ಜೀ ಕನ್ನಡ ವಾಹಿನಿಯು 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯ ಮೂಲಕ ಕರ್ನಾಟಕದ ಅಮ್ಮಂದಿರಿಗೆ ತಮ್ಮ ನೃತ್ಯ ಪ್ರತಿಭೆ ಪ್ರದರ್ಶಿಸಲು ಅಪರೂಪದ ಅವಕಾಶ ನೀಡುತ್ತಿದೆ. 'ಸೂಪರ್ ಮಾಮ್' ಆಗಲು ಆಸಕ್ತಿ ಇರುವವರು ಜುಲೈ 24 ರಿಂದ ಆರಂಭವಾಗುವ ಆಡಿಷನ್‌ನಲ್ಲಿ ಭಾಗವಹಿಸಬಹುದು ಎಂದು ವಾಹಿನಿ ಪ್ರೋಮೋ ಮೂಲಕ ತಿಳಿಸಿದೆ.
ಪ್ರತಿಭೆ ಎನ್ನುವುದು ಯಾರಲ್ಲಿ ಹೇಗೆ ಅಡಗಿರುತ್ತದೆ ಎಂದು ಊಹಿಸುವುದೂ ಕಷ್ಟ. ಎಲ್ಲರಲ್ಲಿಯೂ ಒಂದೊಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅದನ್ನು ಅನಾವರಣಗೊಳಿಸಲು ಅವರಿಗೆ ಒಂದು ವೇದಿಕೆ ಸಿಕ್ಕಿರುವುದಿಲ್ಲವಷ್ಟೇ. ಆದರೆ ಕೆಲವೇ ಕೆಲವು ಪ್ರತಿಭೆಗಳಿಗೆ ತಮ್ಮ ಟ್ಯಾಲೆಂಟ್ ಪ್ರದರ್ಶಿಸುವ ಅವಕಾಶ ಹೇಗೋ ಸಿಕ್ಕಿಬಿಡುತ್ತದೆ.
26
ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆ
ಅಂಥ ಅದೃಷ್ಟವಂತ ಮಹಿಳೆಯರು ಇದಾಗಲೇ ಜೀ ಕನ್ನಡದ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ತಮ್ಮ ಅದ್ಭುತ ಅಭಿನಯ ನೀಡಿದ್ದಾರೆ. ಈಗ ಮತ್ತೊಂದು ಅವಕಾಶವನ್ನು ವಾಹಿನಿ ಕೊಟ್ಟಿದೆ.
36
ನಿಮಗೆ ಡಾನ್ಸ್ ಬರುತ್ತಾ?
ಕರ್ನಾಟಕದ ಅಮ್ಮಂದಿರು ಹೆಜ್ಜೆ ಹಾಕೋಕೆ ಅಪರೂಪದ ಅವಕಾಶ ಎನ್ನುವ ಪ್ರೊಮೋ ಬಿಡುಗಡೆ ಮಾಡಲಾಗಿದೆ. ನಿಮಗೆ ಡಾನ್ಸ್ ಬರುತ್ತಾ?
ನೀವು ಸೂಪರ್ ಮಾಮ್ ಆಗಬೇಕಾ, ಹಾಗಿದ್ರೆ ಯಾಕೆ ತಡ? ಕೂಡಲೇ ಈ ಷೋನಲ್ಲಿ ಭಾಗವಹಿಸಿ ಎನ್ನುವ ಹೊಸ ಪ್ರೊಮೋ ಒಂದನ್ನು ವಾಹಿನಿ ಶೇರ್ ಮಾಡಿಕೊಂಡಿದೆ.
56
ಆಡಿಷನ್ ಯಾವಾಗ?
ಈ ಕುರಿತು ಆಡಿಷನ್ ಆರಂಭವಾಗಲಿದೆ. ಜುಲೈ 24ರಿಂದ ಆಡಿಷನ್ ಶುರು ಆಗಲಿದ್ದು, ಇದರಲ್ಲಿ ಭಾಗವಹಿಸಲು ಬರುವವರು ಭಾಗವಹಿಸುವಂತೆ ವಾಹಿನಿ ಕೋರಿಕೊಂಡಿದೆ.
66
ಲಕ್ ನಿಮ್ಮದಾಗಬಹುದು
ಇದರಲ್ಲಿ ಭಾಗವಹಿಸುವ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ. ಅದೃಷ್ಟ ಯಾವಾಗ ಯಾರ ಕೈ ಹಿಡಿಯುತ್ತದೆ ಎಂದು ತಿಳಿಯುವುದಿಲ್ಲ. ಆದ್ದರಿಂದ ಟ್ರೈ ಮಾಡಿ, ಲಕ್ ನೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.