ಸದ್ದಿಲ್ಲದೇ ಮದುವೆಯಾಗಲು ರೆಡಿಯಾದ ರುದ್ರ ಮಾಸ್ಟರ್.. ಹುಡುಗಿ ಯಾರು?

Published : Feb 01, 2026, 02:38 PM IST

Rudra Master wedding: ಶನಿವಾರ ಪ್ರಸಾರವಾದ ಎಪಿಸೋಡ್‌ನಲ್ಲಿ ರುದ್ರ ಮಾಸ್ಟರ್ ಮದುವೆಯಾದಂತೆ ತಮಾಷೆಯಾಗಿ ಒಂದು Spoof ತೋರಿಸಲಾಯ್ತು. ಆಗ ರುದ್ರ ಸದ್ದಿಲ್ಲದೇ ಎಂಗೇಜ್‌ಮೆಂಟ್ ಆದರು ಎಂಬ ಮಾತು ಕೇಳಿಬಂತು. ಈ ಸುದ್ದಿಗೆ ಈಗ ರುದ್ರ  ಅವರು ಉತ್ತರ ಕೊಟ್ಟಿದ್ದಾರೆ. 

PREV
16
'ಮಹಾಸಂಗಮ' ಪ್ರಸಾರ

ಸದ್ಯ ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 7:30ಕ್ಕೆ Dance ಕರ್ನಾಟಕ Dance-2025 & ಕಿಲಾಡಿ Juniors 'ಮಹಾಸಂಗಮ' ಪ್ರಸಾರವಾಗುತ್ತಿದೆ. ಶೋನಲ್ಲಿ ಒಬ್ಬರಿಗಿಂತ ಒಬ್ಬರು ಸಖತ್‌ ಆಗಿ ಪರ್‌ಫಾರ್ಮೆನ್ಸ್‌ ನೀಡುತ್ತಿದ್ದು, ಪ್ರೇಕ್ಷಕರು ಕಣ್ಣು ಮಿಟುಕಿಸದೇ ಶೋ ವೀಕ್ಷಿಸುವಂತೆ ಮಾಡುತ್ತಿದ್ದಾರೆ. ಈ ಬಾರಿಯ ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನಲ್ಲಿ ಡಾನ್ಸ್‌ ಜೊತೆಗೆ ಮನೋರಂಜನೆಯೂ ಜೋರಾಗಿದೆ.

26
ಉತ್ತರ ಕೊಟ್ಟಿದ್ದಾರೆ ರುದ್ರ ಮಾಸ್ಟರ್

ಅಂದಹಾಗೆ Dance ಕರ್ನಾಟಕ Danceನಲ್ಲಿ ನೃತ್ಯ ಸಂಯೋಜಕ ರುದ್ರ ಮಾಸ್ಟರ್ ಬಹಳ ಫೇಮಸ್‌. ನಿರೂಪಕಿ ಅನುಶ್ರೀ ಕೂಡ ಆಗಾಗ್ಗೆ ರುದ್ರ ಮಾಸ್ಟರ್ ಕಾಲೆಳೆಯುವುದನ್ನ ನೀವು ನೋಡಿರಬಹುದು. ಶನಿವಾರ ಪ್ರಸಾರವಾದ ಎಪಿಸೋಡ್‌ನಲ್ಲಿ ರುದ್ರ ಮಾಸ್ಟರ್ ಮದುವೆಯಾದಂತೆ ತಮಾಷೆಯಾಗಿ ಒಂದು Spoof ತೋರಿಸಲಾಯ್ತು. ಆಗ ರುದ್ರ ಸದ್ದಿಲ್ಲದೇ ಎಂಗೇಜ್‌ಮೆಂಟ್ ಆದರೂ ಎಂಬ ಮಾತು ಕೇಳಿಬಂತು. ಈ ಸುದ್ದಿಗೆ ಈಗ ರುದ್ರ ಮಾಸ್ಟರ್ ಉತ್ತರ ಕೊಟ್ಟಿದ್ದಾರೆ.

36
ತಾಯಿ ಹೇಳಿದ್ದೇನು?

ವೇದಿಕೆಯಲ್ಲಿ ರುದ್ರ ಮಾಸ್ಟರ್ ಇದೇ ತಿಂಗಳು ತಾವು ನಿಜವಾಗಿಯೂ ಮದುವೆಯಾಗುತ್ತಿರುವುದಾಗಿ ತಿಳಿಸಿದರು. ಈ ಹಿಂದೆ ರುದ್ರ ಅವರ ತಾಯಿ ಕೂಡ "ಮಗನ ಮದುವೆ ಮಾಡಬೇಕು ಎನ್ನುವ ಆಸೆ ತುಂಬಾ ಇದೆ. ಮೂರು ವರ್ಷದಿಂದ ಕೇಳುತ್ತಿದ್ದೇವೆ. ಏನೋ ಸಾಧಿಸಬೇಕು ಬೇಡ ಬೇಡ ಎನ್ನುತ್ತಿದ್ದ. ಈಗ ಆರು ತಿಂಗಳ ಹಿಂದೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾನೆ ಈಗ ನೋಡುತ್ತಿದ್ದೇವೆ" ಎಂದು ಹೇಳಿದ್ದರು.

46
ಇವರೇ ನೋಡಿ ಹುಡುಗಿ

ರುದ್ರ ಮಾಸ್ಟರ್, ಮದುವೆಯಾಗುತ್ತಿರುವ ಹುಡುಗಿಯ ಹೆಸರು ನಿರೀಕ್ಷಾ. ಇದೇ ಫೆಬ್ರವರಿಯಲ್ಲಿ ಮದುವೆಯಾಗುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನು ಅವರು ಬಹಿರಂಗಪಡಿಸಿಲ್ಲ. ಸದ್ಯ ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಫ್ಯಾನ್ಸ್ ಶುಭಾಷಯಗಳ ಮಹಾಪೂರವನ್ನೇ ಹರಿಸಿದ್ದಾರೆ.

56
ಫ್ಯಾನ್ಸ್‌ ಫುಲ್ ಖುಷ್

ಕನ್ನಡ ಬಿಗ್‌ಬಾಸ್‌ 12ನೇ ಆವೃತ್ತಿಯಲ್ಲಿ 3ನೇ ರನ್ನರ್‌ ಅಪ್ ಆಗಿರುವ ಕಾವ್ಯ ಶೈವ ಹಾಗೂ ಶಂಶಾಕ್​ ಕಳೆದ ಬಾರಿ ಡಿಕೆಡಿ ವಿನ್ನರ್​ ಆಗಿದ್ದರು. ಇವರಿಗೆ ನೃತ್ಯ ಸಂಯೋಜಕರಾಗಿದ್ದವರು ರುದ್ರ ಮಾಸ್ಟರ್. ಡಾನ್ಸ್‌ ಕರ್ನಾಟಕ ಡಾನ್ಸ್‌ ಶೋನಲ್ಲಿ ಹೀಗೆ ಹಲವಾರು ಜೋಡಿಗಳ ಗೆಲುವಿಗೆ ಕಾರಣವಾಗಿರುವ ರುದ್ರ ಮಾಸ್ಟರ್ ಮದುವೆಯಾಗುತ್ತಿರುವ ಸುದ್ದಿ ಕೇಳಿ ಅವರ ಫ್ಯಾನ್ಸ್‌ ಫುಲ್ ಖುಷ್ ಆಗಿದ್ದಾರೆ.

66
ಕರ್ನಾಟಕದ ಜನ ಮನ ಗೆದ್ದಿರುವ ರುದ್ರ ಮಾಸ್ಟರ್

ಇಡೀ ಕರ್ನಾಟಕದ ಜನ ಮನ ಗೆದ್ದಿರುವ ರುದ್ರ ಮಾಸ್ಟರ್ ಈ ಹಿಂದೆ ಕೇರಳದ ವಯನಾಡಿನ ದುರಂತವನ್ನ ನೃತ್ಯ ರೂಪದಲ್ಲಿ ಕಟ್ಟಿಕೊಟ್ಟಿದ್ದು ಇನ್ನು ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿರುವುದನ್ನ ನಾವಿಲ್ಲಿ ನೆನಪಿಸಿಕೊಳ್ಳಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories