ತಾಯಿಗೆ ಮಾಂಗಲ್ಯ ಸರ, ಅನಾಥಾಶ್ರಮಕ್ಕೆ ದಾನ, ಯಶ್‌ ಮಾತನಾಡಿದ್ದು; ಗಿಲ್ಲಿ ನಟನ ಕುರಿತ ಸುದ್ದಿಗಳ ಸತ್ಯ ಬಯಲು!

Published : Jan 26, 2026, 03:46 PM IST

Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್‌ 12 ಮನೆಯಿಂದ ಹೊರಬಂದ ಮೇಲೆ ಎಲ್ಲ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುವುದು ಸಹಜ. ಆದರೆ 'ಗಿಲ್ಲಿ' ಕ್ರೇಜ್‌ ಬೇರೆ ಲೆವೆಲ್‌ ಆಗಿರೋದಿಕ್ಕೆ, ಅವರ ಬಗ್ಗೆ ಒಂದಿಲ್ಲೊಂದು ಪೋಸ್ಟ್‌ಗಳು ಕಾಣಸಿಗುತ್ತಿವೆ. 

PREV
15
ಕಾಡ್ಗಿಚ್ಚಿನಂತೆ ಹರಡುತ್ತಿರುವ ಸುದ್ದಿಗಳು

ಈಗ ಗಿಲ್ಲಿ ನಟನ ವಿಷಯದಲ್ಲಿ ಇದು ತುಸು ಅತಿರೇಕಕ್ಕೆ ಹೋದಂತಿದೆ. ಯೂಟ್ಯೂಬ್ ಮತ್ತು ಕೆಲವು ಫೇಸ್‌ಬುಕ್ ಪೇಜ್‌ಗಳಲ್ಲಿ ಗಿಲ್ಲಿ ನಟ ಅವರ ಬಗ್ಗೆ ಸತ್ಯಕ್ಕೆ ದೂರವಾದ ಮಾಹಿತಿಗಳು ಕಾಡ್ಗಿಚ್ಚಿನಂತೆ ಹರಡುತ್ತಿವೆ.

25
ಗಿಲ್ಲಿ ನಟ ತಾಯಿಗೆ 10 ಲಕ್ಷದ ಮಾಂಗಲ್ಯ ಸರ

ಗಿಲ್ಲಿ ನಟ ಅವರು ಬಿಗ್ ಬಾಸ್‌ನಿಂದ ಬಂದ ಸಂಭಾವನೆಯಲ್ಲಿ ತಾಯಿಗೆ 10 ಲಕ್ಷ ರೂಪಾಯಿ ಬೆಲೆಬಾಳುವ ಮಾಂಗಲ್ಯ ಸರ ಮಾಡಿಸಿದ್ದಾರೆ ಎನ್ನಲಾಗಿದೆ. ಇದು ಭಾವನಾತ್ಮಕವಾಗಿ ಜನರನ್ನು ಸೆಳೆಯಲು ಸೃಷ್ಟಿಸಿದ ಪಕ್ಕಾ ಸುಳ್ಳು ಸುದ್ದಿಯಾಗಿದೆ. ಗಿಲ್ಲಿ ನಟ ಈಗ ಫುಲ್‌ ಬ್ಯುಸಿಯಿದ್ದು, ಅವರ ಅಣ್ಣನ ಮಗನನ್ನು ನೋಡಲು ಕೂಡ ಸಮಯ ಸಿಕ್ಕಿಲ್ಲ.

35
ಇಂಗ್ಲಿಷ್ ಸಂದರ್ಶನದಲ್ಲಿ ಯಶ್ ಮಾತು

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ಇಂಗ್ಲಿಷ್ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದಾರೆ ಎನ್ನುವುದು ದೊಡ್ಡ ಸುಳ್ಳು. ಯಶ್ ಅವರ ಹಳೆಯ ವಿಡಿಯೋಗಳನ್ನು ಎಡಿಟ್ ಮಾಡಿ ಇಂತಹ ದಾರಿ ತಪ್ಪಿಸುವ ಥಂಬ್‌ನೇಲ್‌ಗಳನ್ನು ಬಳಸಲಾಗುತ್ತಿದೆ, ಪೋಸ್ಟ್‌ ಮಾಡಲಾಗುತ್ತಿದೆ.

45
ಅನಾಥಾಶ್ರಮಕ್ಕೆ 5 ಲಕ್ಷ ದೇಣಿಗೆ

ಗಿಲ್ಲಿ ನಟ ಅವರು ಅನಾಥಾಶ್ರಮಕ್ಕೆ 5 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಹಾಕಲಾಗಿರುವ ಪೋಸ್ಟ್‌ ಕೂಡ ಸುಳ್ಳು. ಗಿಲ್ಲಿ ನಟ ಅವರು ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಹೊಂದಿರಬಹುದು, ಆದರೆ ಈಗ ಈ ನಿರ್ದಿಷ್ಟ ಮೊತ್ತದ ದೇಣಿಗೆ ನೀಡಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯೂ ಇಲ್ಲದಾಗಿದೆ.

55
ಏಕೆ ಹೀಗಾಗುತ್ತಿದೆ?

ಇಂದಿನ ದಿನಗಳಲ್ಲಿ ಯೂಟ್ಯೂಬ್ ಚಾನೆಲ್‌ಗಳು, ಸೋಶಿಯಲ್‌ ಮೀಡಿಯಾ ಪೇಜ್‌ಗಳು ಹೆಚ್ಚಿನ ವೀಕ್ಷಣೆ (Views) ಪಡೆಯಲು ಸೆಲೆಬ್ರಿಟಿಗಳ ಹೆಸರಿನಲ್ಲಿ ಇಂತಹ ಅತಿಶಯೋಕ್ತಿಯ ಕಥೆಗಳನ್ನು, ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತವೆ. ಆಕರ್ಷಕ ಹೆಡ್ಡಿಂಗ್ ನೀಡಿ ನಿಜಕ್ಕೂ ವೀಕ್ಷಕರನ್ನು ವಂಚಿಸಲಾಗುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories