Bigg Boss Kannada 12: ರಕ್ಷಿತಾ ಶೆಟ್ಟಿಗೂ, ಅಶ್ವಿನಿ ಗೌಡಗೂ ಆಗಿ ಬರೋದಿಲ್ಲ. ಬಿಗ್ ಬಾಸ್ ಟಾಸ್ಕ್ ನೀಡಿದಂತೆ ಈ ಮನೆಯಲ್ಲಿ ಯಾರು ಇರಲು ಅನರ್ಹರೋ ಅವರಿಗೆ ಮಸಿ ಬಳಿಯಬೇಕಿತ್ತು. ಆ ವೇಳೆ ಅಶ್ವಿನಿ ಗೌಡ ಅವರು, ರಕ್ಷಿತಾ ಶೆಟ್ಟಿ ಕ್ಯಾರೆಕ್ಟರ್ ಬಗ್ಗೆ ಮಾತನಾಡಿದ್ದು ವೀಕ್ಷಕರಿಗೆ ಸಿಟ್ಟು ತರಿಸಿದೆ.
“ನೀನು ಅಂದುಕೊಂಡಷ್ಟು ಮುಗ್ಧೆ ಅಲ್ಲ, ಇವರು ಬೇರೆಯವರಿಗೆ ಡ್ರಾಮಾ ಅಂತ ಹೇಳ್ತಾರೆ, ಆದರೆ ಇವರು ಡ್ರಾಮಾ ಕಂಪೆನಿಗೆ ಅಪ್ಪ ಅಲ್ಲ, ಮುತ್ತಾತ. ಇವರ ಕುತಂತ್ರಗಳು, ಚೇಷ್ಟೆಗಳು ಎಲ್ಲರಿಗೂ ಅರ್ಥ ಆಗುತ್ತದೆ ಎಂದಾಗ ಒಬ್ಬೊಬ್ಬರನ್ನು ಟಾರ್ಗೆಟ್ ಮಾಡ್ತಾರೆ. ಅಲ್ಲಿ ಅವರ ಕೈ ಹಿಡಿದುಕೊಳ್ಳೋದು, ಅಂಟಿಕೊಂಡು ಕೂತ್ಕೊಳ್ಳೋದು ಮಾಡ್ತಾರೆ, ನಾವು 25ನೇ ವಯಸ್ಸಿಗೆ ಬಂದಾಗ ಮಕ್ಕಳ ಥರ ಅಂಟಿಕೊಂಡು ಕೂರಲಿಲ್ಲ. ನಿನ್ನ ವಯಸ್ಸಿನ ಬೇರೆ ಮಕ್ಕಳು ಈ ಶೋ ನೋಡ್ತಾರೆ. ನಾವು ಕಷ್ಟ ನೋಡಿ ಬಂದಿದ್ದೇವೆ, ನಾನು 100 ಸಿನಿಮಾ ಮಾಡಿದ್ದೀನಿ, ನೀನು ಯುಟ್ಯೂಬ್ ಚಾನೆಲ್ ಮಾಡಿಕೊಂಡು ಬಂದಿದ್ದೇವೆ” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
27
100 ಯುಟ್ಯೂಬ್ ಚಾನೆಲ್ ಮಾಡ್ತೀನಿ: ಅಶ್ವಿನಿ ಗೌಡ
“ಮೂರನೇ ವಾರದಲ್ಲಿ ನಿನ್ನದೊಂದು ಕಾರ್ಡ್ ವರ್ಕ್ ಆಯ್ತು ಅಂತ ಇಡೀ ನಮ್ಮ ವ್ಯಕ್ತಿತ್ವವನ್ನು ಕಸದಬುಟ್ಟಿಗೆ ಹಾಕೋ ಯೋಗ್ಯತೆ ನಿನಗೆ ಇಲ್ಲ. ನೀನು ಆಟ ಆಡುವಾಗ ಏನೇನೋ ಮಾತಾಡಿದ್ದೀಯಾ ಅಂತ ಗೊತ್ತಿಲ್ಲ. ಆದರೆ ನೀವು ಸೀರಿಯಲ್‌ನವರು, ನಾಟಕ ಮಾಡ್ತೀರಾ ಅಂತ ಹೇಳಿದ್ದೀಯಾ, ಇದು ಕ್ಯಾಮರಾಗೂ ಗೊತ್ತು. ನಿನ್ನಂಥ 100 ಯುಟ್ಯೂಬ್ ಚಾನೆಲ್‌ಗಳು ನಾನು ಮಾಡ್ತೀನಿ. ನನ್ನ ವಯಸ್ಸಿಗೆ 40 ನೇ ವರ್ಷಕೆ ನೀನು 100 ಸಿನಿಮಾ ಮಾಡಿ ತೋರಿಸು” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
37
ರಕ್ಷಿತಾ ಕ್ಯಾರೆಕ್ಟರ್ ಬಗ್ಗೆ ಅಶ್ವಿನಿ ಗೌಡ ಹೀಗೆ ಹೇಳಿದ್ರಾ?
“ರೂಮ್‌ಗೆ ಹೋಗಿ ಕೈ ಹಿಡಿದುಕೊಂಡು ಬಕೆಟ್ ಹಿಡಿಯೋ ಕೆಲಸ ನಾನು ಮಾಡಿಲ್ಲ. ಅಶ್ವಿನಿ ಗೌಡ 40ನೇ ವಯಸ್ಸಿಗೆ ಏನು ಅಂತ ಸಾಬೀತುಪಡಿಸುವೆ. ವೋಟ್ ಬ್ಯಾಂಕ್ ಮಾಡಬೇಕು ಎಂದಿದ್ರೆ ನಾಟಕ ಮಾಡಿ ಎಲ್ಲರ ಮನಸ್ಸು ಗೆಲ್ಲಬಹುದಿತ್ತು” ಎಂದು ಅಶ್ವಿನಿ ಗೌಡ ಹೇಳಿದ್ದಾರೆ.
ಅಶ್ವಿನಿ ಗೌಡ ಮಾತು ಕೇಳಿ, ರಕ್ಷಿತಾ ಶೆಟ್ಟಿ ಅವರು ಸಿಟ್ಟಾಗಿದ್ದಾರೆ. “ನಾನು ಮುಗ್ಧರಿಗೆ ಮುಗ್ಧೆ, ರಾಕ್ಷಸರಿಗೆ ರಾಕ್ಷಸಿ. ನಾನು ನಿಮ್ಮನ್ನು ಮನೆಗೆ ಕಳಿಸಿಯೇ ನಾನು ಮನೆಗೆ ಹೋಗೋದು” ಎಂದು ಸವಾಲ್ ಹಾಕಿದ್ದಾರೆ.
57
ಕಿಡಿಕಾರಿದ ವೀಕ್ಷಕರು
“ರಕ್ಷಿತಾ ಮೇಲೆ ಎಂಥ ಅಸಭ್ಯ ಹೇಳಿಕೆ ಕೊಟ್ಟಿದ್ದಾಳೆ ಅಶ್ವಿನಿ ಗೌಡ. ಹೆಣ್ಣು ಮಕ್ಕಳ ಪರ ನಿಲ್ಲುತ್ತೇನೆ ಅಂಥ ಬಿಲ್ಡ್ ಆಫ್ ಬೇರೆ ,ಇಂಥ ಹೊಲಸು ಬಾಯಿಯ ಹೆಂಗಸು ಬಿಬಿ ಮನೆಗೆ ಬೇಕಾ, ಎಲ್ಲಾ ಹೆಣ್ಣು ಮಕ್ಕಳ ತೇಜೋವಧೆ ಮಾಡೋಕೆ ಇವಳು ಬಂದಿದ್ದ ಮೊದಲು ಅವಳನ್ನು ಹೊರ ಹಾಕಿ ಮಹಾ ಸುಳ್ಳು ಬುರುಕಿ, ಅವಳು ಅಲ್ಲಿ ಎಲ್ಲರ ತೋಳು ಬಳಸಿ ಡ್ಯಾನ್ಸ್ ಮಾಡುವುದು ನೋಡಿದರೆ ನೋಡುವ ವೀಕ್ಷಕರಿಗೆ ಅಸಹ್ಯ ಅನಿಸುವುದಿಲ್ಲವಾ?” ಎಂದು ಜಯಶ್ರೀ ಶೆಟ್ಟಿ ಅವರು ಕಾಮೆಂಟ್ ಮಾಡಿದ್ದಾರೆ.
67
ಅಶ್ವಿನಿ ಗೌಡಗೆ ಅಹಂಕಾರ ಎಂದ ವೀಕ್ಷಕರು
“ಅಶ್ವಿನಿ ಗೌಡಗೆ ತಾನು 100 ಮೂವಿ ಮಾಡಿದ್ದೀನಿ ಅನ್ನೋ ಅಹಂ ಬಹಳ ಇದೆ. ಏ, ಅಶ್ವಿನಿ ಕಲಾವಿದರು ಅಂದ್ರೆ ಹೇಗೆ ಇರಬೇಕು ಗೊತ್ತಾ? ಡಾ ರಾಜಕುಮಾರ್ ಡಾ ವಿಷ್ಣುವರ್ಧನ್, ಡಾ ಅಂಬರೀಷ್, ಡಾ ಪುನೀತ್ ರಾಜಕುಮಾರ್ ತರ್ ಇರಬೇಕು ಅವರು ನೋಡು ಜನಗಳ ಜೊತೆ ಹೇಗೆ ಇದ್ರೂ ಅಂತ ನಿನ್ನ ಹಾಗೆ ಅವರು ಯಾರನ್ನು ಕೀಳಾಗಿ ನೋಡಿಲ್ಲ ನೀನು ಮಾಡಿದ್ದೂ ಬರಿ ಸೈಡ್ ಆಕ್ಟಿಂಗ್ ಅವರೆಲ್ಲ ಮಾಡಿದ್ದೂ 200 ಮೂವಿ ಒಂದ ದಿನ ಕೂಡ ಅವರಲ್ಲಿ ಅಹಂ ಅನ್ನೋದು ನಾವು ನೋಡಿಲ್ಲ. ನೀನು ಹೇಳ್ತಿಯ 100 ಯೌಟ್ಯೂಬ್ ಚಾನೆಲ್ ಮಾಡ್ತೀನಿ ಅಂತ ನೀನು 100 ಅಲ್ಲ 1000 ಯೌಟ್ಯೂಬ್ ಚಾನೆಲ್ ಮಾಡಿದ್ರು ಗಿಲ್ಲಿ ಹಾಗೆ ರಕ್ಷಿತಾ ಹಾಗೆ ಹಾಗೂ ಇನ್ನೂ ಇರುವ ಯೌಟ್ಯೂಬ್ರ್ಸ್ ತರ್ ಅಲ್ಲ ಅವರ ಕಾಲಿನ ದೂಳಿಗೂ ಸಮ ಆಗಲ್ಲ ನೀನು. ನೀನು ನೀನಾಗಿ ಬಿಗ್ ಬಾಸ್ ಮನೆಯಿಂದ ಆಚೆ ಬಾ ಇಲ್ಲ ಅಂದೇ ಇರೋ ಇನ್ನೂ ಸ್ವಲ್ಪ ಮರ್ಯಾದೆಯನ್ನು ತೆಗಿಸಿಕೊಂಡು ಆಚೆ ಬರ್ತೀಯ” ಎಂದು ಸಲ್ಮಾನ್ ಮುನ್ನ ಹೇಳಿದ್ದಾರೆ.
77
ಅಶ್ವಿನಿ ಗೌಡ ಜೊತೆಗಿದ್ದಿದ್ರೆ ಜಾಹ್ನವಿ ಹೊರಗೆ ಬರ್ತಿದ್ರು
“ಅಶ್ವಿನಿ ಗೌಡಗೆ ಅವರ ಪರ ಜೊತೆ ಇದ್ದು, ಅವರಿಗೆ ಬಣ್ಣದ ಮಾತುಗಳು ಆಡಿ ಬಕೆಟ್ ಹಿಡಿದ್ರೆ ಮಾತ್ರ ಒಳ್ಳೆಯವರು. ಆದರೆ ನಿಜವಾದ ನೇರ ಸತ್ಯವಾದ ನುಡಿ ಮಾತನಾಡೋರು ಅಂದ್ರೆ ಅವರಿಗೆ ಅಸಹ್ಯ ಅಲ್ವಾ? ಜಾಹ್ನವಿ, ಅಶ್ವಿನಿ ಗೌಡ ಸವಹಾಸ ಬಿಟ್ಟು ಬಂದು ಉತ್ತಮ ಅಂತ ಗೆಲುವು ಸಿಕ್ಕಿದ್ದು ಅಲ್ಲೇ ಇದ್ದಿದ್ರೆ ಜಾಹ್ನವಿ, ಇಷ್ಟೊತ್ತಿಗೆ ಬಿಗ್ ಬಾಸ್ ಶೋನಿಂದ ಹೊರಗಡೆ ಬರ್ತಾ ಇದ್ದರು” ಎಂದು ಕೆಜಿ ಬೇವಿನಾಳ್ ಹೇಳಿದ್ದಾರೆ.