Bigg Boss ಗೆಲ್ಲುವುದು ಗಿಲ್ಲಿ ನಟ ಅಲ್ಲ, ಬದಲಿಗೆ.... ಡಾಗ್​ ಸತೀಶ್​ ನುಡಿದ ಭವಿಷ್ಯವಾಣಿ ಏನು?

Published : Nov 11, 2025, 01:23 PM IST

ಬಿಗ್​ಬಾಸ್​ ಕನ್ನಡ 12ರ ವಿನ್ನರ್ ಯಾರೆಂಬ ಚರ್ಚೆ ಜೋರಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ನಟನ ಹೆಸರು ಮುಂಚೂಣಿಯಲ್ಲಿದೆ. ಆದರೆ, ಮನೆಯಿಂದ ಹೊರಬಂದಿರುವ ಡಾಗ್ ಸತೀಶ್, ಗಿಲ್ಲಿ ನಟ ಗೆಲ್ಲುವುದಿಲ್ಲ, ಬದಲಿಗೆ ರಕ್ಷಿತಾ ಶೆಟ್ಟಿ ತನ್ನ ಸಮತೋಲಿತ ಆಟದಿಂದ ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.

PREV
16
ಎಲ್ಲೆಡೆ ಒಬ್ಬರದ್ದೇ ಹೆಸರು

ಬಿಗ್​ಬಾಸ್​​ (Bigg Boss Kannada 12) ನಲ್ಲಿ ಇದಾಗಲೇ ಉಳಿದವರ ಪೈಕಿ ಗೆಲುವು ಯಾರಿಗೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಬಿಗ್​ಬಾಸ್​ನಿಂದ ಹೊರಕ್ಕೆ ಹೋಗಿರುವ ಸ್ಪರ್ಧಿಗಳು ಸೇರಿದಂತೆ ಬಹುತೇಕ ಮಂದಿ ಸೋಷಿಯಲ್​ ಮೀಡಿಯಾದಲ್ಲಿ ಗಿಲ್ಲಿ ನಟ (Gilli Nata) ಎಂದೇ ಹೇಳುತ್ತಿದ್ದಾರೆ.

26
ಮನಸ್ಸು ಗೆಲ್ಲುತ್ತಿರುವ ಗಿಲ್ಲಿ

ಇದಾಗಲೇ ಗಿಲ್ಲಿ ನಟನ ಬಗ್ಗೆ ದೊಡ್ಡದಾಗಿ ಹವಾ ಸೃಷ್ಟಿಯಾಗಿದೆ. ಕಾಮಿಡಿಯಿಂದಲೇ ಇವರು ಬಹುತೇಕ ವೀಕ್ಷಕರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಸಾಮಾನ್ಯವಾಗಿ ಬಿಗ್​ಬಾಸ್​ನಲ್ಲಿ ಗಲಾಟೆ, ಗದ್ದಲ, ಅಶ್ಲೀಲತೆ, ಅದೂ ಇದೂ ಎಂದೆಲ್ಲಾ ನೆಗೆಟಿವ್​ ಮೂಲಕವೇ ಬಿಗ್​ಬಾಸ್​ನ ಅಂತಿಮ ಹಂತಕ್ಕೂ ಹೋಗುವ ಸ್ಪರ್ಧಿಗಳ ಲಿಸ್ಟ್​ ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ದೊಡ್ಡದಾಗಿಯೇ ಇರುತ್ತದೆ.

36
ಬಿಗ್​ಬಾಸ್​ನಿಂದ ಬೇಗ ಹೊರಕ್ಕೆ

ಇಂಥವರಿಂದಲೇ ಬಿಗ್​ಬಾಸ್​​ಗೆ ಟಿಆರ್​ಪಿ ರೇಟ್​ ಹೆಚ್ಚಳ ಎನ್ನುವ ಕಾರಣಕ್ಕೆ ಅವರನ್ನು ಸುಲಭದಲ್ಲಿ ಬಿಗ್​ಬಾಸ್​​ನಿಂದ ಹೊರಕ್ಕೆ ಹೋಗಲು ಬಿಡುವುದಿಲ್ಲ. ಸೀದಾ ಸಾದಾ, ಗಲಾಟೆ ಮಾಡಿಕೊಳ್ಳದೇ ಅವರ ಪಾಡಿಗೆ ಅವರು ಇದ್ದರೆ ಬಿಗ್​ಬಾಸ್​​ಗೆ workout ಆಗಲ್ಲ. ಇದೇ ಕಾರಣಕ್ಕೆ ಮೊದಲ ಕೆಲವು ವಾರಗಳು ಅವರೇ ಮನೆಯಿಂದ ಹೊರಕ್ಕೆ ಹೋಗುತ್ತಾರೆ.

46
ಡಾಗ್​ ಸತೀಶ್​ ಹೇಳಿದ್ದೇನು?

ಆದರೆ, ಹೆಚ್ಚಿನ ಟ್ರೋಲ್​ಗೆ ಒಳಗಾಗದೇ ಇದ್ದವರ ಪೈಕಿ ಗಿಲ್ಲಿ ನಟ ಒಬ್ಬರು. ಆದ್ದರಿಂದ ಇವರ ಮೇಲೆ ಒಲವು ಹೆಚ್ಚು. ಆದರೆ ಬಿಗ್​ಬಾಸ್​​ನಿಂದ ಹೊರಕ್ಕೆ ಬಂದಿರೋ ಡಾಗ್​ ಸತೀಶ್​ (Dog Satish) ಮಾತ್ರ ಬೇರೆಯವರ ಹೆಸರು ಹೇಳಿದ್ದಾರೆ.

56
ಗಿಲ್ಲಿನಟ ಅಲ್ಲ, ಬದಲಿಗೆ..

ಗಿಲ್ಲಿನಟ ಬಿಗ್​ಬಾಸ್​​ ಗೆಲ್ಲುವುದಿಲ್ಲ. ಬದಲಿಗೆ ರಕ್ಷಿತಾ ಶೆಟ್ಟಿ (Raskhitha Shetty) ಗೆಲುವು ಸಾಧಿಸುವುದು ಎನ್ನುವುದು ಅವರ ಮಾತು. ಆಕೆ ಬ್ಯಾಲೆನ್ಸ್​ ಆಗಿ ಆಡುತ್ತಾಳೆ. ನೂರು ಜನರಕ್ಕೆ ಅಡುಗೆ ಮಾಡು ಅಂದ್ರೆ ಮಾಡುತ್ತಾಳೆ. ಬೇರೆಯವರಿಂದ ಇದು ಸಾಧ್ಯವಿಲ್ಲ ಎಂದಿದ್ದಾರೆ.

66
ಈ ಸ್ಪರ್ಧಿಯೇ ದಿ ಬೆಸ್ಟ್​

ಮೈಗಳ್ಳಿ ಅಲ್ಲ ಅವಳು. ಎಲ್ಲರನ್ನೂ ಅಣ್ಣ ಎಂದು ಚೆನ್ನಾಗಿ ಮಾತನಾಡಿಸುತ್ತಾಳೆ. ಬೇಗ ಬೆಳಿತಾ ಇದ್ದಾಳೆ. ಆದ್ದರಿಂದ ಅವಳನ್ನು ತುಳಿಯಲು ಬಿಗ್​ಬಾಸ್​​ನಲ್ಲಿ ನೋಡುತ್ತಿದ್ದಾರೆ. ಆದರೆ ಬಿಗ್​ಬಾಸ್​ ವಿನ್ನರ್​ ಆಗಲು ಅವಳೇ ದಿ ಬೆಸ್ಟ್​ ಎಂದಿದ್ದಾರೆ.

Read more Photos on
click me!

Recommended Stories