'ಅಮೃತವರ್ಷಿಣಿ' ಖ್ಯಾತಿಯ ನಟಿ ರಜಿನಿ ತಮ್ಮ ಜಿಮ್ ಟ್ರೈನರ್ ಮತ್ತು ರೀಲ್ಸ್ ಪಾರ್ಟನರ್ ಅರುಣ್ ವೆಂಕಟೇಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ತಾವು ಕೇವಲ ವಿಡಿಯೋ ಪಾರ್ಟನರ್‌ಗಳು ಎಂದು ಹೇಳಿಕೊಂಡಿದ್ದ ಈ ಜೋಡಿ, ಇದೀಗ ದಿಢೀರ್ ಮದುವೆಯಾಗಿ ಅಚ್ಚರಿ ಮೂಡಿಸಿದೆ.
‘ನಾಬಿಬ್ಬರೂ ಗಂಡ-ಹೆಂಡತಿ ಅಲ್ಲ. ವಿಡಿಯೋ ಪಾರ್ಟನರ್ ಅಷ್ಟೇ ಎಂದು ಕೊನೆಯವರೆಗೂ ಹೇಳುತ್ತಲೇ ಇದೀಗ ದಿಢೀರ್ ಎಂದು ಅವರ ಜೊತೆನೇ ಮದುವೆಯಾಗಿ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ 'ಅಮೃತವರ್ಷಿಣಿ' ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ರಜಿನಿ. ಇವರು ಜಿಮ್ ಟ್ರೈನರ್ ಅರುಣ್ ವೆಂಕಟೇಶ್ (Arun Venkatesh) ಜೊತೆ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
26
ಒಟ್ಟಿಗೇ ರೀಲ್ಸ್
ಇವರಿಬ್ಬರೂ ಹಲವಾರು ವಿಡಿಯೋಗಳನ್ನು, ರೀಲ್ಸ್ಗಳನ್ನು ಹಲವು ತಿಂಗಳುಗಳಿಂದ ಒಟ್ಟಿಗೇ ಮಾಡುತ್ತಿದ್ದರು. ಆಗ ಮದುವೆಯ ಪ್ರಶ್ನೆ ಎದುರಾಗಿತ್ತು. ಅದನ್ನು ನಟಿ ನಿರಾಕರಿಸಿದ್ದರು. ಆದರೂ, ಗೆಳೆಯನ ಮದುವೆ ಆದರೂ ತಪ್ಪಿಲ್ಲ. ಅವರು ಹಲವು ವರ್ಷಗಳಿಂದ ನಮ್ಮ ಜೊತೆ ಇದ್ದಿರುತ್ತಾರೆ. ಅವರು ನಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿರುತ್ತಾರೆ. ಅದೇ ರೀತಿ ಬೇರೆಯವರನ್ನು ಮದುವೆ ಆದರೂ ತಪ್ಪಿಲ್ಲ ಎಂದು ಹಿಂಟ್ ಕೂಡ ನೀಡಿದ್ದರು.
36
ಡೆವಿಲ್ ಹಾಡಿಗೆ ಸ್ಟೆಪ್
ಇದೀಗ ಮದುವೆಯ ಬಳಿಕ ಅವರ ಕೆಲವೊಂದು ರೀಲ್ಸ್ಗಳು ಪುನಃ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ದರ್ಶನ್ ಅಭಿನಯದ ಡೆವಿಲ್ (Devil) ಸಿನಿಮಾದ ಒಂದೇ ಒಂದು ಸಲ ಹಾಡಿಗೆ ಇಬ್ಬರೂ ರೊಮ್ಯಾಂಟಿಕ್ ಆಗಿ ಸ್ಟೆಪ್ ಹಾಕಿರುವುದು ಈಗ ವೈರಲ್ ಆಗಿದೆ.
ಇದನ್ನು ನೋಡಿದ ನೆಟ್ಟಿಗರು ನಟಿಯ ಕಾಲೆಳೆಯುತ್ತಿದ್ದಾರೆ. ಇದು ಪ್ರೀ ವೆಡ್ಡಿಂಗ್ ಶೂಟಾ ಅಥ್ವಾ ಪ್ರೀ ಹನಿಮೂನಾ ಎಂದು ತಮಾಷೆ ಮಾಡುತ್ತಿದ್ದಾರೆ. ಈ ವಿಡಿಯೋದಲ್ಲಿ ಜೋಡಿ ಸಕತ್ ರೊಮ್ಯಾಂಟಿಕ್ ಆಗಿ ಭೇಷ್ ಎನ್ನಿಸುವಂತೆ ಸ್ಟೆಪ್ ಹಾಕಿದೆ..
56
ಹಲವು ರೀತಿಗಳ ರೀಲ್ಸ್
ಅಷ್ಟಕ್ಕೂ ರಜಿನಿ ಮತ್ತು ಅರುಣ್ ಅವರು ಅಮ್ಮ-ಮಗ, ಅಪ್ಪ-ಮಗಳು, ಅಣ್ಣ-ತಂಗಿ, ಲವರ್ಸ್ ಹೀಗೆ ಹಲವು ವಿಧಗಳಲ್ಲಿ ರೀಲ್ಸ್ ಮಾಡುತ್ತಲೇ ಫೇಮಸ್ ಆಗಿದ್ದಾರೆ. ಇನ್ನು ನಟಿ ರಜಿನಿ ಕುರಿತು ಹೇಳುವುದಾದರೆ, ಇವರು ‘ಅಮೃತವರ್ಷಿಣಿ’ ಮೂಲಕ ಸಕತ್ ಫೇಮಸ್ ಆದವರು.
66
‘ಹಿಟ್ಲರ್ ಕಲ್ಯಾಣ’ದಲ್ಲಿ ವಿಲನ್
‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿಯೂ ಮಿಂಚಿದ್ದರು, ಹಲವು ರಿಯಾಲಿಟಿ ಶೋಗಳಲ್ಲೂ ಕಾಣಿಸಿದರು. ಆದರೆ ಆ ಬಳಿಕ ಕಿರುತೆರೆಯಲ್ಲಿ ಕಾಣಿಸಿಕೊಳ್ಳದೇ ಅರುಣ್ ಜೊತೆ ರೀಲ್ಸ್ ಮಾಡುವುದೇ ಹೆಚ್ಚಾಗಿತ್ತು. ಇದೀಗ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.