25 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾದ ದಕ್ಷಿಣ ಭಾರತದ ಚಿತ್ರವು 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಲಿವುಡ್ ದಾಖಲೆಗಳನ್ನು ಮುರಿದಿದೆ. ಚಿತ್ರವು ಚೀನಾದಲ್ಲಿ 40,000 ಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆಯಾಗಿ ದಂಗಲ್ ದಾಖಲೆಯನ್ನು ಮುರಿಯಿತು.

ಮುಂಬೈ: ದಕ್ಷಿಣ ಭಾರತದ ಸೂಪರ್ ಹಿಟ್ ಸಿನಿಮಾ ಇದಾಗಿದ್ದು, ಈ ಚಿತ್ರ 25 ಕೋಟಿ ರೂಪಾಯಿ ಬಜೆಟ್‌ ನಲ್ಲಿ ತಯಾರಾಗಿತ್ತು. ಕ್ಷಣ ಕ್ಷಣಕ್ಕೂ ಥ್ರಿಲ್ ಮತ್ತು ಸಸ್ಪೆನ್ಸ್ ಕಥಾನಕ ಹೊಂದಿರುವ ಈ ಸಿನಿಮಾ ನೋಡಿದವರು ಕ್ಲೈಮ್ಯಾಕ್ಸ್‌ ಕಂಡು ಭಾವುಕರಾಗುತ್ತಾರೆ. ಚಿತ್ರದುದ್ದಕ್ಕೂ ಖಳನಾಯಕನನ್ನ ದ್ವೇಷಿಸುವ ವೀಕ್ಷಕರು ಕೊನೆಯಲ್ಲಿ ಆತನ ಬಗ್ಗೆ ಮರುಕುಪಡುತ್ತಾರೆ. ಆ ರೀತಿಯ ಅದ್ಭುತ ಕಥೆಯನ್ನು ಈ ಸಿನಿಮಾ ಹೊಂದಿದೆ. 25 ಕೋಟಿಯ ತಯಾರಾಗಿ ಬಿಡುಗಡೆಯಾದ ಸಿನಿಮಾ ಭಾರತದಲ್ಲಿ 100 ಕೋಟಿಯ ಕ್ಲಬ್ ಸೇರ್ಪಡೆಯಾಯ್ತು. ವಿದೇಶದಲ್ಲಿ ಒಂದೇ ದಿನ 40,00ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗುವ ಮೂಲಕ 'ಮಹಾ' ದಾಖಲೆಯನ್ನು ಬರೆಯಿತು. ಈ ಮೂಲಕ ಬಾಹುಬಲಿ, ಕಲ್ಕಿ, ಎನಿಮಲ್ ದಂತಹ ಬಿಗ್ ಬಜೆಟ್ ದಾಖಲೆಗಳನ್ನು ಬ್ರೇಕ್ ಮಾಡಿತು. 

ದಾಖಲೆಗಳನ್ನು ತನ್ನ ಮುಡಿಗೇರಿಸಿಕೊಂಡ ಸಿನಿಮಾವೇ ವಿಜಯ್ ಸೇತುಪಥಿ ನಟನೆಯ ಮಹಾರಾಜ. ಭಾರತದಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜನರಿಂದಲೇ ಪ್ರಚಾರ ಗಿಟ್ಟಿಸಿಕೊಂಡಿದ್ದರಿಂದ ಚಿತ್ರಮಂದಿರಗಳು ವೀಕ್ಷಕರಿಂದ ತುಂಬಿದ್ದವು. ಇನ್ನು OTTಯಲ್ಲಿ ಎಲ್ಲಾ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾದಾಗ ದೇಶದ ಪ್ರತಿಯೊಂದು ಮನೆಯನ್ನು ತಲುಪಿತ್ತು. ಚಿತ್ರದ ಕತೆ ಮತ್ತು ಕಲಾವಿದರ ಸಹಜ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದರು. 

Sacnilk ಪ್ರಕಾರ, ಮಹಾರಾಜ ಸಿನಿಮಾ ಚೀನಾದಲ್ಲಿ ಬಿಡುಗಡೆಯಾದ 31 ನೇ ದಿನದಂದು ರೂ 0.20 ಕೋಟಿ (USD 0.02 ಮಿಲಿಯನ್) ಗಳಿಸಿತು. ಚೀನಾದಲ್ಲಿ ಮಹಾರಾಜ ಸಿನಿಮಾ ಇದುವರೆಗೂ 91.55 ಕೋಟಿ ರೂಪಾಯಿ (USD 10.80 ಮಿಲಿಯನ್) ಕಲೆಕ್ಷನ್ ಮಾಡಿದೆ. ವಿದೇಶದಲ್ಲಿ 115.60 ಕೋಟಿ ರೂ. ಕಲೆಕ್ಷನ್ ಆಗಿದೆ. ಮಹಾರಾಜ ಭಾರತದಲ್ಲಿಯೂ 100 ಕ್ಲಬ್ ಸೇರಿದ್ದಾನೆ. ಚೀನಾದಲ್ಲಿ ಚಿತ್ರಕ್ಕೆ 8.7 ರೇಟಿಂಗ್ ಸಿಕ್ಕಿದೆ.

ಇದನ್ನೂ ಓದಿ: ಇದು 2024ರ ಅತಿದೊಡ್ಡ ಕ್ರೈಮ್ ಥ್ರಿಲ್ಲರ್ ಸಿನಿಮಾ; ವಿದೇಶಗಳಲ್ಲಿಯೂ ಮೊದಲ ದಿನವೇ ಬ್ಲಾಕ್‌ಬಸ್ಟರ್ ಓಪನಿಂಗ್

ಚೀನಾದಲ್ಲಿ ಮಹಾರಾಜ ಬಾಕ್ಸ್ ಆಫೀಸ್ ವರದಿ
ಮೊದಲ ವಾರದ ಕಲೆಕ್ಷನ್: ರೂ 40.75 ಕೋಟಿ (USD 4.82 ಮಿಲಿಯನ್)
ಎರಡನೇ ವಾರದ ಕಲೆಕ್ಷನ್: ರೂ 32.75 ಕೋಟಿ (USD 3.85 ಮಿಲಿಯನ್)
ಮೂರನೇ ವಾರದ ಕಲೆಕ್ಷನ್: ರೂ 12.25 ಕೋಟಿ (USD 1.45 ಮಿಲಿಯನ್)
ನಾಲ್ಕನೇ ವಾರದ ಕಲೆಕ್ಷನ್: ರೂ 5.15 ಕೋಟಿ (USD 0.61 ಮಿಲಿಯನ್)

ದಂಗಲ್ ದಾಖಲೆ ಬ್ರೇಕ್
ಬಿಡುಗಡೆಯಾದ 6 ತಿಂಗಳ ನಂತರ ಮಹಾರಾಜ ಸಿನಿಮಾ ನವೆಂಬರ್ 29 ರಂದು ಚೀನಾದಲ್ಲಿ ಬಿಡುಗಡೆಯಾಗಿತ್ತು. ಮೊದಲ ದಿನವೇ ದೊಡ್ಡಮಟ್ಟದ ಓಪನಿಂಗ್ ಪಡೆದುಕೊಂಡಿದೆ. ಚೀನಾದ 40 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮಹಾರಾಜ ಸಿನಿಮಾ ಪ್ರದರ್ಶನವಾಗುವ ಮೂಲಕ ಆಮೀರ್ ಖಾನ್ ನಟನೆಯ 'ದಂಗಲ್' ದಾಖಲೆಯನ್ನು ಬ್ರೇಕ್ ಮಾಡಿತ್ತು.

ಇದನ್ನೂ ಓದಿ: ನಾನ್ಯಾಕೆ ಆ 2 ಸಿನಿಮಾಗಳ ಬಗ್ಗೆ ಮಾತನಾಡಲಿ; ವಿಜಯ್ ಸೇತುಪಥಿ ಫುಲ್ ಗರಂ

Scroll to load tweet…