Comedy Khiladigalu Vani Gowda: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ದೊಡ್ಡ ಮಟ್ಟದ ನೇಮ್ ಮತ್ತು ಫೇಮ್ ಗಳಿಸಿದ ವಾಣಿ ಗೌಡ ಇತ್ತೀಚೆಗೆ ಧಾರಾವಾಹಿಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅವರೇ ಹಂಚಿಕೊಂಡ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
ಧಾರಾವಾಹಿಗಳಲ್ಲಿ ಯಾಕೆ ಕಾಣಿಸುತ್ತಿಲ್ಲ? ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಮೂಲಕ ಅಪಾರ ಜನಪ್ರಿಯತೆ ಗಳಿಸಿ, ಮನೆಮಾತಾಗಿದ್ದ ಪ್ರತಿಭಾನ್ವಿತ ಕಲಾವಿದೆ ವಾಣಿ ಗೌಡ ಧಾರಾವಾಹಿಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ಅಭಿಮಾನಿಗಳಲ್ಲಿ ಮೂಡಿದ್ದ ಕುತೂಹಲಕ್ಕೆ ಸ್ವತಃ ನಟಿಯೇ ಸಂದರ್ಶನವೊಂದರಲ್ಲಿ ಉತ್ತರ ನೀಡಿದ್ದಾರೆ.
25
ಸಮಯದ ಹೊಂದಾಣಿಕೆ ಕಷ್ಟದ ಕೆಲಸ
ಸಮಯದ ಹೊಂದಾಣಿಕೆ ಕಷ್ಟದ ಕೆಲಸ ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ, "ಸೀರಿಯಲ್‌ನಲ್ಲಿ ಯಾಕೆ ನಟಿಸುತ್ತಿಲ್ಲ ಎನ್ನುವುದಕ್ಕೆ ದೊಡ್ಡ ಕಾರಣವೇನೂ ಇಲ್ಲ. ನಿಜ ಹೇಳಬೇಕೆಂದರೆ ನಾನು ಸ್ವಲ್ಪ ಸೋಮಾರಿ. ಸೀರಿಯಲ್ ಚಿತ್ರೀಕರಣ ಎಂದರೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಕೆಲಸ ಇರುತ್ತದೆ. ಅಷ್ಟು ಸುದೀರ್ಘ ಸಮಯವನ್ನು ಪ್ರತಿದಿನ ನೀಡುವುದು ನನಗೆ ಸ್ವಲ್ಪ ಕಷ್ಟದ ಕೆಲಸ ಎನಿಸುತ್ತದೆ" ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.
35
ಪಿಎ ಕ್ಯಾರೆಕ್ಟರ್ ಸಿಗುತ್ತೆ
ಪಿಎ ಕ್ಯಾರೆಕ್ಟರ್ ಸಿಗುತ್ತೆ ಕೇವಲ ಸಮಯದ ಸಮಸ್ಯೆ ಮಾತ್ರವಲ್ಲದೆ, ಸಿಗುತ್ತಿರುವ ಪಾತ್ರಗಳ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. "ಕಾಮಿಡಿಯನ್ ಎಂದು ಗುರುತಿಸಿರುವುದರಿಂದ ಸೀರಿಯಲ್‌ಗಳಲ್ಲಿ ಹೆಚ್ಚಾಗಿ ಗೆ ಪಿಎ (Personal Assistant) ಆಗಿಯೋ ಅಥವಾ ಸಣ್ಣಪುಟ್ಟ ಕಾಮಿಡಿ ಪಾತ್ರಗಳಿಗೆ ಆಫರ್ ಬರುತ್ತಾ ಇರುತ್ತೆ. ಅಂತಹ ಪಾತ್ರಗಳಲ್ಲಿ ನಟನೆ ಪ್ರದರ್ಶಿಸಲು ಹೆಚ್ಚಿನ ಅವಕಾಶ ಇರುವುದಿಲ್ಲ. ಅಲ್ಲದೆ ಆ ಪಾತ್ರಗಳು ಕಥೆಯ ಉದ್ದಕ್ಕೂ ಇರುವುದಿಲ್ಲ ಅಥವಾ ವರ್ಷಪೂರ್ತಿ ಟ್ರಾವೆಲ್ ಆಗುವುದಿಲ್ಲ" ಎಂಬುದು ಅವರ ಅಭಿಪ್ರಾಯ.
ನಟನೆಗೆ ಒತ್ತು ನೀಡುವ ಪಾತ್ರ ಸದ್ಯಕ್ಕೆ ತಮಗೆ ಸರಿಹೊಂದುವ ಪಾತ್ರಕ್ಕಾಗಿ ಕಾಯುತ್ತಿರುವ ಅವರು, "ನಾನು ಈಗ ಯಾವುದಾದರೂ ಉತ್ತಮ ಲೀಡ್ ರೋಲ್ ಅಥವಾ ಕಥೆಗೆ ಪೂರಕವಾದ, ಅರ್ಥಪೂರ್ಣವಾದ ಪಾತ್ರಕ್ಕಾಗಿ ಕಾಯುತ್ತಿದ್ದೇನೆ. ಸುಮ್ಮನೆ ಬಂದು ಹೋಗುವ ಪಾತ್ರಗಳಿಗಿಂತ ನಟನೆಗೆ ಒತ್ತು ನೀಡುವ ಪಾತ್ರ ಸಿಕ್ಕರೆ ಖಂಡಿತ ಮರಳುತ್ತೇನೆ" ಎಂದು ಹೇಳಿದ್ದಾರೆ.
55
ಅಭಿಮಾನಿಗಳ ಆಶಯ
ಅಭಿಮಾನಿಗಳ ಆಶಯ ಒಟ್ಟಿನಲ್ಲಿ, ಕೇವಲ ಸಂಖ್ಯೆಗಿಂತ ಗುಣಮಟ್ಟದ ಪಾತ್ರಗಳಿಗೆ ಆದ್ಯತೆ ನೀಡುತ್ತಿರುವ ವಾಣಿ ಗೌಡ, ಶೀಘ್ರದಲ್ಲೇ ಒಂದು ಮನ್ನಣೆ ಸಿಗುವಂತಹ ಪಾತ್ರದ ಮೂಲಕ ತೆರೆಯ ಮೇಲೆ ಕಾಣಿಸಿಕೊಳ್ಳಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.