ಅಮೃತಧಾರೆ (Amruthadhaare) ಸೀರಿಯಲ್ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಭೂಮಿಕಾಳನ್ನು ಐದು ವರ್ಷ ಹುಡುಕಿ ಹುಡುಕಿ ಕೊನೆಗೂ ಗೌತಮ್ಗೆ ಭೂಮಿಕಾ ಸಿಕ್ಕಿದ್ದಳು. ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಅಂದುಕೊಳ್ಳಲಾಗಿತ್ತು. ಭೂಮಿಕಾ, ಗೌತಮ್ ಮೇಲೆ ಕೋಪ ಮಾಡಿಕೊಂಡಿದ್ದರೂ, ಆಕೆ ಕೋಪ ತಣಿಸಿಕೊಂಡು ಮತ್ತೆ ಗೌತಮ್ ಬಳಿ ಹೋಗುತ್ತಾಳೆ ಎನ್ನುವ ಎಲ್ಲರ ನಿರೀಕ್ಷೆ ಹುಸಿಯಾಗಿದೆ. ಅಪ್ಪ-ಮಗ ಕೂಡ ಒಂದಾಗಿದ್ದರು. ಆದರೆ ಇದೀಗ ಮತ್ತೆ ಎಲ್ಲರೂ ದೂರ ದೂರ!
26
ಒಂದಾಗೋ ಹೊತ್ತಲ್ಲಿ ಮನೆ ಬದಲು
ಟೀಚರ್ ಭೂಮಿಕಾ ತನ್ನ ಮಗನಿಗೆ ಬುದ್ಧಿ ಹೇಳಿದಳು ಎನ್ನುವ ಕಾರಣಕ್ಕೆ ಎಂಎಲ್ಎ, ಆಕೆಯ ಮಗ ಆಕಾಶ್ನನ್ನು ಕಿಡ್ನ್ಯಾಪ್ ಮಾಡಿಸಿದ್ದ. ಆದರೆ ಕೊನೆಗೆ ಗೌತಮ್ಗೆ ವಿಷಯ ತಿಳಿದು ರೌಡಿಗಳ ಜೊತೆ ಹೊಡೆದಾಡಿ ಆಕಾಶ್ನನ್ನು ಬಿಡಿಸಿಕೊಂಡು ಬಂದಿದ್ದ. ಇದು ಭೂಮಿಕಾಗೆ ತಿಳಿದು, ಗೌತಮ್ ಮೇಲೆ ಪ್ರೀತಿ ಹುಟ್ಟುತ್ತದೆ ಎಂದೇ ಅಂದುಕೊಳ್ಳಲಾಗಿತ್ತು. ಆದರೆ ರೌಡಿಗಳು ಭೂಮಿಕಾ ಮನೆಗೆ ಬಂದು ತೊಂದರೆ ಕೊಟ್ಟಿದ್ದರಿಂದ ಅವಳು ಮನೆಯನ್ನೇ ಬಿಟ್ಟು ಹೋಗಿಬಿಟ್ಟಿದ್ದಾಳೆ.
36
ಬೆಂಗಳೂರು ಸೇರಿದ ಭೂಮಿಕಾ
ಮತ್ತೆ ಬೆಂಗಳೂರು ಸೇರಿದ್ದಾಳೆ. ಅಲ್ಲಿ ಅವಳಿಗೆ ಹೆಡ್ಮಿಸ್ ಪೋಸ್ಟ್ ಸಿಕ್ಕಿದೆ. ಆದರೆ ಅದೇ ಇನ್ನೊಂದೆಡೆ, ಗೌತಮ್ ಎಂಎಲ್ಎಗೆ ಬುದ್ಧಿ ಕಲಿಸುವ ಪಣ ತೊಟ್ಟಿದ್ದಾನೆ. ನಾನು MLA ಎನ್ನುವ ಅಹಂನಲ್ಲಿ ಗೌತಮ್ ಮೇಲೆ ರೇಗಿದ್ದ ಆತ. ಕಮಿಷನರ್ಗೆ ಕಾಲ್ ಮಾಡಿ ನಿನಗೆ ಗತಿ ಕಾಣಿಸ್ತೇನೆ ಎಂದ ಎಂಎಲ್ಎ.
ಆದರೆ ಗೌತಮ್ ತಾನೇ ಖುದ್ದು ಕಮಿಷನರ್ಗೆ ಕಾಲ್ ಮಾಡಿ ತಾನು ಗೌತಮ್ ದಿವಾನ್ ಮಾತನಾಡುವುದು ಎಂದು ಹೇಳಿದಾಗ ಕಮಿಷನರ್ ಎಂಎಲ್ಎಗೆ ಆವಾಜ್ ಹಾಕಿ, ನಿನ್ನನ್ನು ಎಂಎಲ್ಎ ಪೋಸ್ಟ್ನಿಂದ ಕಿತ್ತು ಹಾಕಿದ್ದೇನೆ. ನಾಳೆನೇ ಬಂದು ರಿಸೈನ್ ಮಾಡು ಎನ್ನುತ್ತಾರೆ. ಆದರೆ ಇದು ನೋಡಲು ಚೆನ್ನಾಗಿದೆ. ಆದರೆ ಎಂಎಲ್ಎ ಅನ್ನು ಪೋಸ್ಟ್ನಿಂದ ಕಿತ್ತು ಹಾಕಲು ಕಮಿಷನರ್ಗೆ ಅಧಿಕಾರ ಇದ್ಯಾ? ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.
56
ಸೀರಿಯಲ್ನಲ್ಲಿ ಎಡವಟ್ಟು?
ಗೌತಮ್ನನ್ನು ಹೀರೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ್ರಾ ನಿರ್ದೇಶಕರು ಎನ್ನುತ್ತಿದ್ದಾರೆ ನೆಟ್ಟಿಗರು. ಕಾನೂನಿನ ಪ್ರಕಾರ ಎಂಎಲ್ಎ ಮೇಲೆ ಕ್ರಮ ಜರುಗಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ. ಆದರೆ ಇಲ್ಲಿ ಕಮಿಷನರ್ಗೆ ಅಧಿಕಾರ ಕೊಟ್ಟವರು ಯಾರು? ಗೌತಮ್ನನ್ನು ಹೀರೋ ಮಾಡಿದ್ದು ಸರಿಯೇ, ಆದರೆ ಈ ಎಡವಟ್ಟು ಯಾಕೆ ಎಂದು ಪ್ರಶ್ನಿಸುತ್ತಿದ್ದಾರೆ.
66
ಚ್ಯೂಯಿಂಗ್ ಗಮ್ನಂತೆ ಸಾಗತ್ತಾ ಸೀರಿಯಲ್?
ಒಟ್ಟಿನಲ್ಲಿ, ಇದೊಂದು ಸೀರಿಯಲ್ ಅಷ್ಟೆ. ಸೀರಿಯಲ್ನಲ್ಲಿ ಏನು ಬೇಕಾದ್ರೂ ನಡೆಯುತ್ತೆ ಎಂದು ಕೆಲವರು ಹೇಳಿದ್ರೆ, ಅದು ನಿಜ. ಆದರೆ ಇಂಥ ಎಡವಟ್ಟು ಮಾಡಬಾರದು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಇನ್ನು ಸೀರಿಯಲ್ ಕಥೆಗೆ ಬರೋದಾದ್ರೆ ಇನ್ನು ಚ್ಯೂಯಿಂಗ್ ಗಮ್ನಂತೆ ಅಮೃತಧಾರೆ ಎಳೆಯುತ್ತಿರುವುದು ಯಾಕೋ ವೀಕ್ಷಕರಿಗೆ ಬೇಸರ ತರಿಸುವಂತಿದೆ. ಭೂಮಿಕಾಳದ್ದು ಅತಿಯಾಯ್ತು ಎಂದು ಹೇಳುತ್ತಿದ್ದಾರೆ. ಇಬ್ಬರೂ ಒಂದಾಗಿ ಶಕುಂತಲಾ, ಜೈದೇವ್ಗೆ ಬುದ್ಧಿ ಕಲಿಸ್ತಾರೆ ಎಂದುಕೊಂಡ್ರೆ ಮತ್ತೆ ಮನೆ ಚೇಂಜ್ ಮಾಡಿದ್ದಾಳೆ ಅವಳು. ಇನ್ನೆಷ್ಟು ವರ್ಷ ಹುಡುಕಬೇಕೋ ಗೌತಮ್ ಎನ್ನುತ್ತಿದ್ದಾರೆ.