ಕನ್ನಡ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದ ನಟಿ ದೀಪಿಕಾ ದಾಸ್. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಪರ್ಧಿಸುವ ಮೂಲಕ ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿದರು. ಮದುವೆಯಾದ ಬಳಿಕ ದೇಶ, ವಿದೇಶದಲ್ಲೇ ನಟಿ ಬ್ಯುಸಿಯಾಗಿಬಿಟ್ಟಿದ್ದರು.
26
ಸಿಗಂಧೂರಲ್ಲಿ ದೀಪಿಕಾ ದಾಸ್
ನಟಿ ದೀಪಿಕಾ ದಾಸ್ ಇದೀಗ ಸಿಗಂಧೂರು ಚೌಡೇಶ್ವರಿ ದೇಗುಲಕ್ಕೆ ಭೇಟಿ ನೀಡಿದ್ದು, ಅಲ್ಲಿನ ಸುಂದರ ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದೀಪಿಕಾ blessed ಎಂದು ಬರೆದುಕೊಂಡಿದ್ದು, ಹಸು, ಕರುಗಳ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
36
ಸೀರೆಯಲ್ಲಿ ದೀಪಿಕಾ ದಾಸ್
ಹಸಿರು ಮತ್ತು ಮರೂನ್ ಬಣ್ಣದ ಕಾಟನ್ ಸೀರೆಯುಟ್ಟಿರುವ ದೀಪಿಕಾ ದಾಸ್, ಕೈತುಂಬಾ ಗಾಜಿನ ಬಳೆಗಳನ್ನು ಧರಿಸಿ, ತಲೆ ತುಂಬಾ ಮಲ್ಲಿಗೆ ಹೂವು ಮುಡಿದು, ತುಂಬಾನೆ ಸುಂದರವಾಗಿ ಕಾಣಿಸುತ್ತಿದ್ದಾರೆ. ಟ್ರೆಡಿಶನಲ್ ಲುಕ್ ನಲ್ಲಿ ನಟಿ ತುಂಬಾನೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ದೀಪಿಕಾ ದಾಸ್ ಇಂದು ಉಡುಪಿಯ ಕಾಪುನಲ್ಲಿರುವ ಮಾರಿಯಮ್ಮನ ಸನ್ನಿಧಾನಕ್ಕೆ ಕೂಡ ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಕೂಡ ಇದೆ. ಇನ್ನು ದೇಗುಲದಲ್ಲಿ ನಟಿ ಲೇಖನ ಯಜ್ಞ ಸಂಕಲ್ಪವನ್ನೂ ಸಹ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.
56
ಯಾಕೀ ಟೆಂಪಲ್ ರನ್
ದೀಪಿಕಾ ದಾಸ್ ವಿವಿಧ ದೇಗುಲಗಳಿಗೆ ಒಟ್ಟೊಟ್ಟಿಗೆ ಭೇಟಿ ನೀಡುತ್ತಿದ್ದು, ಕಾರಣ ಏನು ಅನ್ನೋದು ಗೊತ್ತಿಲ್ಲ. ಇತ್ತೀಚೆಗಷ್ಟೆ ಗುವಾಹಟಿಯ ಕಾಮಾಖ್ಯ ಮಂದಿರಕ್ಕೆ ಭೇಟಿ ನೀಡಿದ್ದರು. ಸದ್ಯಕ್ಕಂತೂ ಭಾರತದಲ್ಲೇ ಇರುವ ದೀಪಿಕಾ ದಾಸ್ ಟೆಂಪಲ್ ರನ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.
66
ಸಿನಿಮಾದಲ್ಲಿ ದೀಪಿಕಾ
ನಾಗಿಣಿ ಬಳಿಕ ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ದೀಪಿಕಾ ದಾಸ್, ನಂತರ ತಮ್ಮದೇ ಆದ ಬ್ರ್ಯಾಂಡ್ ನಲ್ಲಿ ಬ್ಯುಸಿಯಾಗಿದ್ದರು. ಇದಾದ ಬಳಿಕ ಇತ್ತೀಚೆಗೆ ನಟಿ ಪಾರು ಪಾರ್ವತಿ ಎನ್ನುವ ಜರ್ನಿ ಕುರಿತಾದ ಸಿನಿಮಾ ಮಾಡುವ ಮೂಲಕ ಜನಪ್ರಿಯತೆ ಗಳಿಸಿದರು. ದೀಪಿಕಾ ಮುಂದಿನ ಪ್ರಾಜೆಕ್ಟ್ ಏನು ಕಾದು ನೋಡಬೇಕು.