Bigg Boss: ಒಂದೇ ವಾರದಲ್ಲಿ Spandana ಕಾಲು ನೋವು ಮಾಯ, ಹೈ ಹೀಲ್ಡ್ ಹಾಕಿರೋ ನಟಿ ಯಾವ ಮಾತ್ರೆ ನುಂಗಿದ್ದಾರೆ?

Published : Dec 10, 2025, 12:45 PM IST

 ಹಿಂದಿನ ವಾರ ಕ್ಯಾಪ್ಟನ್ ಆಟದಲ್ಲಿ ಕಾಲು ನೋವು ಮಾಡ್ಕೊಂದು ಪಕ್ಕದಲ್ಲಿ ಕುಳಿತಿದ್ದ ಸ್ಪಂದನಾ ಈಗ ಸರಿಯಾಗಿದ್ದಾರೆ. ಸ್ಪಂದನ ಫೀಲ್ಡ್ ಗೆ ವಾಪಸ್ ಆಗಿದ್ದು, ಲಕ್ಕಿ ಗರ್ಲ್ ಅಂತಾನೇ ಹೆಸರು ಮಾಡಿದ್ದಾರೆ. ಒಂದೇ ವಾರದಲ್ಲಿ ಸ್ಪಂದನ ಕಾಲು ಸರಿಯಾಗಿದ್ದು ಹೇಗೆ ಎನ್ನುವ ಪ್ರಶ್ನೆ ಸದ್ಯ ಎಲ್ಲರನ್ನು ಕಾಡ್ತಿದೆ.

PREV
18
ಕಾಲು ನೋವು ಮಾಡ್ಕೊಂಡಿದ್ದ ಸ್ಪಂದನಾ

ಬಿಗ್ ಬಾಸ್ ಮನೆಯಲ್ಲಿ ನಡೆದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಸ್ಪಂದನಾಗೆ ಕಾಲು ನೋವಾಗಿತ್ತು. ಕಾಲು ಮುರಿದಿಲ್ಲ ಅಂತ ಬಿಗ್ ಬಾಸ್ ಮನೆ ವೈದ್ಯರು ಹೇಳಿದ್ರು. ಆದ್ರೆ ವಾರ ಪೂರ್ತಿ ಸ್ಪಂದನಾಗೆ ರೆಸ್ಟ್ ನೀಡಲಾಗಿತ್ತು. ಕಾಲು ಎಳೆದುಕೊಳ್ತಾ, ಕಣ್ಣೀರಿಡ್ತಾ ಸ್ಪಂದನಾ ವಾರ ಕಳೆದಿದ್ದರು.

28
ಆಟ ಆಡದೆ ಕ್ಯಾಪ್ಟನ್ ಆದ ಸ್ಪಂದನಾ

ಅಭಿ ಹಾಗೂ ಸ್ಪಂದನಾ ಜೋಡಿಯಾಗಿ ಆಟ ಆಡ್ಬೇಕಿತ್ತು. ಆದ್ರೆ ಸ್ಪಂದನಾಗೆ ಕಾಲು ನೀವಾಗಿದ್ರಿಂದ ಅಭಿ ಬೇರೆಯವರನ್ನು ಜೋಡಿಯಾಗಿ ಪಡೆಯುವ ಅನಿವಾರ್ಯತೆ ಎದುರಾಯ್ತು. ಚೈತ್ರಾ ಆಟ ಆಡಲು ಒಪ್ಪಿಕೊಂಡಿದ್ರು. ಚೈತ್ರಾ ಆಟದಿಂದಲೇ ಅಭಿ ಹಾಗೂ ಸ್ಪಂದನಾ ಕ್ಯಾಪ್ಟನ್ ಆದ್ರು.

38
ಲಕ್ಕಿ ಗರ್ಲ್

ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾ ಅವರನ್ನು ಲಕ್ಕಿ ಗರ್ಲ್ ಅಂತಾನೇ ಹೇಳಲಾಗುತ್ತೆ. ಟಾಸ್ಕ್ ಆಡದೆ ಕ್ಯಾಪ್ಟನ್ ಪಟ್ಟಕ್ಕೆ ಬಂದಿದ್ದ ಸ್ಪಂದನಾ ಬಹುತೇಕ ಬಾರಿ ನಾಮಿನೇಷನ್ ನಿಂದ ಹೊರಗುಳಿದಿದ್ದಾರೆ. ಗಿಲ್ಲಿ, ಅಶ್ವಿನಿ, ರಘು, ರಕ್ಷಿತಾ, ಸೂರಜ್, ರಾಶಿಕಾ ಕಿತ್ತಾಟದಲ್ಲಿ ಪ್ರತಿ ಬಾರಿ ಸೈಲೆಂಟ್ ಆಗಿರುವ ಸ್ಪಂದನಾ ಮರೆತುಹೋಗ್ತಿದ್ದಾರೆ.

48
ಒಂದೇ ವಾರದಲ್ಲಿ ಕಾಲು ಸರಿಯಾಗಿದ್ದು ಹೇಗೆ?

ಸದ್ಯ ಸ್ಪಂದನಾ ಕಾಲು ಸರಿಯಾಗಿದೆ. ವಿಲನ್ ಗೇಮ್ ನಲ್ಲಿ ಸ್ಪಂದನಾ ಸಕ್ರಿಯವಾಗಿದ್ದಾರೆ. ಇದನ್ನು ನೋಡಿದ ವೀಕ್ಷಕರಿಗೆ ಅನುಮಾನ ಕಾಡ್ತಿದೆ. ಒಂದೇ ವಾರದಲ್ಲಿ ಸ್ಪಂದನಾ ಕಾಲು ಸರಿಯಾಗಿದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

58
ಹೈ ಹೀಲ್ಡ್ ಹಾಕಿದ ಸ್ಪಂದನಾ

ಸಾಮಾನ್ಯವಾಗಿ ಕಾಲು ನೋವಾದ್ರೆ ಸರಿಯಾಗೋಕೆ ಎರಡು ಮೂರು ವಾರ ಬೇಕು. ಸಣ್ಣ ನೋವಾದ್ರೂ ಒಂದು ವಾರದಲ್ಲಿ ಗುಣವಾಗೋದಿಲ್ಲ. ಆದ್ರೆ ಸ್ಪಂದನಾಗೆ ಮ್ಯಾಜಿಕ್ ರೀತಿಯಲ್ಲಿ ಕಾಲು ಸರಿಯಾಗಿದೆ. ಅಷ್ಟೇ ಅಲ್ಲ ಸ್ಪಂದನಾ ಹೈ ಹೀಲ್ಡ್ ಹಾಕಿ ತಿರುಗ್ತಿದ್ದಾರೆ.

68
ಕಲರ್ಸ್ ಕನ್ನಡದ ಮೇಲೆ ಅನುಮಾನ

ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸ್ಪಂದನಾ ಕಾಲು ಒಂದೇ ವಾರದಲ್ಲಿ ಸರಿಯಾಗಿದ್ದು ಹೇಗೆ? ಅದಕ್ಕೆ ಏನು ಔಷಧಿ ನೀಡಿದ್ರಿ ಅಂತ ಕಲರ್ಸ್ ಕನ್ನಡದವರನ್ನು ಪ್ರಶ್ನೆ ಮಾಡಿದ್ದಾರೆ. ಕಲರ್ಸ್ ಕನ್ನಡದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.

78
ಸ್ಪಂದನಾ ಕ್ಯಾಪ್ಟನ್ ಮಾಡಲು ನಾಟಕ?

ವೀಕ್ಷಕರಿಗೆ ಬಿಗ್ ಬಾಸ್ ಶೋ ಮೇಲೆ ಅನುಮಾನ ಬಂದಿದೆ. ಸ್ಪಂದನಾ ಅವರನ್ನು ಕ್ಯಾಪ್ಟನ್ ಮಾಡೋದು ಬಿಗ್ ಬಾಸ್ ಗುರಿಯಾಗಿತ್ತು. ಹೇಗಾದ್ರೂ ಸ್ಪಂದನಾ ಅವರನ್ನು ಗೆಲ್ಲಿಸಬೇಕಾಗಿತ್ತು. ಹಾಗಾಗಿ ಸ್ಪಂದನಾ ಅವರನ್ನು ಕಾಲುನೋವಿನ ನೆಪದಲ್ಲಿ ರೆಸ್ಟ್ ನೀಡಿ, ಕ್ಯಾಪ್ಟನ್ಸಿ ಟಾಸ್ಕ್ ಗೆಲ್ಲಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

88
ಧ್ವನಿ ಎತ್ತಿದ್ದ ಜಾಹ್ನವಿ

ಈ ಹಿಂದೆ ಜಾಹ್ನವಿ ಕೂಡ ಸ್ಪಂದನಾ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸ್ಪಂದನಾ ಕಲರ್ಸ್ ಕನ್ನಡದಿಂದ ಬಂದವರು. ಸೀರಿಯಲ್ ಆಕ್ಟರ್. ಅವರಿಗೆ ಫ್ಯಾನ್ ಫಾಲೋವರ್ಸ್ ಸಂಖ್ಯೆ ಹೆಚ್ಚಿರುವ ಕಾರಣ ಚಾನೆಲ್ ಅವರನ್ನು ಪುಶ್ ಮಾಡ್ತಿದೆ ಎನ್ನುವ ರೀತಿ ಮಾತನಾಡಿದ್ರು. ಇದು ಸಾಕಷ್ಟು ವೈರಲ್ ಆಗಿತ್ತು. ಕಿಚ್ಚ ಸುದೀಪ್ ಈ ಬಗ್ಗೆ ಚರ್ಚೆ ಕೂಡ ನಡೆಸಿದ್ದರು.

Read more Photos on
click me!

Recommended Stories