Sangeetha Sringeri: ಇಂಟರ್ವ್ಯೂಗಳಲ್ಲಿ ಬಿಗ್ ಬಾಸ್ ಅಶ್ವಿನಿ ಗೌಡ ಕೊಡುತ್ತಿರುವ ಸ್ಟೇಟ್ ಮೆಂಟ್ ಗಳು ಸದ್ದು ಮಾಡುತ್ತಿದ್ದು, ಇದೀಗ ನನ್ನಂಥ ಸ್ಟ್ರಾಂಗ್ ಸ್ಪರ್ಧಿಯೇ ಇಲ್ಲಿವರೆಗೂ ಬಂದಿಲ್ಲ ಎಂದು ಅಶ್ವಿನಿ ಗೌಡ ಮಾತಿಗೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಸಂಗೀತ ಶೃಂಗೇರಿ ಮುದ್ದಾಗಿ ತಿರುಗೇಟು ಕೊಟ್ಟಂತಿದೆ.
ಕನ್ನಡ ಬಿಗ್ ಬಾಸ್ ಸೀಸನ್ 12 ಮುಗಿದರೂ ಅಶ್ವಿನಿ ಗೌಡ ಅವರ ಅಸಮಧಾನ ಕಡಿಮೆಯಾಗಿಲ್ಲ. ಸಂದರ್ಶನಗಳಲ್ಲಿ ತಾನೇ ಗೆಲ್ಲಬೇಕಾದ್ದು ಎನ್ನುವಂತಹ ಸ್ಟೇಟ್ ಮೆಂಟ್ ಗಳನ್ನು ನೀಡುತ್ತಾ ಬಂದಿದ್ದಾರೆ. ಕೊನೆಗೆ ಬಿಗ್ ಬಾಸ್ ಇತಿಹಾಸದಲ್ಲೇ ನನ್ನಂಥ ಸ್ಟ್ರಾಂಗ್ ಸ್ಪರ್ಧಿ ಬಂದಿಲ್ಲ ಎಂದಿದ್ದು, ಆ ಮಾತಿಗೆ ಸಂಗೀತ ಶೃಂಗೇರಿ ಫ್ಯಾನ್ಸ್ ಈಗಾಗಲೇ ತಿರುಗೇಟು ಕೊಟ್ಟಿದ್ದು, ಇದೀಗ ಸಂಗೀತ ಕೂಡ ಸ್ವೀಟ್ ಆಗಿ ಟಾಂಗ್ ಕೊಟ್ಟಂತಿದೆ.
26
ಏನು ಹೇಳಿದ್ರು ಅಶ್ವಿನಿ ಗೌಡ
ಬಿಗ್ಬಾಸ್ ಅನ್ನುವಂಥದ್ದು ಕಾಮಿಡಿ ಶೋ ಅಲ್ಲ. ಇದು ವ್ಯಕ್ತಿತ್ವದ ಆಟ. ಆದರೆ ಇಲ್ಲಿ ಯಾವ ಮಾನದಂಡದ ಮೇಲೆ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ ಎನ್ನುವುದು ಗೊತ್ತಿಲ್ಲ., ಇಡೀ ಮನೆಗೆ ನಾನು ನನ್ನನ್ನು ಸಮರ್ಪಿಸಿ ಕೊಂಡಿದ್ದೆ. ನನ್ನ ಮನಸ್ಸಿಗೂ ಗಾಯವಾಗಿದೆ, ದೈಹಿಕವಾಗಿಯೂ ಗಾಯವಾಗಿದೆ. ತುಂಬಾ ಹೆಮ್ಮೆಯಿಂದ ನಾನು ಹೇಳುತ್ತೇನೆ. ಇಲ್ಲಿಯವರೆಗೂ ನನ್ನ ರೀತಿಯ ಸ್ಟ್ರಾಂಗ್ ಸ್ಪರ್ಧಿ ಬಿಗ್ಬಾಸ್ಗೆ ಬಂದಿಲ್ಲ. ಇನ್ನು ಮುಂದೆ ಬಂದರೆ ಅದು ನನ್ನನ್ನು ಮೀರಿಯೇ ಹೋಗಬೇಕು ಎಂದಿದ್ದರು.
36
ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗಿದ್ದು, ಮಾಜಿ ಬಿಗ್ ಬಾಸ್ ಸ್ಪರ್ಧಿ ಸಂಗೀತ ಶೃಂಗೇರಿ ಅಭಿಮಾನಿಗಳು, ಸಂಗೀತ ವಿಡೀಯೋಗಳನ್ನು ಶೇರ್ ಮಾಡಿ, ಮೇಡಂ ನೀವು ಸಿಂಹಿಣಿ ಸಂಗೀತಾ ಶೃಂಗೇರಿ ಹೆಸರು ಕೇಳಿದ್ದೀರಾ? ಸ್ವಲ್ಪ ಅವರ ವಿಡೀಯೋಗಳನ್ನು ನೋಡಿಕೊಂಡು ಬನ್ನಿ ಎಂದಿದ್ದರು. ಸಂಗೀತಾ ಮುಂದೆ ನೀವು ಸೊನ್ನೆ ಅಂತಾನೂ ಹೇಳಿದ್ದರು. ಅದರ ಜೊತೆಗೆ ದೀಪಿಕಾ ದಾಸ್ ಕೂಡ ನಿಮಗಿಂತ ಸ್ಟ್ರಾಂಗ್ ಇದ್ದರು ಎಂದಿದ್ದರು.
ಇದೀಗ ಸಂಗೀತ ಶೃಂಗೇರಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿ, ಅದಕ್ಕೆ Imagine thinking you're my competition. Cute. ಎಂದು ಕ್ಯಾಪ್ಶನ್ ಕೊಟ್ಟಿದ್ದು, ಇದನ್ನು ಅಭಿಮಾನಿಗಳು ಅಶ್ವಿನಿ ಗೌಡ ಹೇಳಿಕೆಗೆ ಹೋಲಿಕೆ ಮಾಡುತ್ತಿದ್ದಾರೆ. ಸಂಗೀತ ಕೂಡ ಅಶ್ವಿನಿ ಮಾತಿಗೆ ಸ್ವೀಟ್ ಆಗಿ ತಿರುಗೇಟು ಕೊಟ್ಟಿದ್ದಾರ ಅನ್ನೋದು ಗೊತ್ತಿಲ್ಲ.
56
ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿ
ಅಂದ ಹಾಗೆ ಸಂಗೀತ ಶೃಂಗೇರಿ ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದರು. ಇವರು ಅಭಿಮಾನಿಗಳ ಪಾಲಿಗೆ ಸಿಂಹಿಣಿಯೇ ಆಗಿದ್ದರು. ಅವರ ಖಡಕ್ ಮಾತುಗಳು, ಎಂತಹ ಸ್ಪರ್ಧಿ ಬಂದರೂ ಸವಾಲು ಹಾಕುವ ಗಟ್ಟಿತನ, ಪ್ರತಿಯೊಂದು ಟಾಸ್ಕ್ ನಲ್ಲೂ, ಮನೆಕೆಲಸದಲ್ಲೂ, ಮನರಂಜನೆ ನೀಡೋದ್ರಲ್ಲೂ ಸಂಗೀತ ಬೆಸ್ಟ್ ಆಗಿದ್ದರು. ಇಂತಹ ಸ್ಟ್ರಾಂಗ್ ಸ್ಪರ್ಧಿ ಬಿಗ್ ಬಾಸ್ ಇತಿಹಾಸದಲ್ಲಿ ಯಾರೂ ಇಲ್ಲ ಎನ್ನುವ ಮಾತನ್ನು ಕೂಡ ಅಭಿಮಾನಿಗಳು ಹೇಳುತ್ತಿದ್ದಾರೆ.
66
ಸಂಗೀತ ಮತ್ತು ಅಶ್ವಿನಿ ಗೌಡ ಹೋಲಿಕೆ
ಸಂಗೀತ ಶೃಂಗೇರಿ ಮತ್ತು ಅಶ್ವಿನಿ ಗೌಡ ಅವರಿಗೆ ಒಂದು ವಿಷಯದಲ್ಲಿ ಹೋಲಿಕೆ ಇದೆ. ಅದೇನೆಂದರೆ ಇಬ್ಬರೂ ಕೂಡ ಬಿಗ್ ಬಾಸ್ ಕೊನೆ ತನಕ ಕೂಡ ಮನೆಯಲ್ಲಿದ್ದರು. ಅಷ್ಟೇ ಅಲ್ಲ ಇಬ್ಬರೂ ಕೂಡ ಸೆಕೆಂಡ್ ರನ್ನರ್ ಅಪ್ ಆಗಿದ್ದರು. ಆದರೆ ಸ್ಪರ್ಧೆಗಳು, ಟಾಸ್ಕ್ ವಿಷಯಕ್ಕೆ ಬಂದರೆ ಸಂಗೀತ ಶೃಂಗೇರಿಯನ್ನು ಮೀರುವಂತಹ ಮಹಿಳಾ ಸ್ಪರ್ಧಿ ಇಲ್ಲಿವರೆಗೂ ಬಂದಿಲ್ಲ ಅಂತಾನೆ ಹೇಳಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.