ಅವಾಂತರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅಂಜಲಿ ಸುಧಾಕರ್ 90ರ ದಶಕದಲ್ಲಿ ಬಹು ಬೇಡಿಕೆಯ ನಟಿ. ಈಗ ಅಂಜಲಿ ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ಅಂಜಲಿ ಸುಧಾಕರ್ ತಾಯಿ ಪಾತ್ರದ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಸರಳ ನಟನೆಯಿಂದ ಜನರ ಗಮನ ಸೆಳೆದಿದ್ದಾರೆ.
ರಾಮಾಚಾರಿ ಸೀರಿಯಲ್ ಜೊತೆಯೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಸಿದ್ಧೇಗೌಡ್ರು ತಾಯಿ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಕಡಿಮೆ ಕಾಣಿಸುತ್ತಿದ್ದರೂ ಜನರಿಗೆ ಕನೆಕ್ಟ್ ಆಗಿದ್ದಾರೆ.
ಸದ್ಯ ಶೂಟಿಂಗ್ ಬ್ರೇಕ್ ತೆಗೆದುಕೊಂಡು ಅಂಜಲಿ ಸುಧಾಕರ್ ತಮ್ಮ ಫ್ಯಾಮಿಲಿ ಮತ್ತು ಸ್ನೇಹಿತರ ಜೊತೆ ಕಾಶಿ ವಿಶ್ವಾನಾಥ್ ದೇವಸ್ಥಾನಕ್ಕೆ ಭೇಟಿ ನೀಡಿರುವ ಫೋಟೋವನ್ನು ಸಮಾಜಿಕ ಜಾಲತಾಣದಲ್ಲಿ ಅಪ್ಲೊಡ್ ಮಾಡಿದ್ದಾರೆ.
ಹಳದಿ ಸೀರೆ, ಹಸಿರು ಬ್ಲೌಸ್ ಧರಿಸಿದ ಅಂಜಲಿ ಕಾಶಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸಂಜಲಿ ಫೋಟೋಗಳಿಗೆ ಸಾಕಷ್ಟು ಪಾಸಿಟವ್ ಕಾಮೆಂಟ್‌ಗಳು ಹರಿದು ಬರುತ್ತಿದೆ.
ಸಂತೂರ್ ಮಮ್ಮಿ, ನಿಮಗೆ ವಯಸ್ಸಾಗಿಲ್ಲ ಈಗಲೂ ನಾಯಕಿಯಾಗಿ ಮಿಂಚಬಹುದು, ನಿಮಗೆ 30 ವರ್ಷ ಇರಬಹುದು ಅಷ್ಟೇ....ಹೆಚ್ಚೇನು ಇಲ್ಲ ಬಿಡಿ ಎಂದು ಸಾಕಷ್ಟು ಜನ ಅಂಜಲಿ ಬ್ಯೂಟಿಯನ್ನು ಮೆಚ್ಚಿ ಕೊಂಡಾಡಿದ್ದಾರೆ.
ಕೆಲವು ದಿನಗಳ ಹಿಂದೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ನಡೆದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಅಂಜಲಿ ಅವರಿಗೆ ಮನೆ ಮೆಚ್ಚಿದ ಅಮ್ಮ ಜಾನಕಿ ಎಂದು ಅವಾರ್ಡ್ ಪಡೆದುಕೊಂಡಿದ್ದಾರೆ.