Bigg Boss 13 ಬಿಗ್​ ಆಫರ್​: ನೀವೂ ಇದರಲ್ಲಿ ಭಾಗವಹಿಸ್ಬೋದು- ಮಾಡಬೇಕಾದದ್ದು ಏನು? ಡಿಟೇಲ್ಸ್​ ಇಲ್ಲಿದೆ

Published : Jun 07, 2026, 12:15 PM IST

ಕಲರ್ಸ್ ವಾಹಿನಿಯು ಬಿಗ್​ಬಾಸ್​ 13ನೇ ಸೀಸನ್​ ಅನ್ನು ಘೋಷಿಸಿದ್ದು, ಈ ಬಾರಿ ಸಾಮಾನ್ಯ ಜನರಿಗೂ ಭಾಗವಹಿಸಲು ಅವಕಾಶ ನೀಡಿದೆ. ಆಸಕ್ತರು ತಮ್ಮ ಪರಿಚಯದ ವಿಡಿಯೋವನ್ನು ಕಳುಹಿಸುವ ಮೂಲಕ ಆಡಿಷನ್​ನಲ್ಲಿ ಪಾಲ್ಗೊಳ್ಳಬಹುದಾಗಿದೆ. ಈ ಹಿಂದೆ 5ನೇ ಸೀಸನ್​ನಲ್ಲಿಯೂ ಸಾಮಾನ್ಯ ವ್ಯಕ್ತಿಗೆ ಅವಕಾಶ ನೀಡಲಾಗಿತ್ತು.

PREV
15
ಬಿಗ್​ಬಾಸ್​ 13 ಹವಾ

ಬಿಗ್​ಬಾಸ್​ 12ರ ಹವಾ ಸ್ವಲ್ಪ ತಣ್ಣಗಾಗುತ್ತಾ ಬರುವಾಗಲೇ ಕಲರ್ಸ್ ವಾಹಿನಿ ಬಿಗ್​ಬಾಸ್​ 13ರನ್ನು ಘೋಷಣೆ ಮಾಡಿದೆ. ಈ ಬಾರಿ ಅವಧಿಗಿಂತಲೂ ಮುನ್ನವೇ ಷೋ ಆರಂಭವಾಗಲಿದೆ ಎಂದು ಇದಾಗಲೇ ಪ್ರೊಮೋ ಕೂಡ ರಿಲೀಸ್​​ ಮಾಡಿದೆ. ಇದರ ಜೊತೆಗೆನೇ ಸಾಮಾನ್ಯ ಜನರಿಗೂ ಬಿಗ್​ಬಾಸ್​ ಬಿಗ್​ ಆಫರ್​ ಕೊಟ್ಟಿದೆ.

25
ನಿಮಗೂ ಭಾಗವಹಿಸಲು ಅವಕಾಶ

ನೀವೂ ಕೂಡ ಇದರಲ್ಲಿ ಭಾಗವಹಿಸಲು ಅವಕಾಶವನ್ನು ಬಿಗ್​ಬಾಸ್​​ (Bigg Boss Kannada Season 13) ಈ ಬಾರಿ ಕಲ್ಪಿಸಿದೆ. ಇದರ ಬಗ್ಗೆ ವಾಹಿನಿ ಘೋಷಣೆಯನ್ನೂ ಮಾಡಿದೆ. ಬಿಗ್​ಬಾಸ್ ಎಂದರೆ ಸಾಮಾನ್ಯವಾಗಿ ಸೆಲೆಬ್ರಿಟಿಗಳಿಗೆ ಸೀಮಿತ. ಅದರಲ್ಲಿಯೂ ಕಾಂಟ್ರವರ್ಸಿ ಮಾಡಿಕೊಂಡವರಿಗೆ ಮೊದಲ ಆದ್ಯತೆ. ಇದನ್ನು ಹೊರತುಪಡಿಸಿ ಈ ಬಾರಿ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಲಿರುವುದಾಗಿ ಹೇಳಲಾಗಿದೆ.

35
ಕೈ ತಟ್ಟಿ ಹುರಿದುಂಬಿಸಿದ್ದು ಸಾಕು

‘ಕೈ ತಟ್ಟಿ ಹುರಿದುಂಬಿಸಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋಕೆ ರೆಡಿ ತಾನೆ?’ ಎಂದು ‘ಕಲರ್ಸ್ ಕನ್ನಡ’ ವಾಹಿನಿ ಕೇಳುತ್ತಿದೆ. ‘ನಮಸ್ತೆ ಕರ್ನಾಟಕ.. ಅವಕಾಶ ಸಿಗದ ಆಸೆಗಳಿಗೆ ಅರ್ಥವೇ ಇರೋದಿಲ್ಲ. ಈ ಬಾರಿ ನಿಮ್ಮಂಥ ಸಾಮಾನ್ಯರ ಆಸೆಗಳಿಗೆ ರೆಕ್ಕೆ ಕಟ್ಟುವ ಅವಕಾಶವನ್ನು ನೀಡುತ್ತಿದ್ದಾರೆ ಬಿಗ್ ಬಾಸ್. ಕೈ ತಟ್ಟಿ ಪ್ರೋತ್ಸಾಹ ನೀಡಿದ್ದು ಸಾಕು. ತೊಡೆ ತಟ್ಟಿ ಅಖಾಡಕ್ಕೆ ಇಳಿಯೋದಕ್ಕೆ ಸಿದ್ಧರಾಗಿದ್ದೀರಾ? ನಿಮಗೆ ಬಿಗ್ ಬಾಸ್ ಮನೆಗೆ ಸ್ವಾಗತ’ ಎಂದು ಪ್ರೋಮೋ ಮೂಲಕ ಜನಸಾಮಾನ್ಯರಿಗೆ ಕರೆ ನೀಡಲಾಗಿದೆ.

45
ಇದಕ್ಕಾಗಿ ಮಾಡಬೇಕಾದದ್ದು ಏನು?

ಇದಕ್ಕಾಗಿ ಆಸಕ್ತರು ಆಡಿಷನ್​ನಲ್ಲಿ ಭಾಗವಹಿಸಬೇಕಿದೆ. ಯಾವ ರೀತಿ ಆಡಿಷನ್​ನಲ್ಲಿ ಭಾಗವಹಿಸಬೇಕು ಎಂಬುದನ್ನು ವಾಹಿನಿ ತಿಳಿಸಿದೆ. ಅದಕ್ಕಾಗಿ ನೀವು ಮೂರು ನಿಮಿಷಗಳ ವಿಡಿಯೋ ಮಾಡಬೇಕು. ಅದರಲ್ಲಿ ನೀವು ಬಿಗ್​ಬಾಸ್ ಮನೆಯಲ್ಲಿ ನೀವು ಏಕೆ ಇರಬೇಕು ಎನ್ನುವುದನ್ನು ತಿಳಿಸಬೇಕು. ಇದರಲ್ಲಿ ತಮ್ಮ ಹೆಸರು, ವಿಳಾಸ, ವಯಸ್ಸು ಎಲ್ಲಾ ಡಿಟೇಲ್ಸ್​ ಕೊಟ್ಟು ವಿಡಿಯೋ ಮಾಡಿ colorskannada.jiostar.com ಗೆ ಕಳುಹಿಸಬೇಕು.

55
ಹಿಂದೆಯೂ ಅವಕಾಶ ಸಿಕ್ಕಿತ್ತು

ಇದಕ್ಕೂ ಮುನ್ನ 2017ರಲ್ಲಿ ನಡೆದಿದ್ದ 5ನೇ ಸೀಸನ್‌ನಲ್ಲಿ ಕಾಮನ್‌ಮ್ಯಾನ್‌ಗೆ ಅವಕಾಶ ನೀಡಲಾಗಿತ್ತು. ಮೂಲತಃ ಸೇಲ್ಸ್‌ಮನ್ ದಿವಾಕರ್ ಫಿನಾಲೆವರೆಗೂ ಹೋಗಿ ಗಮನ ಸೆಳೆದಿದ್ದರು. ಅಂತಿಮವಾಗಿ ರನ್ನರ್ ಅಪ್ ಆಗಿ ಸುದ್ದಿ ಆಗಿದ್ದರು. ಬಳಿಕ 'ರೇಸ್' ಎಂಬ ಕನ್ನಡ ಸಿನಿಮಾದಲ್ಲಿ ಕೂಡ ದಿವಾಕರ್ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories