Brahmagantu Serial; ಇದು ಕನಸಲ್ಲ, ಸತ್ಯ; ದೀಪಾ-ಚಿರಾಗ್‌ ಬಾಳಲ್ಲಿ ಅನುರಾಗ; ಪ್ರೇಕ್ಷಕರಿಗೆ ಬೇಸರ!

Published : Jan 26, 2026, 02:19 PM IST

Brahmagantu Serial Episode: ಬ್ರಹ್ಮಗಂಟು ಧಾರಾವಾಹಿಯಲ್ಲಿ ರೂಪಾಳನ್ನು ಪ್ರೀತಿಸಿದ್ದ ಚಿರಾಗ್‌, ಅವಳನ್ನೇ ಮದುವೆ ಆಗಬೇಕು ಎಂದುಕೊಂಡಿದ್ದನು. ಆದರೆ ರೂಪಾ ಮದುವೆ ಮಂಟಪ ಬಿಟ್ಟು ಓಡಿದ್ದಕ್ಕೆ, ದೀಪಾಳನ್ನು ಅವನು ಮದುವೆ ಆಗುವ ಹಾಗೆ ಆಯ್ತು. 

PREV
15
ದೀಪಾ ಅಮಾವಾಸ್ಯೆಯಂತೆ

ರೂಪಾ ಹುಣ್ಣಿಮೆಯ ಬೆಳದಿಂಗಳಾದರೆ, ದೀಪಾ ಅಮಾವಾಸ್ಯೆ ಎಂದು ಹೇಳಲಾಗುತ್ತಿತ್ತು. ದೀಪಾ ನೋಡಲು ಚೆನ್ನಾಗಿಲ್ಲ ಎಂದು ಅನೇಕರು ಅವಳನ್ನು ನಿಕೃಷ್ಟವಾಗಿ ನೋಡುತ್ತಿದ್ದರು. ಅದರೆ ದೀಪಾ ತನ್ನ ಒಳ್ಳೆಯ ಗುಣದಿಂದ ಎಲ್ಲರಿಗೂ ಇಷ್ಟವಾದಳು.

25
ದಿಶಾ ಪ್ರೀತಿಯನ್ನು ಒಪ್ಪಿದ್ದ ಚಿರಾಗ್‌

ನನ್ನ ಗಂಡ ಮನಸ್ಸು ನೋಡಿ ಪ್ರೀತಿ ಮಾಡ್ತಾನೆ, ರೂಪಕ್ಕೆ ಬೆಲೆ ಕೊಡೋದಿಲ್ಲ ಎಂದು ಸಾಬೀತುಪಡಿಸ್ತೀನಿ ಎಂದು ದೀಪಾ ಚಾಲೆಂಜ್‌ ಮಾಡಿದ್ದಳು. ಅದರಂತೆ ಅವಳು ದಿಶಾ ಎಂಬ ಹೊಸ ಗೆಟಪ್‌ನಲ್ಲಿ ಚಿರಾಗ್‌ ಮುಂದೆ ಬಂದಿದ್ದಳು. ಒಮ್ಮೆ ದಿಶಾ, ಪ್ರೇಮ ನಿವೇದನೆ ಮಾಡಿದ ಬಳಿಕ ಅವನು ಅವಳ ಪ್ರೀತಿಯನ್ನು ಒಪ್ಪಿಕೊಂಡಿದ್ದನು. ಆ ಬಳಿಕ ದೀಪಾ ಬೇಸರ ಮಾಡಿಕೊಂಡು ಮನೆ ಬಿಟ್ಟು ಹೋದಳು.

35
ಚಿರಾಗ್‌ಗೆ ನರಸಿಂಹ ಸವಾಲು

ಅತ್ತ ದೀಪಾ ಮನೆ ಬಿಟ್ಟು ಹೋದಮೇಲೆ ನಾನು ಅವಳನ್ನು ಪ್ರೀತಿ ಮಾಡ್ತಿದ್ದೀನಿ ಎಂದು ಚಿರಾಗ್‌ಗೆ ಅರ್ಥ ಆಗಿದೆ. ಆಮೇಲೆ ಅವನು ದೀಪಾ ಮನೆಗೆ ಬಂದರೆ, ಅವಳ ಅಣ್ಣ ನರಸಿಂಹ ಮಾತ್ರ, “ಸಿಂಪಲ್‌ ಆಗಿ ಬದುಕು, ಆಮೇಲೆ ನನ್ನ ತಂಗಿಯನ್ನು ಮನೆಗೆ ಕರೆದುಕೊಂಡು ಹೋಗು” ಎಂದು ಹೇಳಿದ್ದನು. ಅದರಂತೆ ಚಿರಾಗ್‌ ಎಲ್ಲ ಕೆಲಸ ಮಾಡಿದ್ದನು. ಇದಕ್ಕೂ ನರಸಿಂಹ ತಡೆ ಒಡ್ಡಿದ್ದುಂಟು.

45
ದೀಪಾ ಸಿಟ್ಟಾಗಿದ್ದಾಳೆ

ಅತ್ತ ಚಿರಾಗ್‌ ಗದ್ದೆಯಲ್ಲಿ ಊಳಬೇಕಿತ್ತು. ಟ್ರ್ಯಾಕ್ಟರ್‌ ತಗೊಂಡು ಅವನು ಊಳೋದನ್ನು ದೀಪಾ ನೋಡಿದ್ದಳು. ಟ್ರ್ಯಾಕ್ಟರ್‌ ಸರಿಯಾಗಿ ವರ್ಕ್‌ ಆಗಿಲ್ಲ ಎಂದು ಚಿರಾಗ್‌, ಅಲ್ಲಿಂದ ಸ್ವಲ್ಪ ದೂರ ಹೋಗಿದ್ದಾನೆ. ಆಗ ದೀಪಾ ಬಂದು ಟ್ರ್ಯಾಕ್ಟರ್‌ ಓಡಿಸಿದ್ದಾಳೆ. ಅದನ್ನು ನೋಡಿದ ಪೋಲಿ ಹುಡುಗನೊಬ್ಬ ದೀಪಾಳ ಮುಂದೆ ಅವಳ ಗಂಡನ ಬಗ್ಗೆ ಮಾತನಾಡಿದ್ದಾನೆ. ಆಗ ದೀಪಾ ಸಿಟ್ಟಾಗಿದ್ದಾಳೆ.

55
ಸೀರಿಯಲ್‌ ಮುಗಿತಿದ್ಯಾ?

ಇದಾದ ಬಳಿಕ ಚಿರಾಗ್‌ ಹಾಗೂ ಕೇಡಿಗಳ ಫೈಟ್‌ ನಡೆಯುವುದು. ಆಗ ದೀಪಾ ಗಂಡನ ರಕ್ಷಣೆಗೆ ಬರುತ್ತಾಳೆ. ಅದನ್ನು ನೋಡಿ ಚಿರಾಗ್‌ ಅವಳಿಗೆ ಪ್ರೇಮ ನಿವೇದನೆ ಮಾಡುತ್ತಾನೆ. ದೀಪಾ ಕೂಡ ಗಂಡನ ಪ್ರೀತಿಯನ್ನು ಒಪ್ಪಿಕೊಳ್ತಾಳೆ. ಇದನ್ನು ನೋಡಿ ವೀಕ್ಷಕರು ಸೀರಿಯಲ್‌ ಮುಗಿತಿದ್ಯಾ ಎಂಬ ಅನುಮಾನ ಹೊರಹಾಕಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories