ನಮ್ಮ ಮನೇಲಿ ದೇವರ ರೂಮ್‌ ಇದೆ, ಲವ್‌ ಜಿಹಾದ್‌ ಮಾಡ್ತಿಲ್ಲ: ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌

Published : Jul 14, 2026, 03:33 PM IST

Kannada Youtuber Sam Sameer Neha Gupta Wedding: ಕನ್ನಡ ಯುಟ್ಯೂಬರ್ ಸ್ಯಾಮ್‌ ಸಮೀರ್‌ ಅವರು ನೇಹಾ ಗುಪ್ತ ಜೊತೆ ಮದುವೆಯಾಗಲು ರೆಡಿಯಾಗಿದ್ದಾರೆ. ಈಗಾಗಲೇ ಹೆಣ್ಣು ನೋಡುವ ಶಾಸ್ತ್ರ ಕೂಡ ಆಗಿದೆ. ಈಗ ಇವರಿಬ್ಬರು ಸೇರಿಕೊಂಡು ಒಂದು Vlog ಮಾಡಿ ಕೆಲ ಮಾತುಗಳಿಗೆ ಉತ್ತರ ಕೊಟ್ಟಿದ್ದಾರೆ.

PREV
14
ಲವ್‌ ಜಿಹಾದ್‌ ಮಾಡ್ತಿದ್ದಾರೆ ಎನ್ನೋ ಆರೋಪ

ಸ್ಯಾಮ್‌ ಸಮೀರ್‌ ಅವರು ಮುಸ್ಲಿಂ, ನೇಹಾ ಹಿಂದು. ಅದರಲ್ಲಿಯೂ ನೇಹಾ ಕುಟುಂಬವೇ ಸಸ್ಯಾಹಾರಿ. ಇವರಿಬ್ಬರು ಲವ್‌ ಮಾಡಿ ಮದುವೆ ಆಗಲು ರೆಡಿಯಾಗಿದ್ದಾರೆ. ಎರಡೂ ಕುಟುಂಬದವರು ಈ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ಸ್ಯಾಮ್‌ ಸಮೀರ್‌ ಅವರು ಲವ್‌ ಜಿಹಾದ್‌ ಮಾಡುತ್ತಿದ್ದಾರೆ ಎಂದು ಕೆಲವರು ಹೇಳಿದ್ದಾರಂತೆ. ಇದಕ್ಕೆ ಸ್ಯಾಮ್‌ ಉತ್ತರ ಕೊಟ್ಟಿದ್ದಾರೆ.

24
ಉತ್ತರ ಕೊಟ್ಟ ಜೋಡಿ

ಸ್ಯಾಮ್‌ ಸಮೀರ್‌ ತಾಯಿ ಮುಸ್ಲಿ, ತಂದೆ ಹಿಂದು. ಆದರೆ ಸ್ಯಾಮ್‌ ಸಮೀರ್‌ ಅವರು ಲವ್‌ ಜಿಹಾದ್‌ ಮಾಡುತ್ತಿದ್ದಾರೆ ಎಂದು ಆರೋಪ ಹೊರಿಸಲಾಗಿತ್ತು. ಇದಕ್ಕೆ ನೇಹಾ ಹಾಗೂ ಸ್ಯಾಮ್‌ ಸಮೀರ್‌ ಅವರು ವಿಡಿಯೋ ಮೂಲಕ ಉತ್ತರ ಕೊಟ್ಟಿದ್ದಾರೆ.

34
ಸ್ಯಾಮ್‌ ಸಮೀರ್‌ ಹೇಳಿದ್ದೇನು?

"ನಮ್ಮ ಮನೆಯಲ್ಲಿ ದೇವರ ಪೂಜೆ ರೂಮ್ ಇದೆ, ನಾವು ದಿನಾ ಪೂಜೆ ಮಾಡುತ್ತೇವೆ. ನನ್ನ ತಂದೆ ಹಿಂದೂ. ನಾನು ಕಳೆದ 4 ವರ್ಷಗಳಿಂದ ಸತತವಾಗಿ ವ್ಲಾಗ್ಸ್ ಮಾಡುತ್ತಾ ಜನರ ಮುಂದೆ ಬದುಕುತ್ತಿದ್ದೇನೆ. ನನ್ನ ಇತಿಹಾಸ ಎಲ್ಲರಿಗೂ ಗೊತ್ತಿದೆ. ಆದರೂ ಯಾರೋ ಒಬ್ಬರು ಕೇವಲ ಪ್ರಚಾರಕ್ಕಾಗಿ ನನ್ನ ಮೇಲೆ ಇಂತಹ ಕಠಿಣ ಟ್ಯಾಗ್ ಹಾಕಿದಾಗ ನನಗೆ ತುಂಬಾ ನೋವಾಯಿತು" ಎಂದು ಸ್ಯಾಮ್‌ ಸಮೀರ್‌ ಹೇಳಿದ್ದಾರೆ.

44
ಯಾರೋ ಹೇಳಿದ್ದು ಕಿವಿಗೊಡಬೇಡಿ

"ನಾನು ನೇಹಾಳನ್ನು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಳ್ಳುತ್ತೇನೆ. ಅವರು ಹೆತ್ತ ಮಗಳ ಜೀವನವನ್ನು ನಾನು ಅತ್ಯಂತ ಸುಂದರವಾಗಿಸುತ್ತೇನೆ. ಯಾರೋ ಮೂರನೇ ವ್ಯಕ್ತಿ ಹೇಳುವ ಮಾತುಗಳಿಗೆ ಕಿವಿಗೊಡಬೇಡಿ" ಎಂದು ಮನವಿ ಮಾಡಿದ್ದಾರೆ ಎಂದು ಸ್ಯಾಮ್‌ ಸಮೀರ್‌ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories