ರಾಣಾ ದಗ್ಗುಭಾಟಿ ಜೊತೆ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ… ಫ್ಯಾನ್ ಆಗ್ಬಿಟ್ಟೆ ಎಂದ ನಟಿ

First Published | Sep 28, 2024, 7:32 AM IST

ಕನ್ನಡ ಕಿರುತೆರೆ ನಟಿ ಕಾವ್ಯಾ ಶಾಸ್ತ್ರಿ ತೆಲುಗು ನಟ ರಾಣಾ ದಗ್ಗುಭಾಟಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಇವರಿಬ್ಬರು ಜೊತೆಯಾಗಿ ಕಾಣಿಸ್ಕೊಂಡಿರೋದು ಯಾಕೆ? 
 

ಕನ್ನಡ ಕಿರುತೆರೆಯಲ್ಲಿ ನಟಿಯಾಗಿ, ನಿರೂಪಕಿಯಾಗಿ ಹೆಸರು ಮಾಡಿ, ಸ್ಯಾಂಡಲ್ ವುಡ್ ನಲ್ಲೂ ಹೆಸರು ಮಾಡಿರೋ ನಟಿ ಕಾವ್ಯಾ ಶಾಸ್ತ್ರಿ (Kavya Shastry). ನಿರೂಪಕಿ, ನಟಿಯಾಗಿ ಸೈ ಎನಿಸಿಕೊಂಡಿರೋ ನಟಿ ಸದ್ಯ ದುಬೈನಲ್ಲಿ ಐಫಾ ಉತ್ಸವದಲ್ಲಿ ಭಾಗಿಯಾಗಲು ತೆರಳಿದ್ದಾರೆ. 
 

ದುಬೈನಲ್ಲಿ ತೆಗೆಸಿಕೊಂಡಿರುವ ಸುಂದರವಾದ ಫೋಟೊಗಳನ್ನು ಕಾವ್ಯಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ತೆಲುಗಿನ ಸ್ಟಾರ್ ನಟ ರಾಣಾ ದಗ್ಗುಭಾಟಿ (Rana Daggubati) ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. 
 

Tap to resize

ರಾಣಾ ದಗ್ಗುಭಾಟಿ ಜೊತೆಗಿನ ಫೋಟೊಗಳನ್ನು ಹಂಚಿಕೊಂಡಿರುವ ಕಾವ್ಯಾ ಮೊದಲಿನಿಂದಲೂ ನನಗೆ ಒಬ್ಬ ನಟನಾಗಿ ರಾಣಾ ನಟನೆಯನ್ನು ನಾನು ಇಷ್ಟ ಪಡ್ತಿದೆ. ಆದ್ರೆ ಇವತ್ತಿನಿಂದ ಈ ನಟನ ಅಭಿಮಾನಿಯಾಗ್ಬಿಟ್ಟೆ ಅಂದಿದ್ದಾರೆ. 
 

ರಾಣಾ ಭೇಟಿಗೂ ಮುನ್ನ ಹೇಗಿರ್ತಾರೋ? ಸರಿಯಾಗಿ ಮಾತನಾಡಿಸ್ತಾರೋ ಇಲ್ವೋ ಅನ್ನೋ ಭಯ ಇತ್ತು, ಆದ್ರೆ ರಾಣಾ ತುಂಬಾನೆ ಸಿಂಪಲ್, ಮತ್ತು ಹಂಬಲ್ ಪರ್ಸನ್. ಅವರನ್ನ ಭೇಟಿಯಾಗಿ, ಅವರ ಜೊತೆ ಮಾತನಾಡಿ ತುಂಬಾನೆ ಖುಷಿಯಾಯ್ತು ಎಂದಿದ್ದಾರೆ ನಟಿ. 
 

ಐಐಎಫ್’ಎ ಉತ್ಸವ (IIFA Utsavam 2024) ಮೂರು ದಿನಗಳ ಕಾಲ ಅಂದ್ರೆ ಸೆಪ್ಟೆಂಬರ್ 27 ರಿಂದ 29ರವರೆಗೆ ಅಬುಧಾಬಿಯ ಯಾಸ್ ದ್ವೀಪದಲ್ಲಿ ನಡೆಯಲಿದೆ. ಇದು ಹಿಂದಿ, ಕನ್ನಡ, ತೆಲುಗು ಮತ್ತು ಮಲಯಾಲಂ ಸಿನಿಮಾ ಇಂಡಷ್ಟ್ರಿ ಜೊತೆಯಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. 
 

ಇನ್ನು ಕಾವ್ಯಾ ಶಾಸ್ತ್ರಿ ಬಗ್ಗೆ ಹೇಳೋದಾದ್ರೆ ದುನಿಯಾ ವಿಜಯ್ (Duniya Vijay) ಜೊತೆ ಚಂಡ ಸಿನಿಮಾದಲ್ಲಿ ನಟಿಸಿರುವ ಕಾವ್ಯಾ, ಬೆರಳೆಣಿಕೆಯಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ನಂತರ ಇವರು ಗುರುತಿಸಿಕೊಂಡದ್ದು ಕಿರುತೆರೆಯಲ್ಲಿ. ಅದರಲ್ಲೂ ಇವರು ಕಿರುತೆರೆ ಜರ್ನಿ ಆರಂಭಿಸಿದ್ದು ತೆಲುಗಿನ ರಾಣಿವಾಸಂ ಮೂಲಕ. 
 

ಝೀಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶುಭವಿವಾಹ ಸೀರಿಯಲ್ (kannada serial) ನಲ್ಲಿ ನಾಯಕಿಯಾಗಿ ನಟಿಸುವ ಮೂಲಕ ಕಾವ್ಯಾ ಜನಪ್ರಿಯತೆ ಪಡೆದರು. ನಂತರ ಹಲವಾರು ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು. ಕನ್ನಡ ಬಿಗ್ ಬಾಸ್ ಸೀಸನ್ 4ರಲ್ಲೂ ಇವರು ಭಾಗವಹಿಸಿದ್ದರು. ಅಲ್ಲದೇ ನಂದಿನಿ, ರಾಧಿಕಾ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸ್ಟಾರ್ ಸುವರ್ಣ ವಾಹಿನಿಯ ಜಾನಕಿ ಸಂಸಾರದಲ್ಲೂ ಕಾವ್ಯಾ ನಟಿಸಿದ್ದರು. 
 

Latest Videos

click me!