ಮೂರು ಲೋಕದಲ್ಲೂ ಕಾಣ ಸಿಗದ ಅದ್ಭುತ ಸುಂದರಿ ಈ ಗಂಧರ್ವ ಕನ್ಯೆ ‘ಆಮ್ರಪಾಲಿ’

First Published | Jan 12, 2023, 5:29 PM IST

ಬಿಗ್ ಬಾಸ್ ಬಳಿಕ ಕಿರುತೆರೆ, ಹಿರಿತೆರೆ ಎಲ್ಲೂ ಕಾಣಿಸಿಕೊಳ್ಳದ ದಿವ್ಯಾ ಸುರೇಶ್ ಎಲ್ಲಿ ಎಲ್ಲಿ ಎಂದು ಜನರು ಪ್ರಶ್ನೆ ಮಾಡುತ್ತಿದ್ದರು. ಇದೀಗ ಕಳೆದವಾರವಷ್ಟೇ ಆರಂಭವಾಗಿರುವ ಗಂಧರ್ವ ಲೋಕದ ಕಥೆ ಹೊಂದಿರುವ ‘ತ್ರಿಪುರ ಸುಂದರಿ’ ಸೀರಿಯಲ್ ನಲ್ಲಿ ಈ ನೀಳ ಸುಂದರಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 
 

ಬಿಗ್ ಬಾಸ್ ಸೀನನ್ 08 ರಲ್ಲಿ (Bigg Boss season 8) ಹೆಚ್ಚು ಸದ್ದು ಮಾಡಿದ ಕಂಟೆಸ್ಟಂಟ್‌ಗಳಲ್ಲಿ ದಿವ್ಯಾ ಸುರೇಶ್ ಕೂಡ ಒಬ್ಬರು. ಮಂಜು ಪಾವಗಡ ಜೊತೆಗಿನ ಸ್ನೇಹಾ, ಮೊದ ಮೊದಲು ನೀರಸ ಆಟವಾಡಿ ಎಲಿಮಿನೇಶನ್‌ವರೆಗೂ ಹೋಗಿ ಬರುತ್ತಿದ್ದ ದಿವ್ಯಾ, ಕೊನೆಗೆ ಸ್ಟ್ರಾಂಗ್ ಸ್ಪರ್ಧಿಯಾಗಿ ಟಾಪ್ 6 ರಲ್ಲಿ ಸ್ಥಾನ ಪಡೆದಿದ್ದರು. ಬಿಗ್ ಬಾಸ್ ಬಳಿಕ ಕಾಣೆಯಾಗಿದ್ದ ದಿವ್ಯಾ ಇದೀಗ ‘ತ್ರಿಪುರಾ ಸುಂದರಿ’ಯ ಆಮ್ರಪಾಲಿಯಾಗಿ ಜನಮನ ಸೆಳೆಯುತ್ತಿದ್ದಾರೆ.

ಜನವರಿ 2ರಿಂದ ಆರಂಭವಾಗಿರುವ ತ್ರಿಪುರ ಸುಂದರಿ (Tripura Sundari) ಧಾರಾವಾಹಿ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ತ್ರಿಪುರ ಸುಂದರಿ ಧಾರಾವಾಹಿಯಲ್ಲಿ ನಟಿಯಾಗಿ ಬಿಗ್ ಬಾಸ್ ಸೀನನ್ 08 ರ ಸ್ಪರ್ಧಿ ದಿವ್ಯಾ ಸುರೇಶ್ ಅಭಿನಯಸಲಿದ್ದಾರೆ. ಇವರಿಗೆ ನಾಯಕನಾಗಿ ನನ್ನರಸಿ ರಾಧೆ ಖ್ಯಾತಿಯ ಅಭಿನವ್ ವಿಶ್ವನಾಥ್ ಕಾಣಿಸಿಕೊಂಡಿದ್ದಾರೆ.

Tap to resize

ಗಂಧರ್ವ ಲೋಕದ ಕಥೆಯನ್ನು ಹೊಂದಿರುವ ಈ ಧಾರಾವಾಹಿ ಎರಡು ವಾರಗಳಲ್ಲೆ ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಗಂಧರ್ವ ಲೋಕದಲ್ಲಿನ ಸಮಸ್ಯೆಯಿಂದಾಗಿ ಭೂಮಿಯ ಮೇಲೆ ಬೆಳೆಯುವ ರಾಜಕುಮಾರನನ್ನು ಹುಡುಕುತ್ತಾ ಬರುವ ಆಮ್ರಪಾಲಿ ಎಂಬ ಸುಂದರಿ ರಾಜಕುಮಾರಿಯಾಗಿ ದಿವ್ಯಾ ಸುರೇಶ್ (Divya Suresh) ನಟಿಸಿದ್ದು, ರಾಜಕುಮಾರನ್ನು ಕರೆ ತರುವ ಜವಾಬ್ದಾರಿ ಈಕೆ ಮೇಲಿರುತ್ತೆ.

ರಾಜಕುಮಾರನಿಲ್ಲದೇ ಗಂಧರ್ವ ಲೋಕಕ್ಕೆ ಮರಳುವುದಿಲ್ಲ ಎಂದು ಶಪಥ ಮಾಡಿ ಭೂಲೋಕದಲ್ಲಿ ರಾಜಕುಮಾರನ್ನು ಹುಡುಕುತ್ತಾ (in search of prince) ಸಾಗುವ ಆಮ್ರಪಾಲಿ, ಅವನ ಮನವೊಲಿಸಿ ಗಂಧರ್ವ ಲೋಕಕ್ಕೆ ಕರೆದುಕೊಂಡು ಹೋಗಬೇಕು. ಈ ಕಾರ್ಯದಲ್ಲಿ ಆಮ್ರಪಾಲಿ ಯಶಸ್ವಿಯಾಗುತ್ತಾಳಾ ಎಂದು ಕಾದು ನೋಡಬೇಕು. 
 

ತ್ರಿಪುರ ಸುಂದರಿಯಾಗಿ ಕಾಣಿಸಿಕೊಂಡಿರುವ ದಿವ್ಯಾ ಸುರೇಶ್ ಲುಕ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೂರು ಲೋಕದಲ್ಲಿ ಹುಡುಕಿದರೂ ಇಂತಹ ಸುಂದರಿ ಸಿಗಲಾರಳು ಎಂದು ಹೇಳುತ್ತಿದ್ದಾರೆ ಜನ. ಅಲ್ಲದೇ ಇದೆ ಪ್ರೋಮೋ ನೋಡಿರುವ ಜನ ಬಾಹುಬಲಿ ಸೀರಿಯಲ್ ನಂತೆ ಕಾಣುತ್ತಿದೆ ಎನ್ನುತ್ತಿದ್ದಾರೆ.

ಬಿಗ್ ಬಾಸ್ ಸೀಸನ್ 08 ರಲ್ಲಿ ದಿವ್ಯಾ ಸುರೇಶ್ ಹೆಸರು ಮಾಡಿದ್ದರು. ಟಾಪ್ 5 ನಲ್ಲಿ ಕೂಡ ಇದ್ರು. ಬಿಗ್ ಬಾಸ್ ವಿನ್ನರ್ (Bigg Boss winner) ಮಂಜು ಪಾವಗಡ ಮತ್ತು ಇವರು ಆತ್ಮೀಯ ಸ್ನೇಹಿತರಾಗಿದ್ದರು. ಇವರು ಲವ್ ಮಾಡ್ತಿದ್ದಾರೆ, ಇಬ್ಬರ ಮದ್ವೆಯಾಗುತ್ತೆ, ಈಗಾಗಲೆ ಮದ್ವೆ ಕೂಡ ಆಗಿದ್ದಾರೆ… ಹಾಗೇ ಹೀಗೆ ಎಂದು ಹಲವಾರು ಗಾಸಿಪ್ ಸಹ ಹರಿದಾಡಿತ್ತು. ಆದರೆ ದಿವ್ಯಾ ಮಾತ್ರ ಸೈಲೆಂಟ್ ಆಗಿಯೇ ಇದ್ರು.

ಇನ್ನು ಬಿಗ್ ಬಾಸ್ ನಲ್ಲಿ ದಿವ್ಯಾ ಸುರೇಶ್ ತಾನು ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಅದು ಅರ್ಧಕ್ಕೆ ನಿಲ್ಲುತ್ತೆ ಎಂದು ಹೇಳಿ ಕಣ್ಣೀರಿಟ್ಟಿದ್ದರು, ಬಿಗ್ ಬಾಸ್ ಸಹ ಅರ್ಧಕ್ಕೆ ನಿಂತು ಮತ್ತೆ ಆರಂಭವಾಗಿತ್ತು, ಬಿಗ್ ಬಾಸ್ ಬಳಿಕ ಎಲ್ಲೂ ಕಾಣಿಸಿಕೊಳ್ಳದ ದಿವ್ಯಾ ಸುರೇಶ್ ಈಗ ಈ ಧಾರಾವಾಹಿ ಮೂಲಕ ತಾನು ಹಿಡಿದ ಕೆಲಸ ಅರ್ಧಕ್ಕೆ ನಿಲ್ಲುತ್ತೆ ಎಂಬ ನಂಬಿಕೆಯನ್ನು ಸುಳ್ಳು ಮಾಡ್ತಾರಾ ನೋಡಬೇಕು.

ಇನ್ನು ತ್ರಿಪುರಿ ಸುಂದರಿ’ ಪ್ರಾಜೆಕ್ಟ್‌ಗಾಗಿ ಕಳೆದ ವರ್ಷದಿಂದ ಕತ್ತಿವರಸೆ ಸೇರಿ ಭರ್ಜರಿ ಸ್ಟಂಟ್‌ಗಳನ್ನ ದಿವ್ಯಾ ಸುರೇಶ್ ಪ್ರ್ಯಾಕ್ಟೀಸ್ ಮಾಡುತ್ತಿದ್ದರು. ತಾವು ಪ್ರ್ಯಾಕ್ಟೀಸ್ ಮಾಡುತ್ತಿರುವ ವಿಡಿಯೋವನ್ನು ಸಹ ಹಂಚಿಕೊಂಡು ’ಹೊಸ ಪ್ರಾಜೆಕ್ಟ್ ಅತೀ ಶೀಘ್ರದಲ್ಲೇ ಬರುತ್ತಿದೆ’ ಎಂದು ಬರೆದುಕೊಂಡಿದ್ದರು. ಇದೀಗ ಅವರ ಪರಿಶ್ರಮವನ್ನು ಜನ ಕಣ್ತುಂಬಿಕೊಳ್ಳುತ್ತಿದ್ದಾರೆ. 

ಇನ್ನು ಚಲನಚಿತ್ರಗಳ ಕಡೆಗೆ ಬಂದ್ರೆ ದಿವ್ಯಾ ಸುರೇಶ್ ‘9, ಹಿಲ್ಟನ್ ಹೌಸ್’, ‘ಥರ್ಡ್ ಕ್ಲಾಸ್’, ‘ರೌಡಿ ಬೇಬಿ’, ‘ಹಿರಣ್ಯ’ ಮುಂತಾದ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತೆಲುಗಿನ ‘ಡಿಗ್ರಿ ಕಾಲೇಜ್’ ಸಿನಿಮಾದಲ್ಲೂ ದಿವ್ಯಾ ಸುರೇಶ್ ಕಾಣಿಸಿಕೊಂಡಿದ್ದಾರೆ. ಯಾವುದು ಅಷ್ಟೊಂದು ಸುದ್ದಿ ಮಾಡಿಲ್ಲ, ಇದೀಗ ‘ತ್ರಿಪುರಾ ಸುಂದರಿ’ ಸದ್ದು ಮಾಡುತ್ತಾ ಕಾದು ನೋಡಬೇಕು.

Latest Videos

click me!