Deepika Sharan Shetty: ‘ಕೆಲವೊಂದು ಧಾರಾವಾಹಿಗಳಲ್ಲಿ ಕೆಲವು ಪಾತ್ರಗಳು ಜನರಿಗೆ ತುಂಬಾನೆ ಇಷ್ಟವಾಗುತ್ತವೆ. ಅವು ನಾಯಕ-ನಾಯಕಿಯದ್ದೇ ಆಗಿರಬೇಕು ಎಂದಿಲ್ಲ. ಕೆಲವು ಪೋಷಕ ಪಾತ್ರಗಳು ಒಂದೇ ಪಾತ್ರವನ್ನು ವಿಭಿನ್ನ ರೀತಿಯಲ್ಲಿ ಕ್ಯಾರಿ ಮಾಡುತ್ತವೆ, ಅಂತಹ ಒಂದು ಪಾತ್ರ ಗೌರಿ ಕಲ್ಯಾಣ ಕಾಂತ ಪಾತ್ರ.
ಕೆಲವು ನಟರು ಹಲವಾರು ಧಾರಾವಾಹಿಗಳಲ್ಲಿ ಬಹಳ ವರ್ಷಗಳಿಂದ ನಟಿಸಿದ್ದರೂ ಸಹ, ಅವರ ನಟನೆ ಜನರಿಗೆ ನೆನಪಿನಲ್ಲಿ ಇರೋದು, ಅಥವಾ ಜನರಿಗೆ ಇಷ್ಟವಾಗುವುದು ಅವರ ವಿಭಿನ್ನ ನಟನೆಯಿಂದ ಮಾತ್ರ. ಇದೀಗ ಅಂತಹುದೇ ಒಂದು ವಿಶಿಷ್ಟವಾದ ಪಾತ್ರದ ಮೂಲಕ ಗಮನ ಸೆಳೆಯುತ್ತಿರುವವರು ‘ಗೌರಿ ಕಲ್ಯಾಣ’ ಧಾರಾವಾಹಿ ನಟಿ ದೀಪಿಕಾ ಶರಣ್.
26
ಗೌರಿ ಕಲ್ಯಾಣ ಧಾರಾವಾಹಿ
ದೀಪಿಕಾ ಶರಣ್ ಇಲ್ಲಿವರೆಗೂ ಗೌರಿ ಪುರದ ಗಯ್ಯಾಳಿಗಳು, ನೇತ್ರಾವತಿ, ಯಾರೇ ನೀ ಮೋಹಿನಿ, ಗೌರಿ ಕಲ್ಯಾಣ ಸೇರಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಆದರೆ ಇದೀಗ ಅವರ ಗೌರಿ ಕಲ್ಯಾಣ ಧಾರಾವಾಹಿಯ ಕಾಂತಲಕ್ಷ್ಮಿ ಪಾತ್ರಕ್ಕೆ ಸಿಕ್ಕಾಪಟ್ತೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೀಪಿಕಾ ಅವರನ್ನು ಮಹಾನಟಿ ಎಂದೇ ಹೊಗಳುತ್ತಿದ್ದಾರೆ ಜನ, ಇದಕ್ಕೆ ಕಾರಣ ಧಾರಾವಾಹಿಯಲ್ಲಿ ಅವರ ಅದ್ಭುತ ಅಭಿನಯ.
36
ಅಮ್ಮ ಕಾಂತಲಕ್ಷ್ಮಿ ಪಾತ್ರಕ್ಕೆ ಫ್ಯಾನ್ಸ್ ಫಿದಾ
ಹೌದು, ಗೌರಿ ಕಲ್ಯಾಣ ಧಾರಾವಾಹಿಯಲ್ಲಿ ಮೂವರು ಹೆಣ್ಣು ಮಕ್ಕಳ ಅಮ್ಮ ಕಾಂತಲಕ್ಷ್ಮಿಯಾಗಿ ದೀಪಿಕಾ ಶರಣ್ ನಟಿಸುತ್ತಿದ್ದಾರೆ. ಮಿಡಲ್ ಕ್ಲಾಸ್ ಕುಟುಂಬವಾದರೂ ಕಾಂತಲಕ್ಷ್ಮಿಗೆ ತನ್ನ ಮೂವರು ಮಕ್ಕಳನ್ನು ಶ್ರೀಮಂತರ ಮನೆಗೆ ಮದುವೆ ಮಾಡಿ ಕೊಡುವ ಕನಸು. ಅದಕ್ಕಾಗಿ, ಶ್ರೀಮಂತರ ಮನೆಯವರನ್ನು ಯಾವ ರೀತಿಯಾದರು ಬುಟ್ಟಿಗೆ ಹಾಕಿಕೊಳ್ಳೋದಕ್ಕೆ ರೆಡಿ. ಅದಕ್ಕಾಗಿ ತನ್ನ ಕುಟುಂಬವನ್ನು ಎದುರಿಸೋದಕ್ಕೂ ಕಾಂತ ತಯಾರಾಗಿದ್ದಾರೆ. ಆ ಪಾತ್ರದಲ್ಲಿ ದೀಪಿಕಾ ಅದ್ಭುತವಾಗಿ ನಟಿಸುತ್ತಿದ್ದಾರೆ.
ಕಾಂತಲಕ್ಷ್ಮೀಯದು ಆರಂಭದಲ್ಲಿ ಒಂಥರಾ ಕಾಮಿಡಿ ಪಾತ್ರ, ಮತ್ತೊಂದೆಡೆ ಶ್ರೀಮಂತಿಕೆಯ ಮೇಲೆ ಕಣ್ಣಿಟ್ಟಿರುವ, ತನ್ನ ಮೂವರು ಮಕ್ಕಳನ್ನು ಶ್ರೀಮಂತ ಮನೆಯ ಸೊಸೆಯರನ್ನಾಗಿ ಮಾಡುವ ಹಠವಾದಿ ಅಮ್ಮ, ಹಣವಿಲ್ಲದೇ ಗಂಡು ಮಗುವನ್ನು ಕಳೆದುಕೊಂಡ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡ ಅಮ್ಮನಾಗಿ, ಮಗಳನ್ನು ಕಾಣಲು, ಜೋಕರ್ ವೇಷ ಧರಿಸಿ ಆಟವಾಡುವ ಅಮ್ಮನಾಗಿ, ಹೀಗೆ ಒಂದೇ ಪಾತ್ರದಲ್ಲಿ ವಿವಿಧ ಶೇಡ್ ಗಳಲ್ಲಿ ದೀಪಿಕಾ ನಟಿಸಿದ್ದಾರೆ.
56
ವೀಕ್ಷಕರಿಂದ ಮೆಚ್ಚುಗೆ
ಎಂಥ ಅಭಿನಯಕ್ಕೂ ಸೈ ಎನ್ನುವ ಇವರ ನಟನೆಯನ್ನು ನೋಡಿ ವೀಕ್ಷಕರು ಇವರನ್ನು ಮಹಾನಟಿ ಎಂದು ಕರೆದಿದ್ದಾರೆ. ತಮ್ಮ ಅಭಿನಯದ ಮೂಲಕ ನಮ್ಮ ಕಣ್ಣಂಚನ್ನು ಒದ್ದೆ ಮಾಡಿದ ನಟಿ ಎಂದು ಸಹ ಹೇಳಿದ್ದಾರೆ ಜನ. ಇವರ ಸ್ಕ್ರೀನ್ ಪ್ರೆಸೆನ್ಸ್ ಸೂಪರ್, ಎಲ್ಲಾ ನಟಿಯರಿಗೆ ಇದನ್ನ ಮಾಡಲು ಸಾಧ್ಯವಿಲ್ಲ, ನಿವೊಬ್ಬ ಅತ್ಯದ್ಭುತ ಕಲಾವಿದೆ ಎಂದು ಜನ ಹಾಡಿ ಹೊಗಳಿದ್ದಾರೆ.
66
ದೀಪಿಕಾ ಶರಣ್ ಯಾರ್ ಗೊತ್ತ?
ಅಂದ ಹಾಗೆ ದೀಪಿಕಾ ಶರಣ್ ಶೆಟ್ಟಿ ಅವರು ಹಿರಿಯ ನಟಿ ಲಕ್ಷ್ಮೀ ಭಾಯ್ ಅವರ ಮೊಮ್ಮಗಳು. ಇವರ ಪತಿ ಕೆಲವು ವರ್ಷಗಳ ಹಿಂದೆ ಹೃದಯಾಘಾತಕ್ಕೆ ಬಲಿಯಾಗಿದ್ದರು. ಸದ್ಯ ನಟಿ ಸಿಂಗಲ್ ಪೇರೆಂಟ್ ಆಗಿದ್ದಾರೆ. ತಮ್ಮ ಮಗ ಹಾಗೂ ಅಜ್ಜಿಯ ಜೊತೆ ಇರುವ ದೀಪಿಕಾ, ಅವರಿಗೆ ಮತ್ತಷ್ಟು ಉತ್ತಮ ಧಾರಾವಾಹಿಗಳು, ಪಾತ್ರಗಳು ಅರಸಿ ಬರಲಿ ಎಂದು ವೀಕ್ಷಕರು ಹಾರೈಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.