬೇಕು. ಜಯದೇವ್-ಶಕುಂತಲಾಗೆ ಬುದ್ಧಿ ಕಲಿಸಬೇಕು ಎಂದು ಅವಳು ಅಂದುಕೊಂಡಿದ್ದಾಳೆ. ಹಾಗಾದರೆ ಮುಂದೆ ಏನಾಗುವುದು?
27
ಗೌತಮ್ 600 ಕೋಟಿ ರೂಪಾಯಿ ಸಾಲ
ಗೌತಮ್ ತನ್ನ ಆಸ್ತಿಯನ್ನು ಜಯದೇವ್‌ಗೆ ನೀಡಿದ್ದನು. ಆದರೆ 600 ಕೋಟಿ ರೂಪಾಯಿ ಸಾಲ ಇದೆ. ಹೀಗಾಗಿ ಜಯದೇವ್, ಶಕುಂತಲಾರ ಎಲ್ಲ ಬ್ಯಾಂಕ್ ಅಕೌಂಟ್, ಆಸ್ತಿಯನ್ನು ಫ್ರೀಜ್ ಮಾಡಲಾಗಿದೆ. ಹೀಗಾಗಿ ಜಯದೇವ್‌ಗೆ ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ಇನ್ನೊಂದು ಕಡೆ ಅಜ್ಜಿಯ ಆಸ್ತಿಯನ್ನು ಬಳಸಿಕೊಂಡು, ಸಾಲ ತೀರಿಸಬೇಕು ಎಂದು ಜಯದೇವ್ ಪ್ಲ್ಯಾನ್ ಮಾಡಿದ್ದಾನೆ.
37
ಫೇಕ್ ಅಜ್ಜಿ ಸೃಷ್ಟಿ
ಈಗ ಆಸ್ತಿ ಹಸ್ತಾಂತರ ಮಾಡಬೇಕು ಎಂದರೆ ಆ ವ್ಯಕ್ತಿ ಇರಬೇಕು, ಸಹಿ ಬೇಕು, ರಿಜಿಸ್ಟರ್ ಆಫೀಸ್‌ಗೆ ಬರಬೇಕು. ಹೀಗಾಗಿ ಜಯದೇವ್, ವಕೀಲರ ಸಹಾಯ ಪಡೆದು ಫೇಕ್ ಅಜ್ಜಿಯನ್ನು ಕ್ರಿಯೇಟ್ ಮಾಡಲು ರೆಡಿ ಆಗಿದ್ದಾನೆ. ಅಷ್ಟೇ ಅಲ್ಲದೆ ಅಜ್ಜಿಗೆ ನಿದ್ದೆ ಮಾತ್ರೆ ಹಾಕಿ ಆಸ್ತಿ ಪೇಪರ್‌ಗಳಿಗೆ ಸಹಿ ಹಾಕಿಸಿಕೊಂಡಿದ್ದಾನೆ.
ಭಾಗ್ಯಮ್ಮ ತನ್ನ ಅತ್ತೆಯನ್ನು ನೋಡಬೇಕು ಎಂದು ಆಸೆ ಪಡುತ್ತಿದ್ದಾಳೆ. ಆದರೆ ಅಜ್ಜಿ ಮನೆಯಿಂದ ಹೊರಬರೋದು ಸುಲಭ ಇಲ್ಲ. ಇನ್ನೊಂದು ಕಡೆ ಅಜ್ಜಿಯನ್ನು ಕರೆದುಕೊಂಡು ಬನ್ನಿ ಎಂದು ಲಕ್ಷ್ಮೀಕಾಂತ್‌ಗೆ ಹೇಳಲಾಗಿದೆ. ಲಕ್ಷ್ಮೀಕಾಂತ್ ಅಜ್ಜಿಯನ್ನು ಆನಂದ್ ಮನೆಗೆ ಕರೆದುಕೊಂಡು ಬರಬೇಕು ಎಂದುಕೊಂಡಿದ್ದನು. ಆದರೆ ಅಜ್ಜಿ ಮನೆಯಲ್ಲಿ ಇಲ್ಲ.
57
ಅಜ್ಜಿ ಏನಾದಳು?
ಲಕ್ಷ್ಮೀಕಾಂತ್ ಎಷ್ಟೇ ಹುಡುಕಿದರೂ ಕೂಡ ಅಜ್ಜಿ ಕಾಣಿಸುತ್ತಿಲ್ಲ. ನಿದ್ದೆ ಮಾತ್ರೆ ಹಾಕಿ ಅವನು ಅಜ್ಜಿ ಬಳಿ ಥಂಬ್ ಇಂಪ್ರೆಶನ್ ಹಾಕಿಸಿಕೊಂಡಿದ್ದನು. ಆಮೇಲೆ ಅಜ್ಜಿ ಕಾಣಿಸಲೇ ಇಲ್ಲ. ಅಜ್ಜಿಗೆ ಇವರ ನಾಟಕ ಗೊತ್ತಾಗಿ, ಕಷಾಯ ಕುಡಿದಂತೆ ನಾಟಕ ಮಾಡುತ್ತಾಳಾ? ಅಥವಾ ಅಜ್ಜಿಯನ್ನು ಕಿಡ್ನ್ಯಾಪ್ ಮಾಡಲಾಗಿದೆಯಾ ಎಂಬ ಸಂದೇಹ ಕೂಡ ಬಂದಿದೆ. ಅಜ್ಜಿಯಿಂದ ಗೌತಮ್-ಭೂಮಿ ಒಂದಾಗುತ್ತಾರಾ ಎಂಬ ಪ್ರಶ್ನೆ ಇರುವಾಗಲೇ ಅಜ್ಜಿ ಕಾಣಿಸ್ತಿಲ್ಲ.
67
ಮುಂದೆ ಏನಾಗಬಹುದು?
ತನ್ನ ಆಸ್ತಿಯನ್ನು ಅಜ್ಜಿ, ಮೊದಲೇ ಗೌತಮ್-ಭೂಮಿ ಮಗುವಿಗೆ ವಿಲ್ ಬರೆದರೂ ಆಶ್ಚರ್ಯವಿಲ್ಲ. ಸಿಕ್ಕಾಪಟ್ಟೆ ಚಾಲಾಕಿ ಆಗಿರುವ ಅಜ್ಜಿ ಈಗ ಜಯದೇವ್ ಬಲೆಗೆ ಬೀಳೋದು ಡೌಟ್ ಇದೆ. ಹೀಗಾಗಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ.